ಹನುಮ ಜಯಂತಿ ಮಾಡೇ ಮಾಡ್ತೇವೆ: ಪ್ರತಾಪ್‌ಸಿಂಹ
Team Udayavani, Dec 7, 2017, 12:47 PM IST
ಮೈಸೂರು: ಹುಣಸೂರಿನಲ್ಲಿ ಸದ್ಯದಲ್ಲಿಯೇ ವಿಜೃಂಭಣೆಯಿಂದ ಹನುಮಜಯಂತಿ ಮೆರವಣಿಗೆ ಮಾಡುತ್ತೇವೆ. ಇದು ನಮ್ಮ ಸಂಕಲ್ಪ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬುಧವಾರ ನಡೆದ ಹನುಮ ಯಜ್ಞದಲ್ಲಿ ಪಾಲ್ಗೊಂಡು ಡಿ.1ರಂದು ಧರಿಸಿದ್ದ ಹನುಮಾಲೆ ತೆಗೆದರು.
ಈ ವೇಳೆ ಮಾತನಾಡಿ, ಕಾರ್ಯನಿಮಿತ್ತ ಬೇರೆ ಕಡೆಗೆ ಹೋಗಬೇಕಿರುವುದರಿಂದ ಹನುಮ ಮಾಲೆ ತೆಗೆಯುತ್ತಿದ್ದೇನೆ. ಆದರೆ, ಹನುಮ ಜಯಂತಿ ಮೆರವಣಿಗೆ ನಡೆಸುವುದು ನಮ್ಮ ಸಂಕಲ್ಪ. ಮೆರವಣಿಗೆ ನಡೆದೆ ನಡೆಯುತ್ತೆ. ಇದಕ್ಕೆ ಜಿಲ್ಲಾಡಳಿತದಿಂದಲೂ ಸಹಕಾರ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಡಿ.3ರಂದು ಹುಣಸೂರಿನಲ್ಲಿ ಏನು ನಡೆಯಿತು, ಯಾರು ದರ್ಪದಿಂದ ಯಾಕಾಗಿ ನಮ್ಮ ನಂಬಿಕೆಗಳ ಮೇಲೆ ಪ್ರಹಾರ ಮಾಡಿದರು ಎಂಬುದನ್ನು ಹುಣಸೂರಿನ ಜನತೆ ನೋಡಿದ್ದಾರೆ. ಭಕ್ತಿಗೆ ನಿಷ್ಠೆಗೆ ಮಾತ್ರವಲ್ಲ, ಶಕ್ತಿಗೂ ಹನುಮ ಪ್ರೇರಣೆ. 23 ವರ್ಷಗಳ ಕಾಲ ರಂಗನಾಥ ಬಡಾವಣೆಯಿಂದ ಆರಂಭವಾಗಿ ನಗರದಲ್ಲಿ ವಿಜೃಂಭಣೆಯಿಂದ ಹನುಮ ಜಯಂತಿ ಮೆರವಣಿಗೆ ನಡೆದಿದೆ.
ಆದರೆ, ಕಳೆದ 2 ವರ್ಷಗಳಿಂದ ಮೆರವಣಿಗೆ ಮೇಲೆ ನಿರ್ಬಂಧ, ನಿಷೇಧ ಹೇರಿ ಕಾನೂನು ಸುವ್ಯವಸ್ಥೆ ನೆಪದಲ್ಲಿ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಚಾಮುಂಡೇಶ್ವರಿ ಅವರಿಗೆ ತಕ್ಕ ಶಾಸ್ತಿ ಮಾಡ್ತಾಳೆ, ಕಾಲವೇ ಇಂತವರಿಗೆ ಉತ್ತರ ಕೊಡುತ್ತೆ, ಆ ಕಾಲವೂ ಸನ್ನಿಹಿತ ಎಂದರು.
ನಮ್ಮ ಹಬ್ಬ-ಹರಿದಿನ ಆಚರಣೆ ತಡೆಯುವ ಹಕ್ಕು ಯಾರಿಗೂ ಇಲ್ಲ. ಹುಣಸೂರಲ್ಲಿ ಇಂತಹದೊಂದು ಪರಿಸ್ಥಿತಿ ನಿರ್ಮಾಣವಾಗಲು ಕಾರಣರು ಯಾರು ಎಂಬುದು ಜನತೆಗೆ ಗೊತ್ತಿದೆ. ಕಾನೂನು, ಕಾಯ್ದೆ ನೆಪದಲ್ಲಿ ಹನುಮ ಭಕ್ತರಿಗೆ ತೊಂದರೆ ಕೊಡಲು ನೋಡಿದರೆ ಅವರ ವಿರುದ್ಧ ನಾವೂ ಕಾನೂನು ಹೋರಾಟ ಮಾಡುತ್ತೇವೆಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಸ್.ಯೋಗಾನಂದ ಕುಮಾರ್, ಹನುಮಂತೋತ್ಸವ ಸಮಿತಿ ಅಧ್ಯಕ್ಷ ವೆಂಕಟನಾರಾಯಣ ದಾಸ್, ನೂರಾರು ಹನುಮ ಭಕ್ತರು ಹನುಮ ಜಯnದಲ್ಲಿ ಪಾಲ್ಗೊಂದು ಹನುಮ ಮಾಲೆ ತೆಗೆದರು.
ಪಿಎಫ್ಐ ಪೋಸ್ಟರ್‌ಗೆ ಅವಕಾಶವಿದೆಯೇ?
ಮೈಸೂರು: ಇಂತಹ ಪೋಸ್ಟರ್‌ಗಳಿಗೂ ಅವಕಾಶವಿದೆಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲೆಯಲ್ಲಿ ಏನಾಗುತ್ತಿದೆ ನೋಡಿ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಫೋಸ್ಟರ್‌ಅನ್ನು ಸಾಮಾಜಿಕ ಜಾಲದಲ್ಲಿ ಹಾಕಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಬಾಬರಿ ಮಸ್ಜಿದ್ ಪುನರ್ ನಿರ್ಮಿಸಿ; ನಾವು ಮರೆಯದಿರೋಣ, ದ್ರೋಹದ 25 ವರ್ಷಗಳು ಶೀರ್ಷಿಕೆ ಹೊತ್ತ ಪೋಸ್ಟರ್‌ಗಳು ಜಿಲ್ಲೆಯ ಕೆ.ಆರ್.ನಗರದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿವೆ. ಈದ್ ಮಿಲಾದ್, ಟಿಪ್ಪು ಜಯಂತಿ ಮೆರವಣಿಗೆಗಳು ಸರಿ, ಇಂತಹ ಪೋಸ್ಟರ್‌ಗಳನ್ನು ಹಾಕಲು ಅವಕಾಶವಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.