ಯಕ್ಷಗಾನ ಜಾಗೃತಿ ವೇದಿಕೆ ಅಸ್ತಿತ್ವಕ್ಕೆ

Team Udayavani, Dec 6, 2017, 10:27 AM IST

6.jpg

ಕೋಟ: ಯಕ್ಷಗಾನ ಕಲೆಯನ್ನು ಆಧುನಿಕತೆಯಿಂದ ಸಂರಕ್ಷಿಸಲು ಯಕ್ಷಗಾನ ಜಾಗೃತಿ ವೇದಿಕೆ ಜನ್ಮ ತಾಳಿದೆ.ಆಧುನೀಕರಣದ ಅಬ್ಬರಕ್ಕೆ ಯಕ್ಷ ಗಾನವೂ ತನ್ನ ಹಿಂದಿನ ಮೌಲ್ಯ ಗಳನ್ನು ಕಳೆದುಕೊಳ್ಳುತ್ತಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಕಲೆಯ ಅಸ್ತಿತ್ವಕ್ಕೆ  ಧಕ್ಕೆ ಬರಬಹುದೆಂಬ ಕಾಳಜಿ ಹಿಂದೆ ಈ ವೇದಿಕೆ ಅವತರಿಸಿದೆ.

ಯಕ್ಷಗಾನದ ಕುರಿತು ಆಸಕ್ತಿ ಹಾಗೂ ಹಿಂದಿನಂತೆಯೇ ಮುಂದುವರಿಯಲೆಂಬ ಕಾಳಜಿ ಉಳ್ಳ ಒಂದಷ್ಟು  ಯಕ್ಷಪ್ರೇಮಿಗಳು ಯಕ್ಷಗಾನ ಜಾಗೃತಿ ವೇದಿಕೆಯನ್ನು ಸ್ಥಾಪಿಸಿದ್ದಾರೆ. ಯಕ್ಷಗಾನದ ಲೋಪ- ದೋಷ ಸರಿಪಡಿಸಲು ಈ ವೇದಿಕೆ ಶ್ರಮಿಸಲಿದೆ.  ಸಾಲಿಗ್ರಾಮದಲ್ಲಿ ಇತ್ತೀಚೆಗೆ ನಡೆದ ವೇದಿಕೆಯ ಸಭೆಯಲ್ಲಿ ಹಿರಿಯ ಯಕ್ಷಗಾನ ವಿಮರ್ಶಕ ಬೇಳೂರು ರಾಘವ ಶೆಟ್ಟಿ ಅವರನ್ನು  ಸಂಚಾಲಕರನ್ನಾಗಿ,  ಪ್ರೊ| ಕೆ. ಶಂಕರ ಜೋಯಿಷ್‌ ಅವರನ್ನು ಸಹ ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆ. ಪ್ರಮುಖವಾಗಿ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನವನ್ನು ಅದರ ಮೂಲ ತಿಟ್ಟಿಗೆ ತರುವುದು ಹಾಗೂ ಈ ಕುರಿತು ಮೇಳದ ಯಜಮಾನರಿಗೆ ಮನವಿ ಸಲ್ಲಿಸುವುದು, ಪೂರ್ವಚಾರದ ಪ್ರಕಾರ ಯಕ್ಷಗಾನವನ್ನು ಪ್ರದರ್ಶನಗೊಳಿಸುವಂತೆ ಮೇಳಗಳಿಗೆ ಒತ್ತಾಯಿಸಲು ಹರಿಕೆದಾರರಿಗೆ ಮನವಿ ಮಾಡುವುದು ವೇದಿಕೆಯ ಉದ್ದೇಶಗಳು.

ಇದಲ್ಲದೇ, ವೇಷಧಾರಿಣಿಯನ್ನು ಶಿಸ್ತು ಬದ್ಧಗೊಳಿಸಲು ಪ್ರಯತ್ನಿಸುವುದು, ದೇವಸ್ಥಾನದ ಆಡಳಿತ ಹೊಂದಿದ ಮೇಳಗಳಲ್ಲಿ ಯಕ್ಷಗಾನದ ಸಮರ್ಪಕತೆಯನ್ನು ಜಾರಿಗೆ ತರುವಂತೆ ಸಂಬಂಧಿಸಿದ ಸರಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದು,  ಪರಿಣತ ಕಲಾವಿದರಿಂದ ಪ್ರಾತ್ಯಕ್ಷಿಕೆ ಸಹಿತ ಸರಣಿಯನ್ನು ಏರ್ಪಡಿಸುವುದು, ಹವ್ಯಾಸಿಗಳ ಮಹಾ ಸಮ್ಮೇಳನ ನಡೆಸಿ ಅವರಿಗೆ ಸಂಪ್ರದಾಯದ ಮನವರಿಕೆ ಮಾಡುವುದು, ಹಾಡುಗಾರಿಕೆ, ಬಣ್ಣಗಾರಿಕೆ, ವೇಷ-ಭೂಷಣ, ರಂಗ ಕ್ರಿಯೆಗಳ ಸ್ವರೂಪ ಶೈಲಿಗಳನ್ನು ಸತ್‌ಪರಂಪರೆಗೆ ಸಮ್ಮತವಾಗುವಂತೆ ಉತ್ತಮ ಮಾದರಿಗಳನ್ನು ರೂಪಿಸುವುದು ಮತ್ತು ದಾಖಲೀಕರಿಸುವುದು, ಮಾಧ್ಯಮಗಳ ಮೂಲಕ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಉತ್ತಮ ವಿಷಯಗಳನ್ನು ಪ್ರಸಾರಪಡಿಸುವುದು, ಅಶಕ್ತ ಕಲಾವಿದರಿಗೆ ನೆರವು ನೀಡುವುದು ಮುಂತಾದ ಧ್ಯೇಯವನ್ನು ಸಂಘಟನೆ ಹೊಂದಿದೆ.

ವೇದಿಕೆಯಲ್ಲಿ ಹಿರಿಯ ಯಕ್ಷಗಾನ ವಿಮರ್ಶಕರಾದ ಡಾ|ಕೆ.ಎಂ. ರಾಘವ ನಂಬಿಯಾರ್‌, ಗುಂಡ್ಮಿ ಸದಾನಂದ ಐತಾಳ, ಜಿ.ಆರ್‌.ಗಣಪಯ್ಯ ನಾವುಡ, ಸುರೇಂದ್ರ ಪಣಿಯೂರು, ಐರೋಡಿ ಗೋವಿಂದಪ್ಪ, ಕೃಷ್ಣಮೂರ್ತಿ ಉರಾಳ, ಮಂಜುನಾಥ ಪ್ರಭು, ಕೃಷ್ಣಮೂರ್ತಿ, ನಾಗರತ್ನಾ ಜಿ.ಹೇಳೆì, ಅಶೋಕ್‌ ಆಚಾರ್ಯ ಸಾೖಬ್ರಕಟ್ಟೆ ಅವರಿದ್ದು, ಜತೆಗೆ ಪ್ರಭಾಕರ ನಾೖರಿ, ಜಗದೀಶ್‌ ಆಚಾರ್ಯ, ವಿಶ್ವನಾಥ ಗಾಣಿಗ,  ಗಿರೀಶ್‌ ಗಾಣಿಗ ಬೆಟ್ಲಕ್ಕಿ, ಉಮಾನಾಥ ಶೆಟ್ಟಿ, ಕುಶ ಆಚಾರ, ಪಾಂಡುರಂಗ ಶೆಟ್ಟಿ ಮತ್ತಿತರರು ಕಿರಿಯ ಯಕ್ಷಾಭಿಮಾನಿಗಳು ಸದಸ್ಯರಾಗಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ ಒಂದಷ್ಟು  ಸುಧಾರಣೆಯ ಸಂಕಲ್ಪದೊಂದಿಗೆ ಈ ಸಂಘಟನೆ ರಚನೆಯಾಗಿದೆ ಎಂಬುದು ಸಂಘಟನೆಯವರ ಅಭಿಪ್ರಾಯ.

ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನದಲ್ಲಿ ಇದೀಗ ಮೂಲ ತಿಟ್ಟು ಹಾಗೂ ಪೂರ್ವಚಾರಗಳು ಮಾಯವಾಗಿವೆ. ವೇಷಧಾರಿಗಳ  ಶಿಸ್ತು ಕೂಡ ತಪ್ಪಿದೆ. ಹೀಗಾಗಿ ಯಕ್ಷಗಾನದ ಸಮರ್ಪಕತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕೆಂಬ ಉದ್ದೇಶದಿಂದ ಸಮಾನ ಮನಸ್ಕರು ಸೇರಿ ಈ ಸಂಘಟನೆಯನ್ನು ಸ್ಥಾಪಿಸಿದ್ದೇವೆ. ಮನವಿ, ಪ್ರಾತ್ಯಕ್ಷಿಕೆ ಸಮ್ಮೇಳನ, ದಾಖಲೀಕರಣ ಮುಂತಾದವುಗಳ ಮೂಲಕ ಕಲೆಯ ಬೆಳವಣಿಗೆಗೆ ಪ್ರಯತ್ನಿಸಬೇಕೆನ್ನುವ ಉದ್ದೇಶ ಸಂಘಟನೆಯದ್ದು.
-ಬೇಳೂರು ರಾಘವ ಶೆಟ್ಟಿ ,  ಸಂಚಾಲಕರು ಯಕ್ಷಗಾನ ಜಾಗೃತಿ ವೇದಿಕೆ

 ರಾಜೇಶ ಗಾಣಿಗ ಅಚ್ಲಾಡಿ 

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Kota-Shrinivas

Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Agri

State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ

Byndoor-Vahical

Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.