ರಾಜ್ಯಗಳಲ್ಲಿ ಏಕ ಚುನಾವಣೆ ವ್ಯವಸ್ಥೆ ಅವಶ್ಯ
Team Udayavani, Dec 6, 2017, 12:32 PM IST
ಮಂಗಳೂರು: ಇಡೀ ದೇಶದಲ್ಲಿ ಏಕಚುನಾವಣೆ ಮಾಡುವ ಪರಿಕಲ್ಪನೆ ಪ್ರಧಾನಿಯವರ ಮುಂದಿದೆ. ಆದರೆ ಅದಕ್ಕೂ ಮುನ್ನಎಲ್ಲ ರಾಜ್ಯಗಳಲ್ಲಿ ಸ್ಥಳೀಯಾಡಳಿತ ಸಹಿತ ಏಕಚುನಾವಣೆ ವ್ಯವಸ್ಥೆ ಜಾರಿಯಾಗುವ ಅವಶ್ಯವಿದೆ ಎಂದು ಚಲನಚಿತ್ರ ನಟ, “ಪ್ರಜಾಕೀಯ’ ರೂವಾರಿ ಉಪೇಂದ್ರ ತಿಳಿಸಿದ್ದಾರೆ.
ನಗರದ ಪ್ರಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಇಡೀ ದೇಶಕ್ಕೆ ಏಕ ಚುನಾವಣೆಯಿಂದ ಪ್ರಾದೇಶಿಕ ಪಕ್ಷಗಳು ಮೂಲೆಗುಂಪಾಗಲಿವೆ. ರಾಜ್ಯಗಳಲ್ಲಿ ಇಂತಹ ಚುನಾವಣಾ ಪ್ರಕ್ರಿಯೆ ನಡೆದರೆ ಸೂಕ್ತ ಎಂದರು.
ಜನಪ್ರತಿನಿಧಿಗಳಿಂದ ಅಭಿವೃದ್ಧಿ ಯನ್ನು ಬಯಸುತ್ತೇವೆಯೇ ಹೊರತು ಪರಸ್ಪರ ಬೈದಾಡಿಕೊಳ್ಳುವುದನ್ನಲ್ಲ. ಜನಪ್ರತಿನಿಧಿಗಳ ತಪ್ಪು ಒಪ್ಪುಗಳನ್ನು ಅನು ಮಾನಪಡುವ ಬದಲು ತಮ್ಮ ಕ್ಷೇತ್ರದ ಸಮಗ್ರ ಬದಲಾವಣೆಗಾಗಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಜಾಕೀಯದಲ್ಲಿ ಅಭ್ಯರ್ಥಿಗಳ ಆಯ್ಕೆ ಅವರ ಕ್ಷೇತ್ರದಲ್ಲಿ ಆಗ ಬೇಕಾಗಿ ರುವ ಅಭಿವೃದ್ಧಿಯ ದೃಷ್ಟಿ ಕೋನದ ಲ್ಲಿಯೇ ನಡೆಯಲಿದೆ. ಆಯ್ಕೆ ಪ್ರಕ್ರಿಯೆಗಳೂ ನಡೆಯುತ್ತಿದ್ದು, ಮುಂದಿನ ಒಂದು ತಿಂಗಳಲ್ಲಿ ಮುಗಿಯಲಿದೆ. ಎಲ್ಲ 224 ಮಂದಿ ಅಭ್ಯರ್ಥಿಗಳು ಕೂಡ ಅವರವರ ಕ್ಷೇತ್ರದಲ್ಲಿ ಕಾರ್ಮಿಕರಂತೆ ಕೆಲಸ ಮಾಡುವವರಾಗಿರುತ್ತಾರೆ ಎಂದು ಉಪೇಂದ್ರ ತಿಳಿಸಿದರು.
ಅವ್ಯವಸ್ಥೆಗಳಿಗೆ ಪಾರ್ಟಿಫಂಡ್ ಮೂಲ
ರಾಜಕಾರಣದಲ್ಲಿರುವ ಎಲ್ಲ ಅವ್ಯ ವಸ್ಥೆಗಳಿಗೆ ಪಾರ್ಟಿ ಫಂಡ್ ಮೂಲವಾ ಗಿದೆ. ಹಾಗಾಗಿ ಆ ಹಣದ ವ್ಯವಹಾರ ಪ್ರಜಾಕೀಯದಲ್ಲಿಲ್ಲ. ಮಾಧ್ಯಮಗಳ ಮೂಲಕ ನನ್ನ ಆಶಯಗಳನ್ನು ಜನರ ಮುಂದಿಡುವ ಕೆಲಸ ಮಾಡುತ್ತಿದ್ದೇನೆ. ಭ್ರಷ್ಟಾಚಾರಕ್ಕೆ ಮೂಲ ಕಾರಣ ಶಿಕ್ಷಣ ಮತ್ತು ವೈದ್ಯಕೀಯ ರಂಗ ವ್ಯಾಪಾರವಾಗಿರುವುದು. ಈ ಎರಡೂ ಕ್ಷೇತ್ರಗಳು ಮುಕ್ತವಾಗಿದ್ದು, ಉಚಿತವಾಗಿದ್ದರೆ ಭ್ರಷ್ಟಾಚಾರ ಇರುವುದಿಲ್ಲ ಎಂದು ಉಪೇಂದ್ರ ಅಭಿಪ್ರಾಯಪಟ್ಟರು.
ಪ್ರಧಾನಿ-ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ
ಕೇಂದ್ರ ಸರಕಾರದ ನೋಟು ಅಮಾನ್ಯಿಕರಣದ ಕುರಿತು ಪ್ರತಿ ಕ್ರಿಯಿಸಿದ ಉಪೇಂದ್ರ, ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಕೆಲಸಗಳನ್ನೇ ಮಾಡುತ್ತಿದ್ದಾರೆ. ನೋಟು ಅಮಾನ್ಯಿàಕರಣ, ಜಿಎಸ್‌ಟಿ ಉತ್ತಮ ಯೋಜನೆಗಳಾದರೂ ಅವುಗಳ ಮಧ್ಯೆ ಅಂತರ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಸಿದ್ದ ರಾಮಯ್ಯನವರ ಸರಕಾರವೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅವರು ಸರಿ ಇಲ್ಲ, ಇವರು ಸರಿ ಇಲ್ಲ ಎಂದು ಹೇಳುತ್ತಾ ಕುಳಿತುಕೊಳ್ಳದೆ, ಅಭಿವೃದ್ಧಿಗಷ್ಟೇ ಒತ್ತು ನೀಡಬೇಕು ಹೆಸರು, ದುಡ್ಡು ಮಾಡಲು ರಾಜಕೀಯಕ್ಕೆ ಬಂದಿಲ್ಲ ಎಂದು ಅವರು ತಿಳಿಸಿದರು.
ಭಾವುಕ ವಿಷಯಗಳಿಂದ ಕೆರಳಿಸಬೇಡಿ
ರಾಜಕೀಯದಲ್ಲಿ ಧರ್ಮ ನುಸುಳುತ್ತಿರುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜಾತಿ-ಧರ್ಮಗಳು ನಮ್ಮ ಮನೆ-ಮನದಲ್ಲಿ ಇರಬೇಕು. ಸತ್ಯ ಇರುವಲ್ಲಿ ಧರ್ಮದ ಅಗತ್ಯವೇ ಇಲ್ಲ. ಅಸತ್ಯ ಇರುವಲ್ಲಿ ಧರ್ಮವನ್ನು ತೋರಿಸಿ ಲಾಭ ಪಡೆಯುವ ಪ್ರಯತ್ನ ನಡೆಯುತ್ತದೆ. ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳಲ್ಲಿ ಸುಧಾರಣೆ ಆಗಬೇಕೇ ವಿನಾ ಭಾವುಕ ವಿಷಯಗಳ ಮೂಲಕ ಜನರನ್ನು ಕೆರಳಿಸುವುದಕ್ಕೆ ಅರ್ಥವಿಲ್ಲ ಎಂದು ಪ್ರತಿಕ್ರಿಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.