ಲಾರಿ-ಬಸ್ಸು ಚಾಲನೆಗೆ ಸರಕಾರದಿಂದಲೇ ತರಬೇತಿ
Team Udayavani, Dec 8, 2017, 12:08 PM IST
ಮಹಾನಗರ: ಲಾರಿ, ಬಸ್ಸು ಸಹಿತ ಘನ ವಾಹನಗಳ ತರಬೇತಿಯನ್ನು ಇಲ್ಲಿಯವರೆಗೆ ಖಾಸಗಿಯವರೇ ನೀಡುತ್ತಿದ್ದರು. ಇಲ್ಲಿ ಪಾರದರ್ಶಕತೆಯ ಕೊರತೆ ಕಾಣಿಸುತ್ತಿದ್ದು, ಅಪಘಾತ ಹೆಚ್ಚುತ್ತಿದೆ ಎಂಬುದನ್ನು ಮನಗಂಡ ಸರಕಾರ ತನ್ನ ಸುಪರ್ದಿಯ ಸಾರಿಗೆ ಇಲಾಖೆಯ ಮೂಲಕವೇ ಘನ ವಾಹನಗಳ ಚಾಲಕರಿಗೆ ‘ಚಾಲನಾ ಪರವಾನಿಗೆ ನವೀಕರಣ’ ಸಂದರ್ಭ ತರಬೇತಿ ನೀಡಲು ನಿರ್ಧರಿಸಿದೆ.
ಕೊಣಾಜೆಯ ಪಜೀರು ಗ್ರಾಮದ ಕಂಬ್ಳಪದವು ಸಮೀಪದ ಕೆ.ಐ.ಎ.ಡಿ.ಬಿ.ಯ ಸುಮಾರು 10 ಎಕ್ರೆ ಪ್ರದೇಶದಲ್ಲಿ ನೂತನ ತರಬೇತಿ ಕೇಂದ್ರ ಆರಂಭವಾಗಲಿದೆ. ಇದಕ್ಕಾಗಿ ರಾಜ್ಯ ಸರಕಾರ 15 ಕೋಟಿ ರೂ. ಮೀಸಲಿಟ್ಟಿದೆ. ಕೆಲವು ವರ್ಷಗಳಿಂದ ಘೋಷಣೆಯಲ್ಲೇ ಉಳಿದಿದ್ದ ಯೋಜನೆ ಈಗ ಮರುಜೀವ ಪಡೆದುಕೊಂಡಿದ್ದು, ಶೀಘ್ರದಲ್ಲಿ ಇದರ ಶಿಲಾನ್ಯಾಸ ನೆರವೇರಲಿದೆ.
ಕೇಂದ್ರದಲ್ಲಿ ಏನೆಲ್ಲ ಬೇಕು? ಯಾವೆಲ್ಲ ಅಂಶಗಳು ಇರಬೇಕು ಎಂಬ ವಿಚಾರದ ಬಗ್ಗೆ ನೀಲನಕಾಶೆ ಸಿದ್ಧಪಡಿಸುವಂತೆ ಸಾರಿಗೆ ಇಲಾಖೆ ಕೆಎಸ್ಆರ್ಟಿಸಿಗೆ ಜವಾಬ್ದಾರಿ ನೀಡಿತ್ತು. ಇದರಂತೆ ಕೇಂದ್ರದಲ್ಲಿ ಟ್ರಾಫಿಕ್ ಸಹಿತ ಅಗತ್ಯ ವಿಚಾರಗಳನ್ನು ಸಿದ್ಧಪಡಿಸಿ ಕೆಎಸ್ಆರ್ಟಿಸಿಯು ಸಾರಿಗೆ ಇಲಾಖೆಗೆ ನೀಡಿದ್ದು, ಇದರ ಪ್ರಕಾರ ಪಜೀರು ಕೇಂದ್ರ ನಿರ್ಮಾಣವಾಗಲಿದೆ.
ಘನ ವಾಹನಗಳ ಚಾಲನಾ ಪರವಾನಿಗೆ ನವೀಕರಣ ಸಂದರ್ಭದಲ್ಲಿ ಚಾಲಕ ಪರಿಪೂರ್ಣನಾಗಿರಬೇಕು ಎಂಬ ನೆಲೆಯಲ್ಲಿ ಆತನನ್ನು ತರಬೇತು ಗೊಳಿಸುವ ಇರಾದೆಯಿಂದ ಸಂಸ್ಥೆ ಸ್ಥಾಪಿಸಲಾಗುತ್ತದೆ. ದ.ಕ., ಉಡುಪಿ ಸಹಿತ 5 ಜಿಲ್ಲೆಗಳನ್ನು ಒಳಗೊಂಡ ಶಿವಮೊಗ್ಗ ವಿಭಾಗದವರಿಗೆ ಈ ಕೇಂದ್ರವು ಉಪಯೋಗವಾಗಲಿದೆ. ಇಲ್ಲಿಯವರೆಗೆ ಚಾಲನಾ ಪರವಾನಿಗೆ ಮರುನವೀಕರಣಕ್ಕೆ ಪೂರ್ಣ ರೀತಿಯಲ್ಲಿ ಪರೀಕ್ಷೆ ಇರಲಿಲ್ಲ. ಆದರೆ, ಕೊಣಾಜೆ ಕೇಂದ್ರ ಆರಂಭವಾದ ಬಳಿಕ ಇದು ಕಡ್ಡಾಯವಾಗಲಿದೆ. ಈ ಮೂಲಕ ವಾಹನ ಚಾಲನೆ ಮಾಡುವಾಗ ಕೈಗೊಳ್ಳಬೇಕಾದ ಎಲ್ಲ ಎಚ್ಚರಿಕೆ ಸೂತ್ರ ಗಳನ್ನು ಇಲ್ಲಿ ನೀಡುವುದು ಸರಕಾರದ ಉದ್ದೇಶ.
ತರಬೇತಿ ಸಂಸ್ಥೆಯ ವಿಶೇಷತೆ
ಅರ್ಹ ಮತ್ತು ನಿಪುಣತೆ ಇರುವ ಚಾಲಕರಿಗೆ ನವೀಕೃತ ಚಾಲನಾ ಪರವಾನಿಗೆ ನೀಡುವುದು ಈ ಸಂಸ್ಥೆಯ ಉದ್ದೇಶ. ಘನ ವಾಹನಗಳನ್ನು ರಸ್ತೆಗೆ ಇಳಿಸುವ ಮುನ್ನ ಚಾಲಕನನ್ನು ಸಂಪೂರ್ಣವಾಗಿ ಸಿದ್ಧಗೊಳಿಸುವ ಹಾಗೂ ಪರೀಕ್ಷೆ ನಡೆಸುವ ಸಂಸ್ಥೆಯಿದು. ಭಾರೀ ವಾಹನಗಳ ಚಾಲನೆಯ ಕುರಿತಂತೆ ಒಂದು/ಎರಡು ಅಥವಾ ಮೂರು ತಿಂಗಳ ತರಬೇತಿ ನೀಡುವ ಯೋಚನೆಯೂ ಇದೆ. ತರಬೇತಿ ಸಂದರ್ಭದಲ್ಲಿ ಊಟ/ ವಸತಿ ವ್ಯವಸ್ಥೆ ಮಾಡಲಾಗುತ್ತದೆ, ಪ್ರತ್ಯೇಕ ಪಠ್ಯಪುಸ್ತಕವೂ ಬರಲಿದೆ. ಚಾಲನೆಯ ನಿಯಮ, ಕಾನೂನು, ವಹಿಸಬೇಕಾದ ಎಚ್ಚರಿಕೆ, ಮೆಕ್ಯಾನಿಕಲ್ ಮಾಹಿತಿ, ವಾಹನಗಳ ನಿರ್ವಹಣೆ ಸಹಿತ ಎಲ್ಲ ಅಂಶಗಳ ಬಗ್ಗೆಯೂ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಮಂಗಳೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ.
ಮುಂದಿನ ದಿನಗಳಲ್ಲಿ ಭಾರೀ ವಾಹನ ಚಾಲನಾ ತರಬೇತಿ ಕಡ್ಡಾಯ ಎಂಬುದು ಮಾಡಬೇಕಿದೆ. ಭಾರೀ ವಾಹನಗಳ ಚಾಲನೆ ಮಾಡುವವರ ಚಾಲನಾ ಪರವಾನಿಗೆ ನವೀಕರಣ ಸಂದರ್ಭ ಇದನ್ನು ಪರಿಗಣಿಸಿಯೇ ನವೀಕರಣಕ್ಕೆ ಅವಕಾಶ ಕೊಡುವ ಮೂಲಕ ನೂತನ ಕೇಂದ್ರವನ್ನು ಗಟ್ಟಿಗೊಳಿಸಲಾಗುವುದು’ ಎಂದರು.
ಶಿಲಾನ್ಯಾಸ ಮುಂದೂಡಿಕೆ
ಭಾರೀ ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ಡಿ. 8ರಂದು ಬೆಳಗ್ಗೆ 11 ಗಂಟೆಗೆ ಸಾರಿಗೆ ಸಚಿವ ಎಚ್. ಎಂ. ರೇವಣ್ಣ ಅವರು ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಆದರೆ ತುರ್ತು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಂಕು ಸ್ಥಾಪನೆಯನ್ನು ಮುಂದೂಡಲಾಗಿದೆ. ಮುಂದಿನ ದಿನವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಜಿ.ಎಸ್. ಹೆಗಡೆ ‘ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.
ತರಬೇತಿ ಕೇಂದ್ರದಲ್ಲಿ ಏನೆಲ್ಲ ಇರಲಿದೆ?
ಕಂಬ್ಳಪದವು ಸಮೀಪದ ಕೆ.ಐ.ಎ.ಡಿ.ಬಿ.ಯ ಸರ್ವೆ ನಂ.330, 331 ಹಾಗೂ 415ರ ಸುಮಾರು 10 ಎಕ್ರೆ ಪ್ರದೇಶದಲ್ಲಿ ಎರಡು ಅಂತಸ್ತುಗಳ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರ ನಿರ್ಮಾಣವಾಗಲಿದೆ. ಆಡಳಿತಾತ್ಮಕ ಕಟ್ಟಡ, ವಿಶ್ರಾಂತಿ ಗೃಹ, ಕಾರ್ಯಾಗಾರ ಕಟ್ಟಡ, ಉಪಾಹಾರ ಗೃಹ ಇಲ್ಲಿರಲಿದೆ. ಪರೀಕ್ಷಾ ಪಥದಲ್ಲಿ ‘ಎಸ್’ ಮಾದರಿಯ ಚಾಲನಾ ಪಥ (ಟ್ರಾಫಿಕ್), ರಿವರ್ಸ್ ಟ್ರಾಫಿಕ್, ‘8’ ಆಕಾರದ ಟ್ರಾಫಿಕ್, ಗ್ರಾಡಿಯೆಂಟ್ ಟ್ರಾಫಿಕ್ ನಿರ್ಮಾಣವಾಗಲಿದೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.