ಒಖಿ ಪರಿಣಾಮ: ಮೀನುಗಾರಿಕೆಗೆ ಕೋಟ್ಯಂತರ ರೂ. ನಷ್ಟ
Team Udayavani, Dec 7, 2017, 11:53 AM IST
ಮಲ್ಪೆ: ಒಖಿ ಚಂಡಮಾರುತದ ಪರಿಣಾಮದಿಂದಾಗಿ ಕರಾವಳಿಯ ಮೀನು ಗಾರಿಕಾ ಉದ್ಯಮ ಸ್ತಬ್ಧªಗೊಂಡಂತಾಗಿದೆ.
ಸದಾ ಮೀನುಗಾರಿಕಾ ಚಟುವಟಿಕೆಗಳಿಂದ ತುಂಬಿದ್ದ ಬಂದರು ನಾಲ್ಕೈದು ದಿನಗಳಿಂದ ಬಿಕೋ ಎನ್ನುತ್ತಿದೆ. ಒಂದು ವಾರದಿಂದ ಬೋಟ್‌ಗಳು ಕಡಲಿಗೆ ಇಳಿಯದ ಕಾರಣ, ಮೀನುಗಾರಿಕೆ ಉದ್ಯಮ ಕೋಟ್ಯಂತರ ರೂ. ನಷ್ಟ ಅನುಭವಿಸಿದೆ. ಸಹಸ್ರಾರು ಮೀನುಗಾರ ಕುಟುಂಬಗಳು, ಮೀನುಗಾರ ಕಾರ್ಮಿಕರು, ಮಹಿಳೆಯರು ಸೇರಿದಂತೆ ಹಲವರು ಅರ್ಥಿಕ ಹೊಡೆತ ಎದುರಿಸುವಂತಾಗಿದೆ.
ಮಲ್ಪೆ ಸೇರಿದಂತೆ ಮಂಗಳೂರು, ಹೊನ್ನಾವರ, ಕಾರವಾರ ಮತ್ತು ಹೊರರಾಜ್ಯದ ಬಂದರುಗಳಲ್ಲೂ ದೋಣಿಗಳು ಲಂಗರು ಹಾಕಿವೆ. ಬುಧವಾರವೂ ತೀರ ಪ್ರದೇಶದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಸಮುದ್ರದಲ್ಲಿ ದೊಡ್ಡ ಅಲೆಗಳು ಏಳುತ್ತಿವೆ. ಡೀಪ್‌ಸೀ ಟ್ರಾಲ್ ಬೋಟ್, ಪಸೀìನ್, ಸಣ್ಣ ಟ್ರಾಲ್ ಬೋಟ್ ಸೇರಿದಂತೆ ಎಲ್ಲ ದೋಣಿಗಳು ಬಂದರಿನಲ್ಲಿ ಲಂಗರು ಹಾಕಿವೆ. ಮತ್ತೆ ಚಟುವಟಿಕೆಗಳು ಆರಂಭವಾಗಬೇಕಾದರೆ ನಾಲ್ಕೈದು ದಿನ ಬೇಕು ಎನ್ನುತ್ತಾರೆ ಮೀನುಗಾರರು.
ಬೋಟ್‌ಗಳಿಗೆ ಹಾನಿ
ಮಲ್ಪೆ ಬಂದರಿನಲ್ಲಿ ಸ್ಥಳೀಯ ಬೋಟ್‌ಗಳಲ್ಲದೆ ಕೇರಳ, ಮಂಗಳೂರು ಬಂದರಿನ ಸುಮಾರು 200 ಕ್ಕೂ ಅಧಿಕ ಬೋಟ್‌ಗಳು ಬಂದಿವೆ. ನಿಲುಗಡೆಗೆ ಸ್ಥಳ ಕಡಿಮೆ ಇದ್ದು, ಒಂದಕ್ಕೊಂದು ತಾಗಿಸಿ ನಿಲ್ಲಿಸಲಾಗಿದೆ. ಗಾಳಿಯ ಸಮಸ್ಯೆಯಿಂದ ಬೋಟ್‌ಗಳೂ ಹಾನಿಗೀಡಾಗಿವೆ.
ಮೀನು ದುಬಾರಿ
ಮೀನುಗಾರಿಕೆ ಸ್ತಬ್ಧಗೊಂಡ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿ ಚಂಡಮಾರುತಕ್ಕೆ ಮೊದಲು ಕೆ.ಜಿ. ಗೆ 350 ರೂ. ಗೆ ಸಿಗುತ್ತಿದ್ದ ಪಾಪ್ಲೆಟ್ 450 ರೂ. ಗೆ ತಲುಪಿದ್ದರೆ, ದೊಡ್ಡಗಾತ್ರದ ಬಂಗುಡೆ ಕೆ.ಜಿ.ಗೆ 90 ರೂ. ಇದ್ದದ್ದು ಈಗ 160 ರೂ. ಏರಿಕೆಯಾಗಿದೆ. ಅದರಂತೆ 350 ರೂ.ಇದ್ದ ಅಂಜಲ್ ಕೆ.ಜಿ. ಗೆ 400 ರಿಂದ 430 ರೂ. ಆಗಿದೆ. ಇನ್ನಿತರ ಮೀನುಗಳ ದರವೂ ಏರಿಕೆಯಾಗಿದೆ.
ಇದು ಹುಣ್ಣಿಮೆಯ ಕಳ್ಳ ನೀರು
ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಯಾಗಲು ಮುಖ್ಯಕಾರಣ ಚಂಡಮಾರುತ ಅಲ್ಲ. ಹುಣ್ಣಿಮೆ ಕಳ್ಳನೀರು ಎನ್ನುತ್ತಾರೆ ಹಿರಿಯ ಮೀನುಗಾರ ಮುಖಂಡರಾದ ಗೋಪಾಲ ಕುಂದರ್. ಅವರ ಪ್ರಕಾರ ಸಾಮಾನ್ಯವಾಗಿ ಹುಣ್ಣಿಮೆ ಸಮಯದಲ್ಲಿ ಸಮುದ್ರದ ನೀರಿನ ಮಟ್ಟ ಹೆಚ್ಚಾಗಿರುತ್ತದೆ. ಆದರಲ್ಲೂ ನವೆಂಬರ್-ಡಿಸೆಂಬರ್ ತಿಂಗಳ ಹುಣ್ಣಿಮೆಯ ಕೆಲವು ದಿನಗಳಲ್ಲಿ ಸಮುದ್ರ ನೀರಿನ ಮಟ್ಟ ಮೂರ್‍ನಾಲ್ಕು ಅಡಿ ಹೆಚ್ಚಿರುತ್ತದೆ. ನೀರು ಮೇಲೆ ಬಂದು ತೋಟಕ್ಕೆ ನುಗ್ಗುತ್ತದೆ. ಇದು ಹಿಂದಿನ ಕಾಲದಿಂದಲೂ ಆಗುತ್ತಿರುವಂಥದ್ದು. ನಮ್ಮ ಹಿರಿಯರು ಇದನ್ನು ಕಳ್ಳನೀರು ಎನ್ನುತ್ತಿದ್ದರು. ಇದರ ಬಗ್ಗೆ ಮೊದಲೇ ಅರಿತಿದ್ದ ಹಿರಿಯರು ದೋಣಿಗಳನ್ನು ತಮ್ಮ ತೋಟದಲ್ಲಿ ತಂದು ಇಡುತ್ತಿದ್ದರು. ನೀರಿನ ಮಟ್ಟ ಇಳಿದಾಗ ಮತ್ತೆ ಸಮುದ್ರ ತೀರಕ್ಕೆ ದೋಣಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ಬಾರಿ ನೀರಿನ ಮಟ್ಟ ಏರಿಕೆ ಮತ್ತು ಚಂಡಮಾರುತದ ಪರಿಣಾಮ ಏಕಕಾಲದಲ್ಲಿ ಆಗಿದ್ದರಿಂದ ಮಳೆಗಾಲದಂತೆ ದೊಡ್ಡ ಪ್ರಮಾಣದ ಅಲೆಗಳು ಎದ್ದು ಕೆಲವೆಡೆ ಸಮುದ್ರ ಕೊರೆತಕ್ಕೆ ಕಾರಣವಾಗಿದೆ ಎನ್ನುತ್ತಾರೆ.
ಮತ್ತಷ್ಟು ಹೊಡೆತ
ಈ ಬಾರಿ ಆರಂಭದಿಂದಲೂ ಕುಂಠಿತವಾಗಿ ಸಾಗಿದ್ದ ಮೀನುಗಾರಿಕೆಗೆ ಚಂಡಮಾರುತ ಮತ್ತಷ್ಟು ಹೊಡೆತ ಕೊಟ್ಟಿದೆ. ಉತ್ತಮ ಆದಾಯ ಗಳಿಸುವ ಕನಸಿಗೆ ತಣೀ¡ರೆರಚಿದೆ. ಗಾಳಿ ಪೂರ್ಣ ನಿಂತರೆ ಮಾತ್ರ ಒಂದೆರಡು ದಿನದಲ್ಲಿ ಮೀನುಗಾರಿಕೆಗೆ ತೆರಳಬಹುದು.
– ಸತೀಶ್ ಕುಂದರ್, ಅಧ್ಯಕ್ಷರು ಮೀನುಗಾರರ ಸಂಘ, ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.