ತಿಂಗಳ ಕಾಲ ಸರ್ಕಾರದ “ಸಾಧನಾ ಸಂಭ್ರಮ’
Team Udayavani, Dec 6, 2017, 8:18 AM IST
ಬೆಂಗಳೂರು: ಪಕ್ಷದ ವಿರೋಧದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸಲು ಡಿ.13 ರಿಂದ ಜ.13 ರವರೆಗೆ “ಸಾಧನಾ ಸಂಭ್ರಮ’ದ ಹೆಸರಿನಲ್ಲಿ ಸರ್ಕಾರಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಒಂದು ತಿಂಗಳ ಕಾಲ ನಿರಂತರವಾಗಿ ಪ್ರವಾಸ ನಡೆಯಲಿದೆ. ಡಿ.13 ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಪ್ರವಾಸ ಆರಂಭಿಸಲಿರುವ ಮುಖ್ಯಮಂತ್ರಿ, ಪ್ರತೀ ದಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳ ಶಂಕು ಸ್ಥಾಪನೆ ಮತ್ತು ಪೂರ್ಣಗೊಂಡ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಎಲ್ಲೆಲ್ಲಿ, ಎಂದೆಂದು ಪ್ರವಾಸ?
●ಡಿ.13: ಬೆಳಗ್ಗೆ ಬಸವಕಲ್ಯಾಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ. ಮಧ್ಯಾಹ್ನ 1 ಗಂಟೆಗೆ ಹುಮ್ನಾಬಾದ್, ಸಂಜೆ 4 ಗಂಟೆಗೆ ಭಾಲ್ಕಿಯಲ್ಲಿ ಕಾರ್ಯಕ್ರಮ. ರಾತ್ರಿ ಕೊಪ್ಪಳದಲ್ಲಿ ವಾಸ್ತವ್ಯ.
● ಡಿ.14: ಬೆಳಗ್ಗೆ ಕುಷ್ಟಗಿ, ಮಧ್ಯಾಹ್ನ ಕನಕಗಿರಿ, ಸಂಜೆ ಗಂಗಾವತಿಯಲ್ಲಿ ಕರ್ಯಕ್ರಮ. ರಾತ್ರಿ ರಾಯಚೂರಿನಲ್ಲಿ ವಾಸ್ತವ್ಯ.
●ಡಿ.15: ಲಿಂಗಸಗೂರಿನಲ್ಲಿ ಕಾರ್ಯಕ್ರಮ, ಸಂಜೆ ಮಾನ್ವಿಯಲ್ಲಿ ಸರ್ಕಾರಿ ಯೋಜನೆಗೆ ಚಾಲನೆ. ರಾತ್ರಿ ಕಲಬುರಗಿಯಲ್ಲಿ ವಾಸ್ತವ್ಯ.
●ಡಿ.16: ಅಫಜಲ್ಪುರ, ಮಧ್ಯಾಹ್ನ ಸೇಡಂ, ಸಂಜೆ ಜೇವರ್ಗಿಯಲ್ಲಿ ಕಾರ್ಯಕ್ರಮ. ರಾತ್ರಿ ಯಾದಗಿರಿಯಲ್ಲಿ ವಾಸ್ತವ್ಯ.
●ಡಿ.17: ಬೆಳಗ್ಗೆ ಗುರುಮಠಕಲ್, ಮಧ್ಯಾಹ್ನ ಶಹಾಪುರ, ಸಂಜೆ ಸುರಪುರದಲ್ಲಿ ಕಾರ್ಯಕ್ರಮ. ಬಳ್ಳಾರಿಯಲ್ಲಿ ವಾಸ್ತವ್ಯ.
●ಡಿ.18: ಬಳ್ಳಾರಿ ಜಿಲ್ಲೆಯ ಸೊಂಡೂರು, ಹೂವಿನ ಹಡಗಲಿ, ಹಗರಿಬೊಮ್ಮನ ಹಳ್ಳಿ ಅಥವಾ ಸಿರಗುಪ್ಪದಲ್ಲಿ ಕಾರ್ಯಕ್ರಮ.
ರಾತ್ರಿ ಬಾಗಲಕೋಟೆಯಲ್ಲಿ ವಾಸ್ತವ್ಯ.
●ಡಿ.19: ಜಮಖಂಡಿ, ತೇರದಾಳ ಮತ್ತು ಬೀಳಗಿಯಲ್ಲಿ ಕಾರ್ಯಕ್ರಮ, ವಿಜಯಪುರದಲ್ಲಿ ವಾಸ್ತವ್ಯ.
●ಡಿ.20: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ್, ಬಬಲೇಶ್ವರ ಮತ್ತು ವಿಜಯಪುರ ನಗರ ಕ್ಷೇತ್ರಗಳಲ್ಲಿ ಕಾರ್ಯಕ್ರಮ. ಬೆಳಗಾವಿಯಲ್ಲಿ ವಾಸ್ತವ್ಯ.
●ಡಿ.21: ಬೆಳಗ್ಗೆ ಕುಡಚಿ, ಮಧ್ಯಾಹ್ನ ರಾಯಬಾಗ, ಸಂಜೆ ಗೋಕಾಕ ಕ್ಷೇತ್ರಗಳಲ್ಲಿ ಕಾರ್ಯಕ್ರಮ. ಬೆಳಗಾವಿಯಲ್ಲಿ ವಾಸ್ತವ್ಯ.
●ಡಿ.22: ಯಮಕನಮರಡಿ, ರಾಮದುರ್ಗ ಹಾಗೂ ಕಿತ್ತೂರು ಕ್ಷೇತ್ರಗಳಲ್ಲಿ ಕಾರ್ಯಕ್ರಮ. ಧಾರವಾಡದಲ್ಲಿ ವಾಸ್ತವ್ಯ.
●ಡಿ.23: ಬೆಳಗ್ಗೆ ಹುಬ್ಬಳ್ಳಿ, ಮಧ್ಯಾಹ್ನ ಧಾರವಾಡ, ಸಂಜೆ ಕುಂದಗೋಳದಲ್ಲಿ ಕಾರ್ಯಕ್ರಮ. ಹಾವೇರಿಯಲ್ಲಿ ವಾಸ್ತವ್ಯ.
●ಡಿ.24: ಬೆಳಗ್ಗೆ ಹಾವೇರಿ, ಸಂಜೆ ಬ್ಯಾಡಗಿಯಲ್ಲಿ ಕಾರ್ಯಕ್ರಮ. ಗದಗದಲ್ಲಿ ವಾಸ್ತವ್ಯ.
●ಡಿ.25:ಗದಗ ಮತ್ತು ಲಕ್ಷ್ಮೇಶ್ವರ ಕ್ಷೇತ್ರಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳಿಗೆ ಚಾಲನೆ. ದಾವಣಗೆರೆಯಲ್ಲಿ ವಾಸ್ತವ್ಯ.
●ಡಿ.26: ದಾವಣಗೆರೆ ನಗರ ಅಥವಾ ಜಗಳೂರಿನಲ್ಲಿ ಕಾರ್ಯಕ್ರಮ, ಹೊನ್ನಾಳಿ ಹಾಗೂ ಹರಪನಹಳ್ಳಿ ಕ್ಷೇತ್ರಗಳಲ್ಲಿ ಯೋಜನೆಗಳಿಗೆ ಚಾಲನೆ. ಚಿತ್ರದುರ್ಗದಲ್ಲಿ ವಾಸ್ತವ್ಯ.
●ಡಿ.27: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಚಳ್ಳಕೆರೆ ಮತ್ತು ಹಿರಿಯೂರು ಕ್ಷೇತ್ರಗಳಲ್ಲಿ ಕಾರ್ಯಕ್ರಮ. ತುಮಕೂರಿನಲ್ಲಿ ವಾಸ್ತವ್ಯ.
●ಡಿ.28: ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನ ಹಳ್ಳಿ ಹಾಗೂ ತುಮಕೂರು ನಗರದಲ್ಲಿ ಸರ್ಕಾರಿ ಕಾರ್ಯಕ್ರಮ. ರಾತ್ರಿ ಬೆಂಗಳೂರಿಗೆ ವಾಪಸ್.
●ಡಿ.29: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿಯಲ್ಲಿ ಕಾರ್ಯಕ್ರಮ. ಸಂಜೆ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ.
●ಡಿ.30: ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಬಂಗಾರ ಪೇಟೆ ಕ್ಷೇತ್ರಗಳಲ್ಲಿ ಕಾರ್ಯಕ್ರಮ. ಬೆಂಗಳೂರಿಗೆ ವಾಪಸ್.
●ಡಿ.31 ರಿಂದ ಜನವರಿ 2ರ ವರೆಗೆ ವಿರಾಮ.
●ಜ.3: ಮಾಗಡಿ, ರಾಮನಗರ ಹಾಗೂ ಕನಕಪುರಗಳಲ್ಲಿ ಪ್ರವಾಸ. ಬೆಂಗಳೂರಿಗೆ ವಾಪಸ್.
●ಜ.4: ಹಾಸನ ಜಿಲ್ಲೆಯ ಅರಸಿಕೆರೆ, ಬೇಲೂರು ಮತ್ತು ಅರಕಲಗೂಡು ಕ್ಷೇತ್ರಗಳಲ್ಲಿ ಪ್ರವಾಸ. ರಾತ್ರಿ ಚಿಕ್ಕಮಗಳೂರಿನಲ್ಲಿ ವಾಸ್ತವ್ಯ.
●ಜ.5: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ತರೀಕೆರೆ ಹಾಗೂ ಕಡೂರು ಕ್ಷೇತ್ರಗಳಲ್ಲಿ ಕಾರ್ಯಕ್ರಮ. ಶಿವಮೊಗ್ಗದಲ್ಲಿ ವಾಸ್ತವ್ಯ.
●ಜ.6: ಶಿವಮೊಗ್ಗ ನಗರ, ತೀರ್ಥಹಳ್ಳಿ ಮತ್ತು ಸಾಗರಗಳಲ್ಲಿ ಕಾರ್ಯಕ್ರಮ.
●ಜ.7: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಮೂಡುಬಿದರೆ ಮತ್ತು ಪುತ್ತೂರುಗಳಲ್ಲಿ ಪ್ರವಾಸ. ಉಡುಪಿಯಲ್ಲಿ ವಾಸ್ತವ್ಯ.
●ಜ.8: ಉಡುಪಿ ಜಿಲ್ಲೆಯ ಬೈಂದೂರು ಮತ್ತು ಕಾಪು ಕ್ಷೇತ್ರಗಳಲ್ಲಿ ಕಾರ್ಯಕ್ರಮ. ಮಡಿಕೇರಿಯಲ್ಲಿ ವಾಸ್ತವ್ಯ.
●ಜ.9: ಬೆಳಗ್ಗೆ ಮಡಿಕೇರಿ, ಸಂಜೆ ವಿರಾಜಪೇಟೆಯಲ್ಲಿ ಕಾರ್ಯಕರ್ತರ ಸಭೆ.
●ಜ.10: ಹನೂರು, ಕೊಳ್ಳೆಗಾಲ ಮತ್ತು ಚಾಮರಾಜ ನಗರದಲ್ಲಿ ಕಾರ್ಯಕ್ರಮ. ಮೈಸೂರಲ್ಲಿ ವಾಸ್ತವ್ಯ.
●ಜ.11: ಎಚ್.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ ಹಾಗೂ ವರುಣಾದಲ್ಲಿ ಕಾರ್ಯಕ್ರಮ. ಮಂಡ್ಯದಲ್ಲಿ ವಾಸ್ತವ್ಯ.
●ಜ.12: ಮಳವಳ್ಳಿ, ಶ್ರೀರಂಗಪಟ್ಟಣ ಮತ್ತು ಕೆ.ಆರ್.ಪೇಟೆ ಕ್ಷೇತ್ರಗಳಲ್ಲಿ ಪ್ರವಾಸ. ಬೆಂಗಳೂರಿಗೆ ವಾಪಸ್.
●ಜ.13: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರಿ ಕಾರ್ಯಕ್ರಮ.
ಮುಖ್ಯಮಂತ್ರಿ ಯಾತ್ರೆಗೆ 50 ಕೋಟಿ ರೂ.?
ಬೆಂಗಳೂರು: ಡಿ. 13ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿರುವ “ಸಾಧನಾ ಸಂಭ್ರಮ’ ಪ್ರವಾಸಕ್ಕೆ ಸುಮಾರು 50 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಮುಖ್ಯಮಂತ್ರಿ ಪ್ರವಾಸ ಮಾಡುವ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯಕ್ರಮ ಆಯೋಜನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಸಾರ್ವಜನಿಕರ ಹಣದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಯಾತ್ರೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಜನರು ನಮ್ಮನ್ನು ಆಯ್ಕೆ ಮಾಡಿ ಸರ್ಕಾರ ನಡೆಸುವಂತೆ ಕಳುಹಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಿಗೆ ಸರ್ಕಾರಿ ವಾಹನವನ್ನೇ ಬಳಸಬೇಕು. ಚುನಾವಣಾ ನೀತಿ ಸಂಹಿತೆ ಜಾರಿಯಾಗುವವರೆಗೂ ನಾವು ಸರ್ಕಾರಿ ಯಂತ್ರವನ್ನೇ ಬಳಸುತ್ತೇವೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಕುಮಾರಸ್ವಾಮಿಯವರು
ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸಿದವರು. ಅವರಿಗೆ ಇಷ್ಟು ಸರಳ ವಿಷಯ ತಿಳಿಯದಿದ್ದರೆ ಹೇಗೆ ಎಂದು ಮುಖ್ಯಮಂತ್ರಿ ಕಾರ್ಯಕ್ರಮ ವಿರೋಧಿಸಿರುವುದಕ್ಕೆ ಟಾಂಗ್ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಹಶೀಲ್ದಾರ್ ಕಚೇರಿಯಲ್ಲಿ ಅನ್ನದಾತರ ಅಹೋರಾತ್ರಿ ಧರಣಿ… ಇಂದು ಜಿಲ್ಲಾಧಿಕಾರಿ ಜೊತೆ ಸಭೆ
Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
FIR Petition: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್
Poor Family: ಬಿಪಿಎಲ್ ಕಾರ್ಡ್ ಕೊಡಲು ಅಧಿಕಾರಿಗಳ “ಶ್ರಮ’
MUDA Case: ಇ.ಡಿ. ವಿಚಾರಣೆಗೆ ಮುಡಾ ಮಾಜಿ ಆಯುಕ್ತ ದಿನೇಶ್ ಹಾಜರು ?
MUST WATCH
ಹೊಸ ಸೇರ್ಪಡೆ
ತಹಶೀಲ್ದಾರ್ ಕಚೇರಿಯಲ್ಲಿ ಅನ್ನದಾತರ ಅಹೋರಾತ್ರಿ ಧರಣಿ… ಇಂದು ಜಿಲ್ಲಾಧಿಕಾರಿ ಜೊತೆ ಸಭೆ
Sydney Thunder: ಡೇವಿಡ್ ವಾರ್ನರ್‌ಗೆ 6 ವರ್ಷಗಳ ಬಳಿಕ ನಾಯಕತ್ವ!
LMV ಲೈಸನ್ಸ್ ಇದ್ದರೆ ಸರಕು ವಾಹನ ಚಲಾಯಿಸಿ… 7.5 ಟನ್‌ವರೆಗಿನ ವಾಹನ ಓಡಿಸಲು ಅನುಮತಿ
Jammu and Kashmir Assembly: ಕಾಶ್ಮೀರ ವಿಶೇಷ ಸ್ಥಾನಮಾನ ಕೋರಿ ಅಸೆಂಬ್ಲಿಯಲ್ಲಿ ಗಲಾಟೆ
Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.