ವಿಮಾನವೇರಿದ್ದ ಲಂಕಾ ಕ್ರಿಕೆಟಿಗರು ವಾಪಸ್ ಮನೆಗೆ !
Team Udayavani, Dec 6, 2017, 10:10 AM IST
ಕೊಲಂಬೊ: ಶ್ರೀಲಂಕಾ ಏಕದಿನ ಕ್ರಿಕೆಟ್ ತಂಡದ ಭಾರತ ಪ್ರವಾಸ ವಿಚಿತ್ರ ಹಾಗೂ ಅಸಮರ್ಪಕ ಕಾರಣಕ್ಕಾಗಿ ವಿಳಂಬಗೊಂಡಿದೆ. ವಿಮಾನವೇರಿದ್ಧ ಕ್ರಿಕೆಟಿಗರಿಗೆ ಕೆಳಗಿಳಿಯುವಂತೆ ಹೇಳಿ ಅಲ್ಲಿಂದಲೇ ವಾಪಸ್ ಮನೆಗೆ ತೆರಳುವಂತೆ ಸೂಚಿಸಿದ ಘಟನೆ ನಡೆದಿದೆ. ಶ್ರೀಲಂಕಾ ಕ್ರೀಡಾ ಸಚಿವರ “ಸೂಕ್ತ ಅಂಗೀಕಾರ’ ಲಭಿಸದಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಕ್ರಿಕೆಟಿಗರ ಯಾವುದೇ ಪ್ರವಾಸಕ್ಕೂ ಕ್ರೀಡಾ ಸಚಿವಾಲಯದ ಒಪ್ಪಿಗೆ ಲಭಿಸಬೇಕಿರುವುದು ಶ್ರೀಲಂಕಾದ “ಕ್ರಮವಿಧಿ’ ಆಗಿದೆ. ಆದರೆ ಇದು ಅತಿರೇಕಕ್ಕೆ ಹೋಗಿರುವುದು ಇದೇ ಮೊದಲು!
ವಿಮಾನದಲ್ಲಿ ಕುಳಿತವರೂ ಕೆಳಕ್ಕಿಳಿದರು: ಭಾರತಕ್ಕೆ ಆಗಮಿಸಲು ಶ್ರೀಲಂಕಾ ಕ್ರಿಕೆಟಿಗರು ಸೋಮವಾರ ರಾತ್ರಿ 9 ಗಂಟೆಯ ಹೊತ್ತಿಗೆ ಕೊಲಂಬೊ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಎಡಗೈ ಸ್ಪಿನ್ನರ್ ಸಚಿತ ಪತಿರಣ ಆಗಲೇ ವಿಮಾನವೇರಿ ಕುಳಿತ್ತಿದ್ದರು. ಉಳಿದವರು ವಿಮಾನ ಏರಲು ಸಜ್ಜಾಗಿದ್ದರು. ಅಷ್ಟರಲ್ಲಿ ಲಂಕಾ ಕ್ರಿಕೆಟಿಗರಿಗೆ ವಿಮಾನ ಏರದಂತೆ ಸೂಚಿಸಿ ವಾಪಸ್ ಮನೆಗೆ ಹೋಗುವಂತೆ ಆದೇಶಿಸಲಾಯಿತು.
ಶ್ರೀಲಂಕಾ ಕ್ರೀಡಾ ಸಚಿವರ ಸೂಕ್ತ ಅಂಗೀಕಾರ ಲಭಿಸದಿರುವುದೇ ಇದಕ್ಕೆ ಕಾರಣ ಎಂದು ಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಂಗಳವಾರ ಸಂಜೆಯೊಳಗಾಗಿ ಸಮಸ್ಯೆ ಪರಿಹಾರವಾಗಲಿದ್ದು, ಬುಧವಾರ ಬೆಳಗ್ಗೆ ಕ್ರಿಕೆಟಿಗರು ಭಾರತದಲ್ಲಿ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗ ಭಾರತದಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ಶ್ರೀಲಂಕಾ ಕ್ರಿಕೆಟಿಗರು ಅಂಗಳದ ಹಾಗೂ ಅಂಗಳದಾಚೆಗಿನ ಕೆಲವು ಅನಪೇಕ್ಷಿತ ವಿದ್ಯಮಾನಗಳಿಂದ ಸುದ್ದಿಯಾಗಿರುವ ಬೆನ್ನಲ್ಲೇ ಈ “ಪ್ರಯಾಣ ಪ್ರಕರಣ’ ಸಂಭವಿಸಿರುವುದು ವಿಪರ್ಯಾಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.