ಅಧಿಕಾರಿ-ಜನಪ್ರತಿನಿಧಿ ವಿವಾದ ಬಗೆಹರಿಸುವುದು ನಮ್ಮ ಕೆಲಸವಲ್ಲ
Team Udayavani, Dec 5, 2017, 3:02 PM IST
ಮಂಗಳೂರು: ಸಾರ್ವಜನಿಕರಿಗೆ ತಮ್ಮ ಕೆಲಸ ಕಾರ್ಯಗಳಲ್ಲಿ ಆಗುವ ವಿಳಂಬವನ್ನು ತಪ್ಪಿಸುವುದಕ್ಕಾಗಿ ಲೋಕಾಯುಕ್ತ ಸಂಸ್ಥೆ ಇದೆ. ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವಿನ ವಿವಾದ ಬಗೆಹರಿಸುವುದು ಅದರ ಕೆಲಸವಲ್ಲ ಎಂದು ಕರ್ನಾಟಕ ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ತಮ್ಮ ಉಪಸ್ಥಿತಿಯಲ್ಲಿ ಜರಗಿದ ಸಾರ್ವಜನಿಕ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆ ಆಯುಕ್ತೆ ರೂಪಾ ಶೆಟ್ಟಿ ಅವರ ವಿರುದ್ಧ ಪುರಸಭೆ ಅಧ್ಯಕ್ಷೆ ಜಯಂತಿ ಬಲಾ°ಡ್ ಸಲ್ಲಿಸಿದ ದೂರು ಅರ್ಜಿಯನ್ನು ವಜಾಗೊಳಿಸಿದ ಲೋಕಾ ಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಅವರು, ದೂರುದಾರೆ ಜಯಂತಿ ಅವರು ಬಾರದೆ ವಕೀಲರನ್ನು ಕಳುಹಿಸಿಕೊಟ್ಟ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದೂರು ಸಮ್ಮತವಾಗಿದ್ದರೆ ಸ್ವತಃ ಹಾಜ ರಿರಬೇಕಿತ್ತು. ಮೇಲಾಗಿ ಇದು ಸಾರ್ವಜನಿಕರ ಅಹವಾಲು ಆಲಿಸುವ ಕಾರ್ಯ ಕ್ರಮ; ಪಂಚಾಯತಿ, ರಾಜ ಕೀಯಕ್ಕೆ ವೇದಿಕೆಯಲ್ಲ. ಆಯುಕ್ತರ ವಿರುದ್ಧ ಅಧ್ಯಕ್ಷರೇ ದೂರು ನೀಡುವು ದಾದರೆ ಅವರು ಅಧ್ಯಕ್ಷರಾಗಿರುವುದು ಸರಿಯಲ್ಲ. ಆಯುಕ್ತರು ಕೆಲಸ ಮಾಡದಿದ್ದರೆ ಅವರ ವಿರುದ್ಧ ಕೌನ್ಸಿಲ್‌ನಲ್ಲಿ ನಿರ್ಣಯ ಕೈಗೊಳ್ಳಲಿ. ಅಧಿಕಾರಿಗಳ ವಿರುದ್ಧ ನೀಡುವ ದೂರು ಸುಳ್ಳಾಗಿದ್ದರೆ ಅಂತಹ ದೂರುದಾರರ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ. ಲೋಕಾಯುಕ್ತ ಸಂಸ್ಥೆಯನ್ನು ಲಘುವಾಗಿ ಪರಿಗಣಿಸಬೇಡಿ ಎಂದರು.
ಹಲವು ಗ್ರಾ.ಪಂ.ಗಳ ಪಿಡಿಒಗಳನ್ನು ವರ್ಗಾವಣೆ ಮಾಡಿರುವ ಕುರಿತು ಜಿ.ಪಂ. ಸಿಇಒ ವಿರುದ್ಧ ಹನೀಫ್ ಸಾಹೇಬ್ ಸಲ್ಲಿ ಸಿದ ಅರ್ಜಿಯ ಕುರಿತು ಲೋಕಾ ಯುಕ್ತರು ಆಕ್ರೋಶ ವ್ಯಕ್ತ ಪಡಿಸಿ ದರು. ಜವಾಬ್ದಾರಿಯುತ ಐಎಎಸ್ ಅಧಿಕಾರಿ ಮೇಲೆ ಕ್ಷುಲ್ಲಕವಾಗಿ ಆರೋಪ ಹೊರಿಸಿದರೆ ಆಲಿಸಲಾಗದು. ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳು ಬಹು ಮುಖ್ಯ ಪಾತ್ರವನ್ನು ನಿರ್ವ ಹಿಸು ತ್ತಾರೆ. ಅಧಿಕಾರಿಗಳ ವಿರುದ್ಧ ಯಾವುದೇ ಆಧಾರವಿಲ್ಲದೆ ಆರೋಪ ಮಾಡುವುದು ಸಲ್ಲ. ಕರ್ನಾಟಕ ಪಿಡಿಒಗಳ ವರ್ಗಾವಣೆ ಕುರಿತ ಅರ್ಜಿ ವಿಚಾರಣೆಯ ಅಧಿಕಾರ ಲೋಕಾಯುಕ್ತರಿಗಿಲ್ಲ ಎಂದು ನುಡಿದು ಅರ್ಜಿಯನ್ನು ವಜಾಗೊಳಿಸಿದರು.
ಅಕ್ರಮ ಮರಳುಗಾರಿಕೆ ಕುರಿತು ದೂರಿನ ಬಗ್ಗೆ ವಿಚಾರಣೆ ನಡೆಸಿದ ಲೋಕಾಯುಕ್ತರು ಮರಳುಗಾರಿಕೆ ಮತ್ತು ಅಕ್ರಮ ಕಲ್ಲು ಗಣಿಗಾರಿಕೆ ಕುರಿತು ಕ್ರಮವಾಗಿ ಫೆಬ್ರವರಿ 3ನೇ ಮತ್ತು 2ನೇ ವಾರ ವರದಿ ಸಲ್ಲಿಸು ವಂತೆಯೂ ಸೂಚಿಸಿದರು.
ಡಿಸಿ ಶಶಿಕಾಂತ್ ಸೆಂಥಿಲ್, ಎಡಿಸಿ ಕುಮಾರ್, ಜಿಲ್ಲಾ ಎಸ್ಪಿ ಸುಧೀರ್ ರೆಡ್ಡಿ, ಜಿ.ಪಂ. ಸಿಇಒ ಡಾ| ಎಂ.ಆರ್. ರವಿ ಮತ್ತಿತರರಿದ್ದರು.
77 ಅರ್ಜಿ ಇತ್ಯರ್ಥ
ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಅವರ ನೇತೃತ್ವ ದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ 2.30ಕ್ಕೆ ಸಾರ್ವ ಜನಿಕ ದೂರುಗಳ ವಿಚಾ ರಣೆ ಹಾಗೂ ವಿಲೇವಾರಿ ಸಭೆ ಆರಂಭ ಗೊಂಡಿದ್ದು ರಾತ್ರಿ 8.30ರವರೆಗೂ ಮುಂದುವರಿದಿತ್ತು. ಒಟ್ಟು 77 ಅರ್ಜಿ ಗಳನ್ನು ಇತ್ಯರ್ಥ ಮಾಡಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.