ಕ್ಯೂಎಸ್ ವಿಶ್ವ ರ್‍ಯಾಂಕಿಂಗ್ ಮಣಿಪಾಲ ವಿವಿಗೆ ಅಗ್ರಸ್ಥಾನ
Team Udayavani, Dec 5, 2017, 3:07 PM IST
ಉಡುಪಿ: ಕ್ವಾಕ್ವೇರೆಲ್ಲಿ ಸೈಮಂಡ್ಸ್ (ಕ್ಯೂಎಸ್) ಯೂನಿವರ್ಸಿಟಿಯು ಏಷಿಯಾ ವಲಯ-2018ರಲ್ಲಿ ನಡೆಸಿದ ಜಾಗತಿಕ ಮಟ್ಟದ ರ್‍ಯಾಂಕಿಂಗ್‌ನಲ್ಲಿ ಮಣಿಪಾಲ ಮಾಹೆ ಡೀಮ್ಡ್ ವಿಶ್ವವಿದ್ಯಾನಿಲಯವು ಉತ್ಕೃಷ್ಟ ಸ್ಥಾನಕ್ಕೆ ಏರಿದೆ ಎಂದು ಮಣಿಪಾಲ ಮಾಹೆ ಡೀಮ್ಡ್ ವಿವಿಯ ಕುಲಪತಿ ಡಾ| ಎಚ್. ವಿನೋದ್ ಭಟ್ ಅವರು ಸೋಮವಾರ ವಿವಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜಾಗತಿಕ ಮಟ್ಟದ ಕ್ಯೂಎಸ್ ವಿವಿ ರ್‍ಯಾಂಕಿಂಗ್‌ನಲ್ಲಿ ವಿಶ್ವದ 26,000 ವಿವಿಗಳ ಪೈಕಿ ಮಣಿಪಾಲ ಮಾಹೆಯು 701-750 ರೇಂಜ್‌ನಲ್ಲಿ ಸ್ಥಾನ ಪಡೆದಿದೆ. ಇದರಲ್ಲಿ ಭಾರತದ ಖಾಸಗಿ ವಿವಿಗಳ ಪೈಕಿ ಮಣಿಪಾಲ ಮಾಹೆಯು ಪ್ರಥಮ ಸ್ಥಾನ ಪಡೆದಿದೆ. ಕ್ಯೂಎಸ್ ಏಶಿಯಾ ರ್‍ಯಾಂಕಿಂಗ್‌ನಲ್ಲಿ 200ರಿಂದ 198ಕ್ಕೆ ಜಿಗಿದಿದೆ. ಭಾರತದ ವಿವಿಗಳನ್ನು ಹೋಲಿಸಿದರೆ ಮಣಿಪಾಲ ಮಾಹೆಯು ಮೂರನೇ ಸ್ಥಾನ ಪಡೆದುಕೊಂಡಿದೆ. ಇದರಲ್ಲಿ 11,900 ವಿವಿಗಳು ಭಾಗಿಯಾಗಿದ್ದವು. ಕ್ಯೂಎಸ್ ಬ್ರಿಕ್ಸ್ ರಾಷ್ಟ್ರಗಳ ವಲಯದಲ್ಲಿ ಮಣಿಪಾಲ ಮಾಹೆಯು 119ನೇ ರ್‍ಯಾಂಕಿಂಗ್ ಪಡೆದಿದ್ದು, ಭಾರತದ ಖಾಸಗಿ ವಿವಿಗಳ ಪೈಕಿ 2ನೇ ಸ್ಥಾನ ಕಾಯ್ದುಕೊಂಡಿದೆ. ಇದರಲ್ಲಿ ಒಟ್ಟು 9,000 ವಿವಿಗಳು ಪಾಲ್ಗೊಂಡಿದ್ದವು ಎಂದರು.
ಆಯ್ಕೆಯ ಮಾನದಂಡಗಳು
ಯುನಿವರ್ಸಿಟಿಗಳ ಶೈಕ್ಷಣಿಕ ಯಶಸ್ಸು, ಮುಖ್ಯಸ್ಥರು ಗಳ ಪ್ರಖ್ಯಾತಿ, ಸಿಬಂದಿ ಮತ್ತು ವಿದ್ಯಾರ್ಥಿಗಳ ಅನುಪಾತ, ಡಾಕ್ಟ ರೇಟ್ ಪಡೆದಿರುವ ಅಧ್ಯಾಪಕರು, ಸಂಶೋ ಧನಾ ಪ್ರಬಂಧ ಮಂಡನೆಗಳು, ಅಂತಾ ರಾಷ್ಟ್ರೀಯ ಮಟ್ಟದ ಅಧ್ಯಾಪಕರು, ಅಂತಾರಾಷ್ಟ್ರೀಯ ವಿದ್ಯಾರ್ಥಿ ಗಳ ಮಾನದಂಡಗಳನ್ನು ಪರಿಗಣಿಸಿ ರ್‍ಯಾಂಕಿಂಗ್‌ಗೆ ಆಯ್ಕೆ ಮಾಡಲಾಗುತ್ತದೆ ಎಂದು ಡಾ| ವಿನೋದ್ ಭಟ್ ತಿಳಿಸಿದರು.
ರ್‍ಯಾಂಕಿಂಗ್ ಒಂದೇ ನಮ್ಮ ಉದ್ದೇಶವಲ್ಲ. ಆದರೂ ಪ್ರತಿವರ್ಷ ಮಾಹೆಯ ಸಾಧನೆ ಹೆಚ್ಚುತ್ತ ಲಿದೆ. ಇದೊಂದು ಶೈಕ್ಷಣಿಕ ಸಾಧನೆಗಳ ಪಯಣ ವಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಮಾಹೆ (ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜು ಕೇಶನ್) ಡೀಮ್ಡ್ ವಿವಿಯು ಒತ್ತು ಕೊಡುತ್ತದೆ ಎಂದು ಮಾಹೆಯ ಕುಲಪತಿ ಡಾ| ಎಚ್.ವಿನೋದ್ ಭಟ್ ಅವರು ಹೇಳಿದರು.
ಮಾಹೆಯ ಕುಲಸಚಿವ ಡಾ| ನಾರಾಯಣ ಸಭಾಹಿತ್, ವಿಭಾಗ ಮುಖ್ಯಸ್ಥರುಗಳಾದ ಡಾ| ಸಂದೀಪ್ ಶೆಣೈ, ಕ್ರಿಸ್ಟೋಫರ್ ಸುಧಾಕರ್ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.