3 CPEC ಯೋಜನೆಗಳಿಗೆ ಚೀನ ಹಣ ಪೂರೈಕೆ ಸ್ಟಾಪ್‌: ಪಾಕಿಗೆ ಅಚ್ಚರಿ

Team Udayavani, Dec 5, 2017, 7:30 PM IST

Pak-China-roadblock-700.jpg

ಇಸ್ಲಾಮಾಬಾದ್‌ : ಅತ್ಯಂತ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಾಕ್‌ – ಚೀನ ದೋಸ್ತಿಗೆ ರೋಡ್‌ ಬ್ಲಾಕ್‌ ಉಂಟಾಗಿದೆ.

ಚೀನ – ಪಾಕಿಸ್ಥಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಯೋಜನೆಯಡಿ ರೂಪು ಗೊಳ್ಳಲಿದ್ದ ಮೂರು ರಸ್ತೆ ಯೋಜನೆಗಳಿಗೆ ತಾನು ಹಣ ಪೂರೈಸುವುದನ್ನು ನಿಲ್ಲಿಸಿರುವುದಾಗಿ ಚೀನ ಹೇಳಿದೆ. ಪಾಕಿಸ್ಥಾನಕ್ಕೆ ಆಘಾತಕಾರಿಯಾಗಿರುವ ಈ ವಿಷಯವನ್ನು ಪಾಕ್‌ ದೈನಿಕ ಡಾನ್‌ ಪ್ರಕಟಿಸಿದೆ.

ಸಿಪಿಇಸಿ ಯೋಜನೆಡಯಡಿ ಮೂರು ಪ್ರಮುಖ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ಬೀಜಿಂಗ್‌ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡುವುದನ್ನು ಈಗ ಎದುರುನೋಡಲಾಗುತ್ತಿದೆ. ಅಲ್ಲಿಯ ತನಕ  ಈ ಪ್ರಸ್ತಾವಿತ ಯೋಜನೆಗೆ ಹಣ ಪೂರೈಸುವುದನ್ನು  ಚೀನ ಸರಕಾರ ನಿಲ್ಲಿಸಿರುವುದಾಗಿ ಹೇಳಿದೆ ಎಂದು ಡಾನ್‌ ತನ್ನ ವರದಿಯಲ್ಲಿ ತಿಳಿಸಿದೆ.

ಸಿಪಿಇಸಿ ಯೋಜನೆಯ ಅನುಷ್ಠಾನದಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಬಗ್ಗೆ ಚೀನದ ಉನ್ನತ ನಾಯಕತ್ವಕ್ಕೆ ತೀವ್ರ ಕಳವಳ ಉಂಟಾಗಿದೆ. ಮತ್ತು ಇಂಥವೇ ಕೆಲವು ಕಾರಣಗಳಿಗಾಗಿ ಸದ್ಯ ಸಿಪಿಇಸಿ ಯೋಜನೆಗೆ ಹಣ ಪೂರೈಸುವುದನ್ನು ಚೀನ ಸರಕಾರ ನಿಲ್ಲಿಸಲು ನಿರ್ಧರಿಸಿದೆ ಎಂಬ ವಿಷಯವನ್ನು ಚೀನದ ಉನ್ನತ ಅಧಿಕಾರಿಗಳು ಪಾಕಿಸ್ಥಾನದ ಉನ್ನತ ಅಧಿಕಾರಿಗಳಿಗೆ ಸಭೆಯೊಂದರಲ್ಲಿ ತಿಳಿಸಿದ್ದಾರೆ ಎಂದು ಡಾನ್‌ ಹೇಳಿದೆ.

ಗÌದರ್‌ ಬಂದರಿನಲ್ಲಿ ನಡೆಯುವ ವಾಣಿಜ್ಯ ವಹಿವಾಟುಗಳನ್ನು ಚೀನದ ಕರೆನ್ಸಿಯಾಗಿರುವ ರೆನ್‌ಮಿನ್‌ಬಿಯಲ್ಲೇ ನಡೆಯುವುದಕ್ಕೆ ಅವಕಾಶ ನೀಡಬೇಕೆಂಬ ಚೀನದ ಶರತ್ತನ್ನು ಪಾಕಿಸ್ಥಾನ ತಿರಸ್ಕರಿಸಿರುವುದೇ ಉಭಯ ದೇಶಗಳ ನಡುವಿನ ಸರ್ವ ಋತು ದೋಸ್ತಿಗೆ ಎದುರಾಗಿರುವ ಮೊದಲ ರೋಡ್‌ ಬ್ಲಾಕ್‌ ಆಗಿದೆ ಎಂದು ತಿಳಿಯಲಾಗಿದೆ.

ಪಾಕ್‌ ಅಧಿಕಾರಿಗಳೊಂದಿಗೆ ಚೀನ ನಡೆಸಿದ್ದ ಸಭೆಯಲ್ಲಿ ಈ ವಿಷಯಕ್ಕೆ ಅಧಿಕ ಮಹತ್ವ ನೀಡಲಾಗಿತ್ತು ಮತ್ತು ಪಾಕಿಸ್ಥಾನದ ಚೀನೀ ಕರೆನ್ಸಿಯಲ್ಲಿ ವಾಣಿಜ್ಯ ವಹಿವಾಟು ನಡೆಸುವುದಕ್ಕೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿತ್ತು ಎಂದು ಡಾನ್‌ ವರದಿ ಮಾಡಿದೆ. 

ಚೀನದ ಮಾರ್ಗದರ್ಶಿ ಸೂತ್ರಗಳ ಬಿಡುಗಡೆಯಾದಾಗ ಸಿಪಿಇಸಿ ಯೋಜನೆಯ ರೂಪರೇಖೆಯೇ ಬದಲಾಗುವ ಸಾಧ್ಯತೆ ಇದೆ ಎಂದು ಡಾನ್‌ ಹೇಳಿದೆ. 

ಪಾಕ್‌ ಆಕ್ರಮಿತ ವಿವಾದಿತ ಕಾಶ್ಮೀರದಲ್ಲಿ ಬೃಹತ್‌ ಅಣೆಕಟ್ಟು ನಿರ್ಮಿಸುವ ಯೋಜನೆಯಿಂದಲೂ ಚೀನ ಹಿಂದೆ ಸರಿದಿರುವುದಾಗಿ ವರದಿಯಾಗಿದೆ. 

ಟಾಪ್ ನ್ಯೂಸ್

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

17-gdp

GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್‌

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

R Ashwin: ಅಶ್ವಿ‌ನ್‌ಗೆ ಖೇಲ್‌ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ

R Ashwin: ಅಶ್ವಿ‌ನ್‌ಗೆ ಖೇಲ್‌ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ

Virat Kohli: ಬಾಕ್ಸಿಂಗ್‌ ಡೇ ಟೆಸ್ಟ್‌ಗೂ ಮುನ್ನ ವಿರಾಟ್‌ ನೂತನ ಕೇಶ ವಿನ್ಯಾಸ

Virat Kohli: ಬಾಕ್ಸಿಂಗ್‌ ಡೇ ಟೆಸ್ಟ್‌ಗೂ ಮುನ್ನ ವಿರಾಟ್‌ ನೂತನ ಕೇಶ ವಿನ್ಯಾಸ

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.