ರೇಸ್ ಬಗ್ಗೆ ಸರ್ಕಾರದ ಅಭಿಪ್ರಾಯ ಕೇಳಿದ ಹೈ
Team Udayavani, Dec 5, 2017, 4:34 PM IST
ಬೆಂಗಳೂರು: ವಿಶೇಷ ಮೇಲುಸ್ತುವಾರಿ ಸಮಿತಿ ನಿಗಾದಲ್ಲಿ ಟರ್ಫ್ ಕ್ಲಬ್ ಚಳಿಗಾಲದ ಸೀಸನ್ಲ್ಲಿ ಕೆಲ ದಿನಗಳ ಕಾಲ ರೇಸ್ ಆಯೋಜಿಸಲು ಅನುಮತಿ ನೀಡುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಟರ್ಪ್ಕ್ಲಬ್ ಪರವಾನಗಿ ನವೀಕರಣಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಬಿಟಿಸಿ, ಟರ್ಫ್ ಕ್ಲಬ್ ಸಿಬ್ಬಂದಿ, ರೇಸ್ ಕುದುರೆಗಳ ಮಾಲೀಕರು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಈ ನಿರ್ದೇಶನ ನೀಡಿತು.
“ಕ್ಲಬ್ಗ ಸಂಬಂಧಿಸಿದಂತೆ ಪ್ರಕರಣವೊಂದರ ತನಿಖೆಯನ್ನು ಸಿಐಡಿ ಇನ್ನೂ ಪೂರ್ಣಗೊಳಿಸಿ ವರದಿ ನೀಡಿಲ್ಲ. ನಿಯಮಗಳನ್ನು ಉಲ್ಲಂ ಸಿ ರೇಸ್ ಆಯೋಜಿಸುವುದರಿಂದ, ಹಲವರು ಬಾಜಿ ಕಟ್ಟಿ ಹಣ ಕಳೆದುಕೊಳ್ಳುತ್ತಾರೆ. ಆಡಳಿತ ಮಂಡಳಿ ವಿರುದ್ಧವೂ ಹಲವು ಆರೋಪಗಳಿವೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ರೇಸ್ನ ಚಟುವಟಿಕೆಗಳನ್ನು ನೋಡಿಕೊಳ್ಳಲು ಸರ್ಕಾರವೇ ವಿಶೇಷ ಮೇಲುಸ್ತುವಾರಿ ಸಮತಿಯೊಂದನ್ನು ರಚಿಸಿ, ಈ ಸೀಸನ್ಲ್ಲಿ ಕೆಲದಿನಗಳ ಕಾಲ ರೇಸ್ ನಡೆಸಲು ಅನುಮತಿ ನೀಡುವ ಕುರಿತ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವ ಬಗ್ಗೆ ಮುಂದಿನ ವಿಚಾರಣೆ ವರದಿ ಸಲ್ಲಿಸುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶಿಸಿ ನೀಡಿ ಡಿಸೆಂಬರ್ 12ಕ್ಕೆ ವಿಚಾರಣೆ ಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.