ಆರ್ಬಿಐ ಖಡಕ್ ನೀತಿಗೆ ಮುಂಬಯಿ ಶೇರು 205 ಅಂಕ ಕುಸಿತ
Team Udayavani, Dec 6, 2017, 4:35 PM IST
ಮುಂಬಯಿ : ಬಡ್ಡಿದರ ಕಡಿತಕ್ಕೆ ಪೂರಕವಾದ ಹಣದುಬ್ಬರ ಸನ್ನಿವೇಶ ಇದ್ದ ಹೊರತಾಗಿಯೂ ಆರ್ಬಿಐ ತನ್ನ ಪ್ರಮುಖ ಬಡ್ಡಿದರಗಳನ್ನು ಇಳಿಸದೇ ಅವುಗಳನ್ನು ಯಥಾವತ್ ಉಳಿಸಿಕೊಂಡ ಕಾರಣ ನಿರಾಶೆಗೊಂಡ ಮುಂಬಯಿ ಶೇರು ಪೇಟೆ ಇಂದು ಬುಧವಾರದ ವಹಿವಾಟನ್ನು 205 ಅಂಕಗಳ ನಷ್ಟದೊಂದಿಗೆ 32,597.18 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಬ್ಯಾಂಕ್ ಶೇರುಗಳು ವಸ್ತುತಃ ಪ್ರಪಾತವನ್ನು ಕಂಡವು. ಬಾಶ್, ಹಿಂಡಾಲ್ಕೊ, ಈಶರ್ ಮೋಟರ್, ಅರಬಿಂದೋ ಫಾರ್ಮಾ, ವೇದಾಂತ ಶೇರುಗಳು ಕೂಡ ಹಿನ್ನಡೆಗೆ ಗುರಿಯಾದವು.
ಸೆನ್ಸೆಕ್ಸ್ನಂತೆ ಕುಸಿತ ಕಂಡ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 74.20 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,044.10 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಏರಿಕೆ ಭಾಗ್ಯ ಪಡೆದ ಪ್ರತೀ ಒಂದು ಶೇರಿಗೆ ವ್ಯತಿರಿಕ್ತವಾಗಿ ಎರಡು ಶೇರುಗಳು ಕುಸಿದಿರುವುದು ಗಮನಾರ್ಹ. ಬ್ಯಾಂಕ್ ನಿಫ್ಟಿ ಇಂದಿನ ವಹಿವಾಟಿನಲ್ಲಿ 273 ಅಂಕಗಳ ಭಾರೀ ಕುಸಿತವನ್ನು ಕಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.