ಮೈಸೂರಲ್ಲಿ ಶೀಘ್ರ ತಲೆ ಎತ್ತಲಿವೆ 20 ಇ-ಶೌಚಾಲಯಗಳು
Team Udayavani, Dec 6, 2017, 1:04 PM IST
ಮೈಸೂರು: ಮೈಸೂರಿಗೆ 3ನೇ ಬಾರಿಗೆ ಸ್ವಚ್ಛನಗರಿ ಕೀರ್ತಿ ತಂದುಕೊಡುವ ನಿಟ್ಟಿನಲ್ಲಿ ಸತತ ಪ್ರಯತ್ನದಲ್ಲಿರುವ ಮೈಸೂರು ಮಹಾ ನಗರಪಾಲಿಕೆ ನಗರದಲ್ಲಿನ ಸಾರ್ವಜನಿಕ ಶೌಚಾಲಯದ ಸಮಸ್ಯೆ ಹೋಗಲಾಡಿಸಲು ಶೀಘ್ರವೇ 20 ಇ-ಟಾಯ್ಲೆಟ್ಗಳನ್ನು ಆರಂಭಿಸಲು ಮುಂದಾಗಿದೆ.
ನಗರದಲ್ಲಿ ಸಾಕಷ್ಟು ಸಾರ್ವಜನಿಕ ಶೌಚಾಲಯಗಳಿದ್ದರೂ ಅವುಗಳ ನಿರ್ವಹಣೆ ಕಷ್ಟವಾಗಿದ್ದು, ಈ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಇ-ಟಾಯ್ಲೆಟ್ಗಳನ್ನು ಆರಂಭಿಸಲು ಮುಂದಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ನಗರದ ನಾನಾ ಕಡೆಗಳಲ್ಲಿ 20 ಇ-ಟಾಯ್ಲೆಟ್ಗಳು ಕಾರ್ಯಾರಂಭ ಮಾಡಲಿವೆ.
ನಗರ ಪಾಲಿಕೆ 2016ರಿಂದ ಇ-ಟಾಯ್ಲೆಟ್ ಆರಂಭಿಸಿದ್ದು, ಅದರಂತೆ ಪ್ರಸ್ತುತ ನಗರದ ಡಿ.ದೇವರಾಜ ಅರಸು ರಸ್ತೆ, ಜಗನ್ಮೋಹನ ಅರಮನೆ ಸಮೀಪ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಒಟ್ಟು 5 ಇ-ಟಾಯ್ಲೆಟ್ಗಳು ಕಾರ್ಯನಿರ್ವಹಿಸುತ್ತಿವೆ.
ಬಳಕೆಗೆ ಹಿಂದೇಟು: ನಗರದಲ್ಲಿ ಈವರೆಗೂ ಒಟ್ಟು 39 ಸಾರ್ವಜನಿಕ ಶೌಚಾಲಯಗಳಿದ್ದು, ಇದರ ನಿರ್ವಹಣೆ ಉತ್ತಮವಾಗಿರದ ಕಾರಣ ಜನರು ಇವುಗಳ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣದಿಂದಲೂ ನಗರದಲ್ಲಿ ಇ-ಟಾಯ್ಲೆಟ್ಗಳನ್ನು ಆರಂಭಿಸಲು ಪಾಲಿಕೆ ಚಿಂತನೆ ನಡೆಸಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಎಲ್ಲಾ 20 ಇ-ಟಾಯ್ಲೆಟ್ಗಳು ಆರಂಭಗೊಳ್ಳಲಿದೆ. ಇದಲ್ಲದೆ ಇ-ಟಾಯ್ಲೆಟ್ ಆರಂಭಿಸಲು ಕಡಿಮೆ ಜಾಗದ ಅಗತ್ಯವಿದ್ದು, ಒಂದು ಇ-ಟಾಯ್ಲೆಟ್ ತೆರೆಯಲು ನಗರ ಪಾಲಿಕೆಗೆ 7 ರಿಂದ 7.5 ಲಕ್ಷ ವೆಚ್ಚವಾಗಲಿದೆ.
ಇ-ಟಾಯ್ಲೆಟ್ ಬಳಕೆ ಹೇಗೆ?: ಒಂದು ಬಾರಿಗೆ ಒಬ್ಬರು ಮಾತ್ರ ಇ-ಟಾಯ್ಲೆಟ್ ಅನ್ನು 2 ರೂ.(ನಾಣ್ಯ) ಬಳಿಸಿ ಉಪಯೋಗಿಸಬಹುದಾಗಿದೆ. ಇ-ಟಾಯ್ಲೆಟ್ ಆಧುನಿಕ ತಂತ್ರಜಾnನ ಹೊಂದಿದ್ದು, ಯಾವುದೇ ವ್ಯಕ್ತಿ ಶೌಚಾಲಯದ ಬಳಕೆ ಮಾಡಿದ ಕೂಡಲೇ ನೀರು ಸ್ವಯಂಚಾಲಿತವಾಗಿ ಪ್ಲಶ್ ಆಗಲಿದ್ದು, ಇದಕ್ಕಾಗಿ 2000 ಲೀಟರ್ ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ಈ ಆಧುನಿಕ ಶೌಚಾಲಯವು ಸಂಪೂರ್ಣ ಸೆನ್ಸಾರ್ನಿಂದ ಕಾರ್ಯನಿರ್ವಹಿಸಲಿದ್ದು, ಹೀಗಾಗಿ ಇದನ್ನು ಡಿಜಿಟಲ್ ಶೌಚಾಲಯವೆಂದು ಸಹ ಕರೆಯಲಾಗುತ್ತಿದೆ.
ಪಬ್ಲಿಕ್ ಟಾಯ್ಲೆಟ್ ಬಂದ್: ಪಾಲಿಕೆ ನಿರ್ಧಾರದಂತೆ 20 ಇ-ಟಾಯ್ಲೆಟ್ ಆರಂಭವಾದಂತೆ ನಗರದಲ್ಲಿರುವ 39 ಸಾರ್ವಜನಿಕ ಶೌಚಾಲಯಗಳನ್ನು ಬಂದ್ ಮಾಡಲು ಪಾಲಿಕೆ ಚಿಂತನೆ ನಡೆಸಿದೆ. ಅಲ್ಲದೆ ಇ-ಟಾಯ್ಲೆಟ್ ಆರಂಭಿಸುವುದರಿಂದ ನಗರದ ಹಲವು ಭಾಗಗಳಲ್ಲಿ ಪ್ರಾರಂಭಿಸಬಹುದಾಗಿದ್ದು, ಒಂದೇ ರಸ್ತೆಯ ವಿವಿಧ ಕಡೆಗಳಲ್ಲಿ ಇದನ್ನು ತೆರೆಯಲು ಅನಕೂಲವಾಗಲಿದೆ.
ಆದರೆ, ನಿತ್ಯವೂ ನೂರಾರು ಮಂದಿ ಬಳಕೆ ಮಾಡುವ ಕಾರಣದಿಂದ ಪ್ರಮುಖ ಬಸ್ನಿಲ್ದಾಣಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಬಂದ್ ಮಾಡದಿರಲು ಪಾಲಿಕೆ ನಿರ್ಧರಿಸಿದೆ. 20 ಇ-ಟಾಯ್ಲೆಟ್ ಆರಂಭಗೊಂಡ ಬಳಿಕ ಈಗಿರುವ ಪಬ್ಲಿಕ್ ಟಾಯ್ಲೆಟ್ಗಳ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಿ ಪಾಲಿಕೆ ಕಚೇರಿ ಅಥವಾ ಇನ್ನಿತರ ಕಚೇರಿ ಆರಂಭಿಸಲು ಪಾಲಿಕೆ ಚಿಂತನೆ ನಡೆಸಿದೆ.
ನಗರದಲ್ಲಿ ಈಗಾಗಲೇ ಆರಂಭಿಸಿರುವ ಇ-ಟಾಯ್ಲೆಟ್ಗಳ ಬಗ್ಗೆ ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಹೊಸದಾಗಿ 20 ಇ-ಟಾಯ್ಲೆಟ್ ತೆರೆಯಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ನಗರದ ನಾನಾ ಭಾಗಗಳಲ್ಲಿ 20 ಇ-ಟಾಯ್ಲೆಟ್ಗಳು ಕಾರ್ಯಾರಂಭಗೊಳ್ಳಲಿದೆ.
-ಜಿ. ಜಗದೀಶ್,ಆಯುಕ್ತರು, ನಗರ ಪಾಲಿಕೆ
* ಸಿ. ದಿನೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?
Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು
MGM: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು; ಅಮೃತ ಮಹೋತ್ಸವ
SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್ ಬ್ಯಾಟರ್
Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.