ಕೆಡಿಪಿ ಸಭೆ: ಕಡಬ ತಾಲೂಕಿಗಾಗಿ ಹೋಬಳಿ ವಿಭಾಗಿಸುವಂತಿಲ್ಲ


Team Udayavani, Dec 6, 2017, 3:51 PM IST

6-Dec-12.jpg

ಪುತ್ತೂರು: ಕಡಬ ಹೊಸ ತಾಲೂಕು ರಚನೆ ಪ್ರಕ್ರಿಯೆಯ ಹಿನ್ನೆಲೆಯಲ್ಲಿ, ಗಡಿಭಾಗದ ಗ್ರಾಮಗಳ ಗೊಂದಲ ಮುಂದುವರಿದಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಹೋಬಳಿಗಳನ್ನು ವಿಭಾಗಿಸಬೇಡಿ ಎಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆ ಸೂಚಿಸಿದೆ. ಮಂಗಳವಾರ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಗೆ ಈ ಮಾಹಿತಿ ನೀಡಲಾಯಿತು.

ಕಡಬ ವಿಶೇಷ ತಹಶೀಲ್ದಾರ್‌ ಜಾನ್‌ಪ್ರಕಾಶ್‌ ಮಾತನಾಡಿ, ಗಡಿಗ್ರಾಮಗಳನ್ನು ಪುತ್ತೂರು ತಾಲೂಕಿಗೆ ಸೇರಿಸುವಂತೆ ಬಂದ ಮನವಿಗಳನ್ನು ಜಿಲ್ಲಾಧಿಕಾರಿಗೆ ರವಾನಿಸಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೊಸ ತಾಲೂಕು ರಚನೆ ವೇಳೆ ಹೋಬಳಿಗಳನ್ನು ವಿಭಾಗಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಮಾತನಾಡಿ, ಜನರ ವಿರೋಧ ಇದ್ದರೂ ಹೊಸ ತಾಲೂಕಿಗೆ ಸೇರಿಸುತ್ತೀರಾ? ಜನರ ಆಗ್ರಹಗಳಿಗೆ ಬೆಲೆಯೇ ಇಲ್ಲವೇ? ಜನರ ಹಿತದೃಷ್ಟಿಯಿಂದ ತಾಲೂಕು ರಚಿಸಬೇಕು ಎಂದು ವಿಶೇಷ ತಹಶೀಲ್ದಾರ್‌ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಸರಕಾರ ನಿರ್ಣಯಿಸಲಿದೆ
ಮಧ್ಯಪ್ರವೇಶಿಸಿದ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್‌, ಹೋಬಳಿ ವಿಭಾಗ ಮಾಡದಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಹೋಬಳಿ ಯನ್ನೇ ತುಂಡರಿಸಿ ಪ್ರತ್ಯೇಕ ತಾಲೂಕಿಗೆ ಸೇರಿಸು ವುದು ಭವಿಷ್ಯದ ದೃಷ್ಟಿಯಲ್ಲಿ ಸೂಕ್ತವಲ್ಲ ಎನ್ನುವುದು ಅದರ ಉದ್ದೇಶ. ಹಾಗೆಂದು ಜನರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದರ್ಥವಲ್ಲ. ಹೋಬಳಿಯ ಗ್ರಾಮಗಳನ್ನು ವಿಭಾಗಿಸುವುದು ಸರಕಾರದ ಮಟ್ಟದಲ್ಲಿ ಆಗಬೇಕು. ಜನರ ಮನವಿ, ಆಗ್ರಹವನ್ನು ಅಲ್ಲಿಗೆ ಕಳುಹಿಸಲಾಗು ವುದು. ಈ ಬಗ್ಗೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಿಯೋಗ ತೆರಳಿ ಸರಕಾರವನ್ನು ಒತ್ತಾಯಿಸಲಿದ್ದು, ಸರಕಾರವೇ ನಿರ್ಣಯಿಸಲಿದೆ ಎಂದರು.

ಯಾವ ಗ್ರಾಮವನ್ನು ಯಾವ ತಾಲೂಕಿಗೆ ಸೇರಿಸಬೇಕು ಎಂಬ ಚರ್ಚೆ ನಡೆಯುತ್ತಲೇ ಇದೆ. ಹೊಸ ತಾಲೂಕು ರಚನೆ ಆಗಬೇಕು ಎಂಬ ಹಿನ್ನೆಲೆಯಲ್ಲಿ ಇವೆಲ್ಲವೂ ಮುನ್ನೆಲೆಗೆ ಬಂದಿವೆ. ಗ್ರಾಮಸ್ಥರು ತಮ್ಮ ಆಗ್ರಹವನ್ನು ಇನ್ನೂ ಜಿಲ್ಲಾಧಿಕಾರಿಗೆ ಸಲ್ಲಿಸಬಹುದು. ಅವರು ಸರಕಾರಕ್ಕೆ ಕಳುಹಿಸುತ್ತಾರೆ. ತಹಶೀಲ್ದಾರ್‌ ಅವರಿಗೆ ನೀಡಿದರೂ, ಜಿಲ್ಲಾಧಿಕಾರಿಗೆ ಕಳುಹಿಸುತ್ತಾರೆ ಎಂದರು.

ಮಾತೃಪೂರ್ಣ ಯೋಜನೆಯ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸಿಡಿಪಿಒ ಶಾಂತಿ ಹೆಗ್ಡೆ, ನವೆಂಬರ್‌ 30ಕ್ಕೆ ಈ ಬಗ್ಗೆ ರಾಜ್ಯಮಟ್ಟದ ಸಭೆ ನಡೆದಿದೆ. ದಕ್ಷಿಣ ಕನ್ನಡದಲ್ಲಿ ಕೇವಲ ಶೇ. 8ರಷ್ಟು ಪ್ರಗತಿ ಕಂಡಿದೆ. ವಿಫಲಕ್ಕೆ ಕಾರಣ ಏನು ಎಂದು ಕೇಳಿದ್ದು, ಜಿಲ್ಲೆಯ ಪ್ರದೇಶಗಳು ಹೆಚ್ಚಾಗಿ ಗುಡ್ಡಗಾಡಿನಿಂದ ಕೂಡಿವೆ. ಗರ್ಭಿಣಿ ಹಾಗೂ ಬಾಣಂತಿಯರು ದೂರದ ಅಂಗನವಾಡಿಗೆ ಮಧ್ಯಾಹ್ನ ಬಂದು ಹೋಗುವುದು ಕಷ್ಟ. ಇದರಿಂದಾಗಿ ಯೋಜನೆಗೆ ಹಿನ್ನಡೆಯಾಗಿದೆ ಎಂದು ತಿಳಿಸಲಾಗಿದೆ ಎಂದರು. 

ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಮಾತನಾಡಿ, ಈ ಬಗ್ಗೆ ತಾ.ಪಂ. ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಿಕೊಟ್ಟರೆ ಉತ್ತಮ ಎಂದು ಅಭಿಪ್ರಾಯಿಸಿದರು.

ಹುದ್ದೆ ಭರ್ತಿಗೆ ಆನ್‌ಲೈನ್‌ ಅರ್ಜಿ
ಅಂಗನವಾಡಿ ಸಹಾಯಕ ಹಾಗೂ ಕಾರ್ಯಕರ್ತ ಹುದ್ದೆ ಖಾಲಿ ಇದೆಯೇ ಎಂದು ತಾಲೂಕು ಪಂಚಾಯತ್‌ ಅಧ್ಯಕ್ಷೆ ಭವಾನಿ ಚಿದಾನಂದ್‌ ಪ್ರಶ್ನಿಸಿದರು. ಉತ್ತರಿಸಿದ ಸಿಡಿಪಿಒ, ಖಾಲಿ ಇರುವ ಹುದ್ದೆಗಳ ಮಾಹಿತಿ ಈಗಾಗಲೇ ಮೇಲಧಿ ಕಾರಿಗಳಿಗೆ ನೀಡಲಾಗಿದೆ. ಈ ಹುದ್ದೆಗಳ ಭರ್ತಿ ಸರಕಾರದ ಹಂತದಲ್ಲೇ ಆಗಬೇಕಿದೆ. ಇದಕ್ಕಾಗಿ ಆನ್‌ಲೈನ್‌ ಅರ್ಜಿ ಆಹ್ವಾನಿಸಿ, ನೇರವಾಗಿ ಸರಕಾರದ ಹಂತದಲ್ಲೇ ಹುದ್ದೆ ತುಂಬಿಸುವ ಕೆಲಸ ನಡೆಯುತ್ತದೆ. ಡಿಸಿಯವರು ಈ ಬಗ್ಗೆ ನೋಟಿಫಿಕೇಶನ್‌ ಹೊರಡಿಸಲಿದ್ದಾರೆ ಎಂದರು.

ಇಲಾಖೆಗಳಿಂದ ಸರಿಯಾಗಿ ಪಾಲನಾ ವರದಿ ಬರುತ್ತಿಲ್ಲ ಎಂದು ತಾ.ಪಂ. ಅಧ್ಯಕ್ಷೆ ಗರಂ ಆದ ಘಟನೆಯೂ ಸಭೆಯಲ್ಲಿ ನಡೆಯಿತು. ಸರಿಯಾಗಿ ಪಾಲನಾ ವರದಿ ನೀಡದೇ ಇದ್ದರೆ, ಸಭೆಗೆ ಬರುವ ಅಗತ್ಯವೇನು? ಪಾಲನಾ ವರದಿಯೇ ಇಲ್ಲವೆಂದಾದರೆ ಸಭೆಯಲ್ಲಿ ಏನು ಮಾಹಿತಿ ನೀಡುತ್ತೀರಿ ಎಂದು ಪ್ರಶ್ನಿಸಿದರು. ಇನ್ನು ಮುಂದಕ್ಕೆ 10 ದಿನ ಮುಂಚಿತವಾಗಿಯೇ ಪಾಲನಾ ವರದಿ ಬರಬೇಕು. ಸ್ವಲ್ಪ ತಡವಾದರೂ ಕಚೇರಿಯಲ್ಲಿ ಬಂದು ನೀಡುವುದು ಬೇಡ. ನೇರವಾಗಿ ಅಧ್ಯಕ್ಷರಿಗೆ ಕೊಡಬೇಕು ಎಂದು ಸೂಚಿಸಿದರು.

ಗ್ರಾ.ಪಂ.ಗೆ ಸೌಲಭ್ಯ ನೀಡಿ
ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಮಾತನಾಡಿ, ಗ್ರಾ.ಪಂ.ನಲ್ಲಿ ಆರ್‌ ಟಿಸಿ ನೀಡುವ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು. ಆದರೆ ಗ್ರಾ.ಪಂ.ನಲ್ಲಿ ಆರ್‌ಟಿಸಿ ನೀಡುತ್ತಿಲ್ಲ. ಇದರಿಂದ ವ್ಯವಸ್ಥೆಯ ವೇಗ ಕುಂಠಿತವಾಗುತ್ತಿದೆ. ಸೂಕ್ತ ಸೌಲಭ್ಯವನ್ನು ನೀಡಿದರೆ ಜನರಿಗೆ ಸಹಾಯ ಆಗುತ್ತದೆ ಎಂದರು. ಉತ್ತರಿಸಿದ ತಹಶೀಲ್ದಾರ್‌ ಅನಂತಶಂಕರ, ಈಗಾಗಲೇ ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದಾದ ಬಳಿಕ ಸೌಲಭ್ಯ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಟಾಪ್ ನ್ಯೂಸ್

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.