ಬಿಜೆಪಿ ಬೆದರಿಕೆಗೆ ಬಗ್ಗಲ್ಲ: ವೇಣುಗೋಪಾಲ್
Team Udayavani, Dec 6, 2017, 8:11 AM IST
ಬೆಂಗಳೂರು: “ಸರಿತಾ ನಾಯರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಬೆದರಿಕೆಗೆ ಬಗ್ಗುವುದಿಲ್ಲ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಮುಂಚೂಣಿ ಘಟಕಗಳ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರಿತಾ ನಾಯರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದೆ. ಈಗಾಗಲೇ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ನಾಯರ್ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾಗಿ ತಿಳಿಸಿದರು. “ಇದೇ ವಿಷಯಕ್ಕೆ ಸಂಬಂಧಿಸಿದಂತೆ ವೇಣುಗೋಪಾಲ ಬೆಂಬಲಕ್ಕೆ ನಿಂತಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್, ರಾಜ್ಯ ಬಿಜೆಪಿಯವರು ವೇಣುಗೋಪಾಲ ತಂಟೆಗೆ ಬಂದರೆ ಸರಿಯಾಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು, ನಾಳೆ ವಿಭಾಗವಾರು ಸಭೆ: ಪಕ್ಷ ಸಂಘಟನೆ ಮತ್ತು ಚುನಾವಣೆ ದೃಷ್ಟಿಯಿಂದ ಸರಣಿ ಸಭೆ ನಡೆಸುತ್ತಿರುವ ವೇಣುಗೋಪಾಲ್, ಬುಧವಾರ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ಮುಖಂಡರು ಮತ್ತು ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಗುರುವಾರ ಬೆಂಗಳೂರು ಮತ್ತು ಮೈಸೂರು ವಿಭಾಗದ ಮುಖಂಡರ ಸಭೆ ನಡೆಸಲಿರುವ ವೇಣುಗೋಪಾಲ್, ವಿಭಾಗ ಮಟ್ಟದಲ್ಲಿ ಪಕ್ಷದ ಸ್ಥಿತಿಗತಿ, ಅಭ್ಯರ್ಥಿಗಳ ಆಯ್ಕೆ ಹಾಗೂ ಪಕ್ಷ ಬಲವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ
Hubli: ಜನರ ಸಮಸ್ಯೆ ಆಲಿಸಿ ಸಭಾಪತಿಗೆ ವರದಿ: ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್
Hubli: ವಕ್ಫ್ ಬೋರ್ಡ್ ಆಸ್ತಿ ಸಿದ್ದು ಸರ್ಕಾರದ ಕಬಳಿಕೆಗೆ ಕುಮ್ಮಕ್ಕು: ಪ್ರತಾಪ್ ಸಿಂಹ
ತಹಶೀಲ್ದಾರ್ ಕಚೇರಿಯಲ್ಲಿ ಅನ್ನದಾತರ ಅಹೋರಾತ್ರಿ ಧರಣಿ… ಇಂದು ಜಿಲ್ಲಾಧಿಕಾರಿ ಜೊತೆ ಸಭೆ
Belagavi: ಎಸ್ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
MUST WATCH
ಹೊಸ ಸೇರ್ಪಡೆ
Kamal Haasan: ʼಥಗ್ ಲೈಫ್ʼ ರಿಲೀಸ್ ಡೇಟ್ ಅನೌನ್ಸ್; ಬರ್ತ್ ಡೇಗೆ ಟೀಸರ್ ಗಿಫ್ಟ್
Trump: ಗುಜರಾತ್ ಮೂಲದ ಪಟೇಲ್ CIA ನೂತನ ಮುಖ್ಯಸ್ಥ: ಡೊನಾಲ್ಡ್ ಟ್ರಂಪ್ ಒಲವು
Waqf ಜೆಪಿಸಿ ಅಧ್ಯಕ್ಷ ಭೇಟಿ ಹಿನ್ನೆಲೆ: ವಿಜಯಪುರಕ್ಕೆ ಬಂದ ಜೊಲ್ಲೆ ದಂಪತಿ, ಜಾರಕಿಹೊಳಿ
Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ
Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.