ಗಡಿ ಧ್ವಂಸ ಪ್ರಕರಣದ ಮಾಹಿತಿ ಕೇಳಿ ಸುಪ್ರೀಂ ಆದೇಶ
Team Udayavani, Dec 7, 2017, 6:40 AM IST
ಬಳ್ಳಾರಿ: ಅಕ್ರಮ ಗಣಿಗಾರಿಕೆಯಿಂದ ಧ್ವಂಸಗೊಂಡಿದ್ದರೂ ಇದುವರೆಗೂ ಇತ್ಯರ್ಥವಾಗದ ಕರ್ನಾಟಕ-ಆಂಧ್ರಪ್ರದೇಶ ಗಡಿ ಗುರುತಿಸುವಿಕೆ ಕಾರ್ಯಕ್ಕೆ ಇರುವ ಅಡ್ಡಿ ಆತಂಕಗಳೇನು? ವಿವಾದ ಬಗೆಹರಿಸುವ ತಡವಾಗುತ್ತಿರುವ ಬಗ್ಗೆ ತಿಳಿಸುವಂತೆ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಸರ್ವೇ ಆಫ್ ಇಂಡಿಯಾಗೆ ಆದೇಶಿಸಿದೆ.
ಗಡಿ ಸಮಸ್ಯೆ ಕುರಿತಂತೆ ಆಂಧ್ರ ಸರ್ಕಾರ ಹಾಗೂ ಓಬಳಾಪುರಂ ಗಣಿ ಕಂಪನಿಗಳ ನಡುವೆ ಇರುವ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾ.ಮದನ್ ಬಿ.ಲೋಕೂರ್, ನ್ಯಾ. ದೀಪಕ್ ಗುಪ್ತಾ ಅವರಿದ್ದ ವಿಭಾಗೀಯ ಪೀಠ ಕಳೆದ ನ.14ರಂದು ಈ ಕುರಿತು ವಿಚಾರಣೆ ನಡೆಸಿ ಈ ಮಹತ್ವದ ಆದೇಶ ಹೊರಡಿಸಿದೆ.
ಆದೇಶದಲ್ಲೇನಿದೆ?: ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣದಲ್ಲಿ ಕರ್ನಾಟಕ-ಆಂಧ್ರ ರಾಜ್ಯಗಳ ನಡುವಿನ ಗಡಿ ಗುರುತಿಸುವಿಕೆ ಇತ್ಯರ್ಥವಾಗದೆ ಉಳಿದಿದೆ. ಈ ಕುರಿತಂತೆ ಸರ್ವೇ ಆಫ್ ಇಂಡಿಯಾದ ಉನ್ನತ ಅಧಿಕಾರಿಗಳು ವಿಚಾರಣೆಗೆ ಹಾಜರಾಗಬೇಕಿದೆ. ಜೊತೆಗೆ, ಗಡಿ ಗುರುತಿಸುವಿಕೆ ಕುರಿತಂತೆ ಯಾವಾಗ ಈ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು ಎನ್ನುವುದನ್ನು ತಿಳಿಸಬೇಕು ಹಾಗೂ ಈ ಕುರಿತಂತೆ ಇರಬಹುದಾದ ಅಡ್ಡಿ ಗಳೇನಾದರೂ ಇದ್ದರೆ ಡಿ. 8ರೊಳಗೆ ಸಮಗ್ರ ಮಾಹಿತಿ ಸಲ್ಲಿಸುವಂತೆ ವೀಭಾಗೀಯ ಪೀಠ ಸೂಚಿಸಿದೆ.
ಪ್ರಕರಣದ ಹಿನ್ನೆಲೆ: ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ 32 ಕಿ.ಮೀ. ಉದ್ದದ ಗಡಿ ಭಾಗವಿದ್ದು, ಇದರಲ್ಲಿ ಸಮೃದ್ಧ ಕಬ್ಬಿಣದ ಅದಿರಿನ ನಿಕ್ಷೇಪಗಳಿವೆ. 2004ರಲ್ಲಿ ಆಂಧ್ರದಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದ ಓಬಳಾಪುರಂ ಮೈನಿಂಗ್ ಕಂಪನಿ ಈ ಗಡಿ ಭಾಗದಲ್ಲಿರುವ ಅನಂತಪುರಂ ಜಿಲ್ಲೆಯ ಮಲಪನಗುಡಿ, ಸಿದ್ದಾಪುರ ಹಾಗೂ ಬಳ್ಳಾರಿ ಜಿಲ್ಲೆಯ ತುಮಟಿ, ವಿಟuಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 1000 ಮೀ. ಉದ್ದ, 500 ಮೀ. ಅಗಲ ಗಡಿ ಪ್ರದೇಶವನ್ನು ಧ್ವಂಸಗೊಳಿಸಿತ್ತು ಎಂದು ಆರೋಪಿಸಲಾಗಿತ್ತು.
ಇನ್ನೊಂದು ಕಡೆ ಕರ್ನಾಟಕದ ಬೆಳಗಲ್ಲು, ಹಲಕುಂದಿ, ಹೊನ್ನಳ್ಳಿ-ಆಂಧ್ರಪ್ರದೇಶದ ಓಬಳಾಪುರಂ, ಸಿದ್ದಾಪುರ
ಗಡಿ ಪ್ರದೇಶದಲ್ಲಿಯೂ 1000 ಮೀ., ಉದ್ದ 500ಮೀ., ಅಗಲದ ಗಡಿ ಭಾಗವನ್ನು ಧ್ವಂಸಗೊಳಿಸಿತ್ತು ಎಂಬ ಆರೋಪವಿದೆ.
ಈ ಕುರಿತಂತೆ ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲಿಸಿರುವ ಸಮಾಜ ಪರಿವರ್ತನಾ ಸಮುದಾಯಗಳ ಜೊತೆಗೆ, ಆಂಧ್ರಪ್ರದೇಶ ಸರ್ಕಾರ, ದಿ|ಎಸ್.ಕೆ. ಮೋದಿ ಒಡೆತನದ ವಿಜಿಎಂ ಮೈನಿಂಗ್ ಕಂಪನಿ ಮುಂತಾದವು ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದವು.
ಬಗೆ ಹರಿಯದ ವಿವಾದ: ಸುಪ್ರೀಂ ಕೋರ್ಟ್ 2013ರಲ್ಲಿ ಸರ್ವೇ ಆಫ್ ಇಂಡಿಯಾ(ಎಸ್‌ಒಐ)ಗೆ ಆದೇಶ ನೀಡಿ ಉಭಯ ರಾಜ್ಯಗಳ ಗಡಿ ಗುರುತಿಸಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ಸೂಚಿಸಿತ್ತು. ಅದೇ ವರ್ಷಎಸ್‌ಒಐ ಉನ್ನತಾಧಿಕಾರಿ ಸ್ವರ್ಣ ಸುಬ್ಟಾರಾವ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಆದರೆ, ಬೆದರಿಕೆ ಹಿನ್ನೆಲೆಯಲ್ಲಿ ಅವರು ಸಮೀಕ್ಷೆಗೆ ಆಗಮಿಸಲಿಲ್ಲ. ನಂತರ ಮತ್ತೂಬ್ಬ ಅಧಿಕಾರಿ ಎ.ಕೆ. ಪಾದ ನೇತೃತ್ವದ ಸಮಿತಿ ಸಮೀಕ್ಷೆಗೆ ಆಗಮಿಸಿತ್ತು. ಬಳಿಕ ಸಮಸ್ಯೆ ಇತ್ಯರ್ಥಕ್ಕೆ ಕರ್ನಾಟಕ-ಆಂಧ್ರಪ್ರದೇಶಗಳ ಜಂಟಿ ಸಮಿತಿಯನ್ನು ರಚಿಸಲಾಗಿತ್ತು. ಆದರೂ ಈ ಕುರಿತು ಹೊಸ ಬೆಳವಣಿಗೆಗಳು ಆಗದ ಹಿನ್ನೆಲೆಯಲ್ಲಿ ಸ್ವರ್ಣ ಸುಬ್ಟಾರಾವ್ ನೇತೃತ್ವದ ಮತ್ತೂಂದು ತಂಡ ಆಗಮಿಸಿ ಸಮೀಕ್ಷೆ ನಡೆಸಿ ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿತ್ತು. ವರದಿ ಸಲ್ಲಿಕೆಯಾದ ನಂತರವೂ ಈ ವಿವಾದ ಬಗೆಹರಿದಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಮತ್ತೂಮ್ಮೆ ವಿವಾದ ಬಗೆಹರಿಸಲು ಆಗಿರುವ ಅಡ್ಡಿಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.
ಗಡಿ ಭಾಗ ಧ್ವಂಸ ಪ್ರಕರಣ ಇತ್ಯರ್ಥಗೊಳಿಸಲು ಕರ್ನಾಟಕ ಸರ್ಕಾರಕ್ಕೆ ಇಚ್ಛಾ ಶಕ್ತಿ ಇಲ್ಲ. ಈ ಕುರಿತು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದೇನೆ. ಸುಪ್ರೀಂ ಕೋರ್ಟಿನ ಈ ಮಹತ್ವದ ಆದೇಶ ಗಮನಿಸಿದರೆ, ಸರ್ವೇ ಆಫ್ ಇಂಡಿ ಯಾದ ಅಧಿಕಾರಿಗಳು ಗಡಿ ಸಮಸ್ಯೆ ಪರಿಶೀಲಿಸಿದರೂ ಸುಪ್ರೀಂ ಕೋರ್ಟಿಗೆ ಈ ಕುರಿತು ವರದಿ ಸಲ್ಲಿಸಿಲ್ಲ ಎನಿಸುತ್ತಿದೆ. ಈ ಆದೇಶದಿಂದ ನಿಷ್ಕ್ರಿಯವಾಗಿದ್ದ ಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆಗೆ ಕೋರ್ಟ್ ಚುರುಕು ಮೂಡಿಸಿದೆ ಎಂಬ ಭಾವನೆ ಮೂಡಿದೆ.
– ಟಪಾಲ್ ಗಣೇಶ್, ಗಣಿ ಉದ್ಯಮಿ
– ಎಂ.ಮುರಳಿಕೃಷ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.