ಚಿಣ್ಣರ ಬಿಂಬ ಮುಂಬಯಿ ಭಿವಂಡಿ ಶಿಬಿರದ ಪಾಲಕರ ಸಭೆ
Team Udayavani, Dec 6, 2017, 3:29 PM IST
ಭಿವಂಡಿ: ಮಕ್ಕಳಲ್ಲಿ ನಾಗರಿಕತೆ ರೂಪಿಸುವಲ್ಲಿ ನಮ್ಮ ಮಾತೃಭಾಷೆಯ ಕೊಡುಗೆ ಮಹತ್ತರವಾಗಿದೆ. ಎಳೆಯ ಪ್ರಾಯದಲ್ಲೇ ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಿದಾಗ ಅವರೆಲ್ಲ ಸತøಜೆಗಳಾಗಿ ಭವಿಷ್ಯದಲ್ಲಿ ಮನುಕುಲದ ವಿಶೇಷವಾಗಿ ನಮ್ಮ ದಕ್ಷಿಣೋತ್ತರ ಜಿಲ್ಲೆಯ ಸಂಸ್ಕಾರ ಉಳಿಸುವ ದೊಡ್ಡ ಕಾರ್ಯ ಅವರಿಂದ ಸಾಧ್ಯ. ಅಂತಹ ಕಾರ್ಯವನ್ನು ಚಿಣ್ಣರ ಬಿಂಬದ ಮೂಲಕ ನಮ್ಮೆಲ್ಲರ ಮಾರ್ಗದರ್ಶಕರು, ರೂವಾರಿಗಳು ಆದ ಪ್ರಕಾಶ್ ಭಂಡಾರಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಚಿಣ್ಣರ ಬಿಂಬದ ಮಾಧ್ಯಮ ವಕ್ತಾರ ರವಿ ಹೆಗ್ಡೆ ನುಡಿದರು.
ಇತ್ತೀಚೆಗೆ ಭಿವಂಡಿಯಲ್ಲಿ ಚಿಣ್ಣರ ಬಿಂಬ ಮುಂಬಯಿ ಇದರ ವತಿಯಿಂದ ನಡೆದ ಭಿವಂಡಿ ಶಿಬಿರದ ಪಾಲಕರ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಪ್ರಸ್ತುತ ವರ್ಷವು ಚಿಣ್ಣರ ಬಿಂಬವು ಡಿಸೆಂಬರ್ 24ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಒಂದು ದಿನದ ಸಂಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದರ ಸಂಪೂರ್ಣ ವಿವರವನ್ನು ಸಭೆಗೆ ನೀಡಿದರು. ಕಳೆದ ಹದಿನೈದು ವರ್ಷಗಳಲ್ಲಿ ಚಿಣ್ಣರ ಬಿಂಬವು ಮುಂಬಯಿ ಹಾಗೂ ಉಪನಗರಗಳಲ್ಲಿ ಮಾಡಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ರಾಂತಿಯ ಬಗ್ಗೆ ವಿವರಿಸಿ, ಇಂದು ಚಿಣ್ಣರ ಬಿಂಬದ ಮೂಲಕ ವಿದ್ಯಾರ್ಥಿಗಳು ಏರಿದ ಎತ್ತರದ ಬಗ್ಗೆ ತಮ್ಮ ಪಾಲಕರಿಗೆ ಮನವರಿಕೆ ಮಾಡಿದರು. ಕನ್ನಡ ಕಲಿಕಾ ವರ್ಗಗಳ ಮಹತ್ವದ ಬಗ್ಗೆ ಪಾಲಕರಿಗೆ ಮನದಟ್ಟು ಮಾಡಿದ್ದರು. ಇದರ ಜತೆಗೆ ತರಗತಿಗಳಲ್ಲಿ ಕನ್ನಡೇತರರ ಚಟುವಟಿಕೆಗಳಾದ ಭಜನೆ, ಯಕ್ಷಗಾನದ ಅರಿವು, ಯೋಗ, ಚಿತ್ರಕಲೆ, ಭಾಷಣದ ಬಗ್ಗೆ ಜ್ಞಾನ ಅರಿವು ಮೂಡಿಸುವ ಕಾರ್ಯದಲ್ಲಿ ಚಿಣ್ಣರ ಬಿಂಬವು ತೊಡಗಿದೆ. ಒಂದು ಸರಕಾರ ಅಥವಾ ಅಕಾಡೆಮಿ ಮಾಡತಕ್ಕಂತಹ ಕಾರ್ಯವನ್ನು ಚಿಣ್ಣರ ಬಿಂಬವು ಮಾಡುತ್ತಿದೆ. ಇದರ ಸದುಪಯೋಗವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳುವಂತೆ ಅವರು ವಿನಂತಿಸಿದರು.
ಡೊಂಬಿವಲಿ ಶಿಬಿರದ ಮಾರ್ಗದರ್ಶಕಿ ಮಂಜುಳಾ ಶೆಟ್ಟಿ ಅವರು ಮಾತನಾಡಿ, ತಾನು ವೈಯಕ್ತಿಕವಾಗಿ ಯಾವ ರೀತಿಯ ಪ್ರಯೋಜನವನ್ನು ಚಿಣ್ಣರ ಬಿಂಬದಿಂದ ಪಡೆದಿರುವೆ, ಅದು ತನ್ನ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎನ್ನುವುದನ್ನು ಸಭೆಗೆ ತಿಳಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಾವೆಲ್ಲರೂ ಸಮಾಜಮುಖೀಗಳಾಗಿ ಬಾಹ್ಯ ಪ್ರಪಂಚದಲ್ಲಿ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ತಾವು ಮೈಗೂಡಿಸಿಕೊಳ್ಳಬೇಕು. ಅದಕ್ಕಾಗಿ ಒಂದೇ ಪರಿವಾರದ ಸದಸ್ಯರಂತೆ ಇರುವ ಚಿಣ್ಣರ ಬಿಂಬದ ಸದಸ್ಯರಾಗಬೇಕು ಎಂದು ನುಡಿದರು.
ಶಿಬಿರದ ಮುಖ್ಯಸ್ಥೆ ಶೈಲಜಾ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆ ಪೂರ್ಣಿಮಾ ಎಂ. ಪೂಜಾರಿ, ಭಜನ ಶಿಕ್ಷಕಿ ಶೋಭಾ ಶಂಕರ್ ಪೂಜಾರಿ ಅವರು ಸಂದಭೋìಚಿತವಾಗಿ ಮಾತನಾಡಿದರು. ಭಾಸ್ಕರ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಜಯಂತ್ ಸಾಲ್ಯಾನ್, ಭಾಸ್ಕರ್ ಜಿ. ಶೆಟ್ಟಿ, ವನಿತಾ ಶೆಟ್ಟಿ, ಪುಷ್ಪಾ ಪೂಜಾರಿ, ಅನಿಪ್ರಿತಾ ಶೆಟ್ಟಿ, ವನಿತಾ ಶೆಟ್ಟಿ, ಕವಿತಾ ಶೆಟ್ಟಿ, ಮಹಾಬಲ ಶೆಟ್ಟಿ, ಸುಶಾಂತ್ ಶೆಟ್ಟಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.