ಜನಿವಾರದಿಂದ ದೇಶ ನಾಶ: ಬೈಲೂರು ಶ್ರೀ
Team Udayavani, Dec 7, 2017, 7:10 AM IST
ಬೆಳಗಾವಿ: ಹತ್ತು ಪೈಸೆ ಕಿಮ್ಮತ್ತಿನ ದಾರ(ಜನಿವಾರ) ದೇಶವನ್ನು ಒಡೆದಿದೆ. ಈ ದಾರ(ಜನಿವಾರ)ದಿಂದ ನೇಣು ಹಾಕಿಕೊಂಡ್ರೂ ಪ್ರಾಣ ಹೋಗದು. ಆದರೆ, ಅದು ಜನರ ಪ್ರಾಣ ತೆಗೆಯುತ್ತಿದೆ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದರು.
ಸದಾಶಿವ ನಗರದ ಸ್ಮಶಾನದಲ್ಲಿ ನಡೆದ ಮೌಡ್ಯ ವಿರೋಧಿ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶ ವಿಭಜನೆ ಮಾಡಿ, ಗಂಡು ಹೆಣ್ಣು, ಬಡವ ಬಲ್ಲಿದ, ಮೇಲು ಕೀಳು ಎಂಬ ವಿಭಜನೆ ಮಾಡಿರುವ ಈ ದಾರವೇ ದೇಶವನ್ನು ನಾಶ ಮಾಡಿದೆ ಎಂದು ಟೀಕಿಸಿದರು. ಉಡುಪಿಯಲ್ಲಿ ನಡೆದ ಧರ್ಮ ಸಂಸದ್, ಚಾತುರ್ವರ್ಣದ ಬ್ರಾಹ್ಮಣತ್ವ ಸಂರಕ್ಷಿಸುವ ಹಾಗೂ ವೈದಿಕ ಶಾಹಿ ಉಳಿಸುವ ಸಂಸದ್ ಆಗಿದೆಯೇ ಹೊರತು ಹಿಂದೂ ಧರ್ಮವನ್ನು ರಕ್ಷಿಸುವ ಸಂಸದ್ ಅಲ್ಲ ಎಂದು ಟೀಕಿಸಿದರು. ಶಿಕ್ಷಣ ಕ್ರಾಂತಿ ಮಾಡಿದ ಸಾವಿತ್ರಿ ಬಾಯಿ ಫುಲೆ ಅವರನ್ನು ಪೂಜಿಸಿ. ಲಕ್ಷ್ಮೀ,ಸರಸ್ವತಿ, ಪಾರ್ವತಿಯನ್ನು ಪೂಜೆ ಮಾಡುವುದನ್ನು ಬಿಡಿ. ಗಂಗೆ ಇಲ್ಲದಿದ್ದಾಗ ಪಾರ್ವತಿ,ಪಾರ್ವತಿ ಇಲ್ಲದಿದ್ದಾಗ ಗಂಗೆ ಅನ್ನೋದು ಡ್ಯುಯಟ್ ಏನು? ಎಂದು ವ್ಯಂಗ್ಯವಾಡಿದರು.ಪುರಾಣ ಎಂಬುದು ಪುಂಡರ ಗೋಷ್ಠಿ, ಪಂಚಾಂಗ ಹೇಳುವವರು ಮಾನಸಿಕ ಭಯೋತ್ಪಾದಕರು ಎಂದು ಆರೋಪಿಸಿದರು.
ಸ್ಮಶಾನದಲ್ಲಿ ಮಲಗಿದ್ದರಿಂದ ಶುಕ್ರದೆಸೆ ಬಂತು’
ಬೆಳಗಾವಿ: “ಸ್ಮಶಾನದಲ್ಲಿ ಮಲಗುತ್ತಿರುವುದರಿಂದ ನನಗೆ ಶುಕ್ರದೆಸೆ ಬಂದಿದ್ದು, ಹುದಲಿಯಲ್ಲಿ ಶುಗರ್ ಫ್ಯಾಕ್ಟರಿ ಕಟ್ಟಿದ್ದೇನೆ. ಯರಗಟ್ಟಿಯಲ್ಲಿ ಮತ್ತೂಂದು ಕಾರ್ಖಾನೆ ಆರಂಭಿಸಲಾಗುವುದು’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಸ್ಮಶಾನದಲ್ಲಿ ಬುಧವಾರ ನಡೆದ ಮೌಡ್ಯ ವಿರೋಧಿ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜನವರಿಯಿಂದ ಮತ್ತೂಂದು ಸೆಕ್ಟರ್‌ಗೆ ಕಾಲಿಡಲಿದ್ದೇನೆ. ಇನ್ನು ಮುಂದೆ ಎರಡು ಹೆಲಿಕಾಪ್ಟರ್ ಖರೀದಿಸುತ್ತೇನೆ. ವಿಚಾರಧಾರೆ ಮಾತ್ರ ಇದೇ ರೀತಿ ಮುಂದುವರಿಯುತ್ತದೆ. ಗಳಿಸಿರುವ ಆದಾಯವನ್ನು ಸಮಾಜಕ್ಕಾಗಿ ಖರ್ಚು ಮಾಡುತ್ತೇನೆ’ ಎಂದರು.
ತಾಯಿ ಅನಾಥೆ ನನ್ನ ಜಾತಿ ಗೊತ್ತಿಲ್ಲ: ನಟ ಪ್ರಕಾಶ ರೈ
ಬೆಳಗಾವಿ: “ನಮ್ಮವ್ವ ಗದುಗಿನ ಬೆಟಗೇರಿಯಕ್ಕಿ. ಅನಾಥೆಯಾಗಿದ್ದ ನನ್ನ ತಾಯಿ ಬೆಳಗಾವಿಯ ಡಿವೈನ್ ಪ್ರೊವಿಡೆನ್ಸ್ ಅನಾಥ ಆಶ್ರಮದಲ್ಲಿ ಇದ್ದಳು. ಮಂಗಳೂರಿನ ನನ್ನ ಅಪ್ಪ ಅವ್ವನ ಮದುವೆಯಾದ. ನಮ್ಮವ್ವಗ ಆಕಿದ ನಂಬಿಕಿ ಅದ. ನಮ್ಮಪ್ಪಗ ಅವನದೇ ಆದ ನಂಬಿಕಿ ಅದ. ಆದರ ನನಗೆ ದೇವರ ಮ್ಯಾಲ ನಂಬಿಕಿ ಇಲ್ಲ. ನನ್ನ ಜಾತಿ ಇಲ್ಲ, ದೇವರು ಗೊತ್ತಿಲ್ಲ. ಜೀವನದಲ್ಲಿ ಕಷ್ಟ ಪಟ್ಟಿದ್ದೇನೆ. ಬೇರೆಯವರ ಕಷ್ಟ ಏನೆಂಬುದು ನನಗೆ ಗೊತ್ತಾಗುತ್ತದೆ’ ಎಂದು ಬೆಳಗಾವಿಯ ಜವಾರಿ ಭಾಷೆಯಲ್ಲಿಯೇ ನಟ ಪ್ರಕಾಶ ರೈ ಭಾಷಣ ಆರಂಭಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಭಾರತ ಮೂಢನಂಬಿಕೆಗಳ ತವರೂರಾಗಿದ್ದು, ಪಂಚಾಗ, ಜ್ಯೋತಿಷ್ಯ ಎಂಬುದು ಶುದಟಛಿ ಸುಳ್ಳು. ದೇಶದ ಸಂವಿಧಾನ ಕಂಟ್ರೋಲ್ ಮಾಡುವ ಸ್ಥಳ ನಾಗಪುರದಲ್ಲಿದೆ. ಹಿಂದೂ ರಾಷ್ಟ್ರ ಮಾಡಲು ಹುನ್ನಾರ ನಡೆದಿದ್ದು, ಬ್ರಾಹ್ಮಣ್ಯ ಪುರೋಹಿತರ ಹುನ್ನಾರ ಇದರಲ್ಲಿದೆ.
– ಡಾ. ಪುರುಷೋತ್ತಮ ಬಿಳಿಮಲೆ, ದೆಹಲಿ ಜೆಎನ್‌ಯು ಕನ್ನಡ
ವಿಭಾಗದ ಮುಖ್ಯಸ್ಥ
ಕೇಂದ್ರ ಸಚಿವರೊಬ್ಬರು ಉಡುಪಿಯಲ್ಲಿ ರಾಷ್ಟ್ರೀಯತೆ ಹಾಗೂ ಹಿಂದುತ್ವ ಒಂದೇ ಎಂದು ಹೇಳಿಕೆ ನೀಡಿದ್ದಾರೆ. ಈ ತರಹದ ಶಕ್ತಿಗಳು ಆಳುವ ಹಾಗೂ ತುಳಿಯುವ ಧೋರಣೆ ಹೊಂದಿದ್ದು, ಇವುಗಳನ್ನು ಬೆಳೆಯಲು ಬಿಡಬಾರದು.
- ಪ್ರಕಾಶ ರೈ, ಬಹುಭಾಷಾ ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
Basavaraj Horatti: ಸಂವಿಧಾನ ಸ್ವಾತಂತ್ರ್ಯ ಭಾರತದ ಮೈಲಿಗಲ್ಲು: ಹೊರಟ್ಟಿ
ಲಾಕಪ್‌ಡೆತ್: ಹೆಡ್ ಕಾನ್‌ಸ್ಟೆಬಲ್ ಸೇರಿ ನಾಲ್ವರು ಪೊಲೀಸರಿಗೆ 7 ವರ್ಷ ಜೈಲು
Belagavi: ಯುವಕನ ಮೇಲೆ ಗುಂಡಿನ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ
Satish Jarkiholi: ಪಕ್ಷ ಸಂಘಟನಾ ಶಕ್ತಿ ಇದ್ದವರ ಬಳಸಿಕೊಳ್ಳಿ: ಸತೀಶ್ ಜಾರಕಿಹೊಳಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ
Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ
Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್!
Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ
Cyber Crime: ಸೈಬರ್ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.