ಲಗೂನ ಅರಾಮ ಆಕ್ತಾರಲ್ರೀ?
Team Udayavani, Dec 6, 2017, 7:35 AM IST
ಮದುವೆ ಅವಳ ಮನೆಯನ್ನಲ್ಲ, ಬದುಕನ್ನಲ್ಲ, ಹಣೆಬರಹವನ್ನೇ ಬದಲಾಯಿಸಿತ್ತು. ತನ್ನ ಮಡಿಲಲ್ಲಿ ಮಗು ಕಾಣಬೇಕಾದವಳು, ಗಂಡನನ್ನೇ ಮಗುವಿನಂತೆ ಜೋಪಾನ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಳು…
ಅಪ್ಪನಿಗೆ ಹೊಟ್ಟೆ ನೋವು ವಿಪರೀತವಾಗಿ, ಆಸ್ಪತ್ರೆಗೆ ಸೇರಿದ್ದರು. ಅಪ್ಪನೊಟ್ಟಿಗೆ ನಾನಿ¨ªೆ. ನಾವಿದ್ದದ್ದು ಜನರಲ್ ವಾರ್ಡ್‌ನಲ್ಲಿ. ಹಾಗಾಗಿ ರೋಗಿಗಳ ನರಳಾಟ ಕಣ್ಣಿಗೆ ರಾಚುತ್ತಿತ್ತು. ಅಪಘಾತವಾಗಿ ಕೈ- ಕಾಲು ಕಳಕೊಂಡವರು, ಸೊಂಟ ಉಳುಕಿಸಿಕೊಂಡವರು, ಶುಗರ್, ಬಿಪಿ, ಕೆಮ್ಮು- ದಮ್ಮು, ಕಾಯಿಲೆಗಳ ಗೂಡಾದ ಮುದಿಜೀವಗಳು, ಆಗತಾನೇ ಧರೆಗಿಳಿದ ಕಂದಮ್ಮಗಳು, ನ್ಯುಮೋನಿಯಾ ಪೀಡಿತ ಮಕ್ಕಳು, ಅವರನ್ನು ಸಂತೈಸುವ ಅಮ್ಮಂದಿರು… ಹೀಗೆ ಆಸ್ಪತ್ರೆ ನೋವು- ನರಳಿಕೆಯ ಕೂಪವಾಗಿತ್ತು.
“ನೀ ಹೋಗಿ ನಾಷ್ಟಾ ಮಾಡ್ಕಂಡ್ ಬಾ, ನಾ ನೋಡ್ಕೊತೀನಿ, ಬಿರ್ನೆ ಬಾ’ ಅನ್ನೋ ದನಿ ಕೇಳಿಸಿದಾಗ, ಹಿಂತಿರುಗಿ ನೋಡಿದೆ. ಆಕೆ ನಿಂತಿದ್ದಳು. ಗಲ್ಲಕ್ಕೆ ಹಚ್ಚಿರೋ ಅರಿಶಿನ ಇನ್ನೂ ಮಾಸಿರಲಿಲ್ಲ, ಕೈತುಂಬಾ ತೊಟ್ಟಿದ್ದ ಗಾಜಿನ ಬಳೆಯಲ್ಲಿ ಒಂದೂ ಕಡಿಮೆಯಾಗಿರಲಿಲ್ಲ, ಕಾಲಲ್ಲಿ ಹೊಸ ಕಾಲ್ಗೆಜ್ಜೆ, ಮಾಸದ ಅಂಗೈ ಮದರಂಗಿ… ಇಷ್ಟೆÇÉಾ ಇದ್ದವಳ ಮುಖದಲ್ಲಿ ನಗುವಿನ ಬದಲು ಆತಂಕ ಮನೆ ಮಾಡಿತ್ತು. ನಗುವಿರದ ನವವಧು ಅವಳಾಗಿದ್ದಳು.
ಏನಾಯೆ¤ಂದು ವಿಚಾರಿಸಿದ್ದಕ್ಕೇ, ಅವಳ ಕಣ್ಣಂಚಲ್ಲಿ ಹನಿ ಜಿನುಗಿತ್ತು. ಕೆಲ ದಿನಗಳ ಹಿಂದಷ್ಟೇ ಅವಳ ಮದುವೆಯಾಗಿತ್ತು. ಗಂಡ ಹೊಲದಲ್ಲಿ ಕೆಲಸ ಮಾಡಿ, ಗೊಬ್ಬರದ ಚೀಲ ಹೊತ್ಕೊಂಡು ಬರುವಾಗ, ಕಾಲೆಡವಿ ಬಿದ್ದ ರಭಸಕ್ಕೆ ಬೆನ್ನೆಲುಬು ಮುರಿದು, ಕತ್ತು ತಿರುಗಿ, ಕಾಲು ಉಳುಕಿ, ಆಸ್ಪತ್ರೆ ಸೇರಿದ್ದರು. ಆಸರೆಯಾಗಬೇಕಿದ್ದವನಿಗೇ ಆಸರೆಯಾಗಿ ಈಕೆ ಜೊತೆ ನಿಂತಿದ್ದಳು.
ಪ್ರತಿ ಸಲ ಡಾಕ್ಟರ್ ಬಂದಾಗಲೂ ಕೇಳುತ್ತಿದ್ದದ್ದು ಒಂದೇ ಮಾತು- “ಲಗೂನ ಅರಾಮ ಆಕ್ತಾರಲಿÅ’.
ಮಲಗಿದÇÉೇ ಅವನ ಹಲ್ಲು ತಿಕ್ಕಿಸಿ, ಕೈಯÇÉೊಂದು ಬಟ್ಟಲಿಡಿದು ತಾನೇ ಬಾಯಿ ತೊಳೆದು, ಮುಖ ಒರೆಸಿ, ಗಂಟೆಗೊಮ್ಮೆ ಗಂಜಿ, ಹಾಲು, ಚಹಾ ಕುಡಿಸಿ, ಮಧ್ಯಾಹ್ನ ತುತ್ತು ಮಾಡಿ ಊಟ ಮಾಡಿಸಿ, ಸಾಯಂಕಾಲ ಮೈದುನನ ಸಹಾಯದಿಂದ ಗಂಡನನ್ನು ನಡೆಸಲು ಪ್ರಯತ್ನಿಸುವುದು ಅವಳ ದಿನಚರಿಯಾಗಿತ್ತು.
ಗಂಡನನ್ನು ಮನೆಗೆ ಕರೊಕೊಂಡು ಹೋಗಬಹುದು ಅಂತ ಡಾಕ್ಟರ್ ಹೇಳಿದಾಗ, ಅವಳ ಮೊಗದಲ್ಲಿ ಸಾವಿರ ನಕ್ಷತ್ರಗಳ ಮಿನುಗು. ತಿಂಗಳಿಗಾಗುವಷ್ಟು ಔಷಧಿ, ಗುಳಿಗೆ, ಮಸಾಜು ಮಾಡುವ ಎಣ್ಣೆ ತಗೊಂಡು, ಮೂರ್ನಾಲ್ಕು ಸಾರಿ ನರ್ಸ್ ಹತ್ರ, “ಅದರ ಮ್ಯಾಲ ಕನ್ನಡದಾಗ ದೊಡ್ಡಕ್ಷರದಾಗ ಬರ್ದ ಕೊಡ್ರಿ ಸರಿಯಾಗಿ, ಇÇÉಾಂದ್ರ ಮತ್ತ್ ನಮ್ಮೂರಿಂದ ಇಲ್ಲಿಗ ಬರಬೇಕ’ ಅಂತ ಹೇಳ್ತಿದುÉ.
ಮದುವೆ ಅವಳ ಮನೆಯನ್ನಲ್ಲ, ಬದುಕನ್ನಲ್ಲ , ಹಣೆಬರಹವನ್ನೇ ಬದಲಾಯಿಸಿತ್ತು. ತನ್ನ ಮಡಿಲಲ್ಲಿ ಮಗು ಕಾಣಬೇಕಾದವಳು, ಗಂಡನನ್ನೇ ಮಗುವಿನಂತೆ ಜೋಪಾನ ಮಾಡಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಳು. ಬಹುಶಃ ಬದುಕಿನ ಚಿತ್ರಣ ಹೀಗಾಗುತ್ತದೆ ಎಂದು ಅವಳು ಊಹಿಸಿರಲಿಕ್ಕೂ ಇಲ್ಲ.
ಗಂಡನನ್ನು ನಿಧಾನಕ್ಕೆ ನಡೆಸಿಕೊಂಡು, ಲಗೇಜು ಗಂಟನ್ನು ಅವುಚಿಕೊಂಡು ಆಕೆ ಆಸ್ಪತ್ರೆ ಗೇಟು ದಾಟುತ್ತಿದ್ದರೆ, ಮನಸ್ಸೇಕೋ ಭಾರವಾಯಿತು. ಅವಳ ಜೀವನ ಮುಂದ್ಹೇಗೆ? ಆಕೆಯ ಗಂಡ ಮೊದಲಿನಂತಾಗಬಲ್ಲನೇ? ಅವಳ ಬದುಕಲ್ಲಿ ಬೆಳಕು ಮೂಡುವುದೇ..? ಎಂಬಿತ್ಯಾದಿ ಪ್ರಶ್ನೆಗಳು ಅವ್ಯಕ್ತ ಭಯ ಹುಟ್ಟಿಸಿದವು.
– ಗೌರಿ ಭೀ. ಕಟ್ಟಿಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.