ಮನೆ ಮೇಲೆ ಉರುಳಿ ಬಿದ್ದ ಕಾರು :ಎಸ್.ಐ.ಪಾರು
Team Udayavani, Dec 8, 2017, 9:49 AM IST
ಸುಳ್ಯ: ನಿಯಂತ್ರಣ ತಪ್ಪಿದ ಕಾರೊಂದು ಹೊಂಡಕ್ಕೆ ಉರುಳಿ ಮನೆಮೇಲೆ ಬಿದ್ದಿದ್ದು, ಕಾರು ಚಲಾಯಿಸುತ್ತಿದ್ದ ಪೊಲೀಸ್ ಅಧಿಕಾರಿಚ ಅಪಾಯದಿಂದ ಪಾರಾದ ಘಟನೆ ಗುರುವಾರ ಬೆಳಗ್ಗಿನ ಜಾವ ಜಾಲೂÕರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಸುಬ್ರಹ್ಮಣ್ಯ ಠಾಣಾ ಎಸ್.ಐ. ಗೋಪಾಲ್ ಉಬರಡ್ಕ ಸಮೀಪ ಜರಗಿದ ಧಾರ್ಮಿಕ ಕಾರ್ಯಕ್ರಮವೊಂದನ್ನು ಮುಗಿಸಿ ಮನೆಮಂದಿಯನ್ನು ಅಲ್ಲೇ ಬಿಟ್ಟು ಕರ್ತವ್ಯಕ್ಕೆಂದು ಆಲ್ಟೋ ಕಾರನ್ನು ಸ್ವತಃ ಚಲಾಯಿಸಿಕೊಂಡು ಸುಬ್ರಹ್ಮಣ್ಯಕ್ಕೆ ಹೊರಟಿದ್ದರು. ನಾರ್ಣಕಜೆ ಸಮೀಪದ ಕುಂಟಿಹಿತ್ಲುವಿನ ತಿರುವೊಂದರಲ್ಲಿ ನಿಯಂತ್ರಣ ತಪ್ಪಿ ಸುಮಾರು ನೂರಡಿ ಆಳಭಾಗದ ನಡುಮನೆ ಪುರುಷೋತ್ತಮಅವರ ಮನೆಯ ಹಿಂಭಾಗದ ಕೊಟ್ಟಿಗೆಗೆ ಉರುಳಿಬಿತ್ತು.
ಗೋಪಾಲ್ ತಲೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿ ದ್ದಾರೆ. ಕಾರು ಸ್ವಲ್ಪ ಪ್ರಮಾಣದಲ್ಲಿ ನಜ್ಜುಗುಜ್ಜಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Saif Ali Khan;ಸಂಕಷ್ಟದಲ್ಲಿ ನೆರವಾದ ಆಟೋ ಚಾಲಕನಿಗೆ ಧನ್ಯವಾದ ಹೇಳಲು ಮರೆಯದ ನಟ
Sandalwood: ಥಿಯೇಟರ್, ಓಟಿಟಿ ಬಳಿಕ ಟಿವಿಯಲ್ಲಿ ಬರಲಿದೆ ʼಭೈರತಿ ರಣಗಲ್ʼ: ಯಾವಾಗ, ಎಲ್ಲಿ?
Kollegala: ಆನೆ ದಂತ ಸಾಗಿಸುತ್ತಿದ್ದ ಮೂವರಲ್ಲಿ ಇಬ್ಬರ ಬಂಧನ, ಓರ್ವ ಪರಾರಿ
Actress: ʼನೀವು ಹಿಂದುವೋ- ಮುಸಲ್ಮಾನರೋ..” ಧರ್ಮದ ಪ್ರಶ್ನೆಯಿಂದ ಮನೆ ಹುಡುಕಲು ಪರದಾಡಿದ ನಟಿ
Selfie; ಪತ್ನಿಯೊಂದಿಗೆ ಕ್ಲಿಕ್ಕಿಸಿದ ಸೆಲ್ಫಿ ನಕ್ಸಲ್ ಉನ್ನತ ನಾಯಕನಿಗೆ ಮುಳುವಾಯಿತು