ಪಂಪ್‌ವೆಲ್‌ನಲ್ಲಿ ಮರೀಚಿಕೆಯಾಗುಳಿದ ಶೌಚಾಲಯ
Team Udayavani, Dec 8, 2017, 11:36 AM IST
ಪಂಪ್‌ವೆಲ್: ನಗರದ ಪ್ರಮುಖ ಜಂಕ್ಷನ್ ಪಂಪ್‌ವೆಲ್‌ನಲ್ಲಿ ಶೌಚಾಲಯಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ, ಇಲ್ಲಿನ ಫ್ಲೈಓವರ್ ಕಾಮಗಾರಿ ಪೂರ್ಣಗೊಳ್ಳದೆ ಶೌಚಾಲಯ ನಿರ್ಮಾಣ ಕಷ್ಟವಾಗಿದೆ ಎಂದು ಪಾಲಿಕೆ ಹೇಳುತ್ತಿದೆ.
ಇಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು ಬಸ್ ಹಿಡಿದು ಪ್ರಯಾಣ ಬೆಳೆಸುತ್ತಾರೆ. ದೂರದ ಊರಿಂದ ಬರುವವರು ಇಲ್ಲಿ ಇಳಿಯುತ್ತಾರೆ. ಬಸ್ಸೇರುವ ಮುನ್ನ ಅಥವಾ ಬಸ್ಸಿಂದ ಇಳಿದೊಡನೆ ಇಲ್ಲಿ ಶೌಚಾಲಯಕ್ಕಾಗಿ ಹುಡುಕಾಡುತ್ತಾರೆ. ಇಲ್ಲಿ ನಿರ್ಮಾಣವಾಗಬೇಕಿದ್ದ ಬಸ್ ನಿಲ್ದಾಣವೂ ವಿಳಂಬವಾಗಿದ್ದು, ಶೌಚಾಲಯ ನಿರ್ಮಾಣವಾಗುವ ಲಕ್ಷಣ ವೂ ಗೋಚರಿಸುತ್ತಿಲ್ಲ. ಬಸ್ ನಿಲ್ದಾಣ ನಿರ್ಮಾಣಕ್ಕೆ ಅಡ್ಡಿಯಿದ್ದರೂ, ಶೌಚಾಲಯಕ್ಕೆ ತೊಂದರೆಯಿಲ್ಲ ಎಂಬುದು ನಾಗರಿಕರ ಅಭಿಪ್ರಾಯ.
2013ರಲ್ಲಿ ಬೇಡಿಕೆ!
ಪಂಪ್‌ವೆಲ್‌ನಿಂದ ಪುತ್ತೂರು, ಮಡಿಕೇರಿ, ಮೈಸೂರು, ಬೆಂಗಳೂರು, ಕಾಸರಗೋಡು, ಧರ್ಮಸ್ಥಳ ಮೊದಲಾದ ಪ್ರದೇಶಗಳಿಗೆ ನಿತ್ಯ ನೂರಾರು ಬಸ್ಸುಗಳು ಸಂಚರಿಸುತ್ತವೆ. ಈ ನಿಟ್ಟಿನಲ್ಲಿ ಪಂಪ್‌ವೆಲ್‌ನಲ್ಲಿ ಸಾರ್ವಜನಿಕ ಶೌಚಾಲಯ ಬೇಕು ಎಂದು ಪುತ್ತೂರಿನ ಸರ್ವೆಯ ಬಳಕೆದಾರರ ಹಿತರಕ್ಷಣ
ವೇದಿಕೆಯ ಬಾಲಚಂದ್ರ ಸೊರಕೆ ಅವರು 2013ರಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮನಪಾ ಆಯುಕ್ತರಿಗೆ ಮನವಿ ಮಾಡಿದ್ದರು. ಇವರಿಬ್ಬರೂ ಮನವಿಗೆ ಸ್ಪಂದಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ತಮ್ಮ ಅರ್ಜಿಯನ್ನು ಸೂಕ್ತ ಕ್ರಮಕ್ಕಾಗಿ ಸಹಾಯಕ ಎಂಜಿನಿಯರ್ ಅವರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದರು. ಆದರೆ 4 ವರ್ಷ ಕಳೆದರೂ ಶೌಚಾಲಯ ನಿರ್ಮಾಣವಾಗಿಲ್ಲ!
ರಾಷ್ಟ್ರೀಯ ಹೆದ್ದಾರಿಯ ನೆಪ!
ಮನವಿ ನೀಡಿದ ಸಂದರ್ಭದಲ್ಲಿ ಪಾಲಿಕೆಯು ಅರ್ಜಿದಾರರಿಗೆ ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಅದು ಪೂರ್ಣಗೊಂಡ ಬಳಿಕ ಶೌಚಾಲಯದ ಪ್ರದೇಶವನ್ನು ಗುರುತಿಸಲು ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿತ್ತು.
ಸ್ಥಳದ ಕೊರತೆ
ಪಂಪ್‌ವೆಲ್‌ನಲ್ಲಿ ಶೌಚಾಲಯದ ಪ್ರಸ್ತಾವನೆ ಇದ್ದರೂ ಸ್ಥಳದ ಅಭಾವವಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಬರೆದಿದ್ದೇವೆ. ಅವರು ಅವಕಾಶ ನೀಡಿದರೂ, ಫ್ಲೈಓವರ್ ಕಾಮಗಾರಿ ಮುಗಿಯದೆ ನಿರ್ಮಾಣ ಅಸಾಧ್ಯವಾಗಿದೆ. ಅದಕ್ಕಾಗಿ ಅನುದಾನವೂ ಸಿದ್ಧವಿದೆ.
– ಮಧು,
ಪರಿಸರ ಎಂಜಿನಿಯರ್, ಮನಪಾ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.