ಟೆಸ್ಟ್ ಶ್ರೇಯಾಂಕ: ಕೊಹ್ಲಿ ವಿಶ್ವ ನಂ.2
Team Udayavani, Dec 8, 2017, 1:02 PM IST
ದುಬಾೖ: ಪ್ರವಾಸಿ ಶ್ರೀಲಂಕಾ ವಿರುದ್ಧ ರನ್ ಮಳೆ ಯನ್ನೇ ಸುರಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೂತನ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್ ಯಾದಿಯಲ್ಲಿ 3 ಸ್ಥಾನಗಳ ನೆಗೆತದೊಂದಿಗೆ ಎರಡನೇ ಸ್ಥಾನ ಅಲಂಕರಿಸಿದ್ದಾರೆ.
ಹ್ಯಾಟ್ರಿಕ್ ಸೆಂಚುರಿ, ಸತತ 2 ದ್ವಿಶತಕ, ಜೀವನಶ್ರೇಷ್ಠ ಬ್ಯಾಟಿಂಗ್, ಸರಣಿಯಲ್ಲಿ ಸರ್ವಾಧಿಕ 610 ರನ್ನು ಗಳೆಲ್ಲ ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರ ಪ್ರಮುಖ ಸಾಧನೆ ಗಳಾಗಿವೆ. ಶ್ರೀಲಂಕಾ ವಿರುದ್ಧದ ಸರಣಿಯ ಆರಂಭಕ್ಕೂ ಮುನ್ನ 5ನೇ ಸ್ಥಾನದಲ್ಲಿದ್ದರು. ಇದೇ ವೇಳೆ, ನಾಗ್ಪುರ ಟೆಸ್ಟ್ ಬಳಿಕ ಎರಡಕ್ಕೇರಿದ ಚೇತೇಶ್ವರ್ ಪೂಜಾರ ಈಗ 4ಕ್ಕೆ ಇಳಿದಿದ್ದಾರೆ.
ಆ್ಯಶಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಸ್ಮಿತ್ ಹಾಗೂ ಕೊಹ್ಲಿ ನಡುವೆ 45 ಅಂಕಗಳ ಅಂತರವಿದೆ (938 ಮತ್ತು 893). ಆ್ಯಶಸ್ ಸರಣಿಯಲ್ಲಿ ಇನ್ನೂ 3 ಟೆಸ್ಟ್ ಗಳಿರುವುದರಿಂದ ಸ್ಮಿತ್‌ಗೆ ಇನ್ನಷ್ಟು ಪ್ರಗತಿ ಸಾಧಿಸುವ ಅವಕಾಶವಿದೆ. ಆದರೆ ಭಾರತದ ಮುಂದಿರುವುದು ಕಠಿನವೆನಿಸಿದ ದಕ್ಷಿಣ ಆಫ್ರಿಕಾ ಪ್ರವಾಸ. 3 ಪಂದ್ಯಗಳ ಟೆಸ್ಟ್ ಸರಣಿ ಜನವರಿ ಮೊದಲ ವಾರದಿಂದ ಆರಂಭವಾಗಲಿದೆ. ಇಲ್ಲಿ ಕೊಹ್ಲಿ ಶ್ರೇಷ್ಠ ಪ್ರದರ್ಶನ ಕಾಯ್ದುಕೊಂಡರೆ ನಂ.1 ಸ್ಥಾನವನ್ನು ಸಮೀಪಿಸಬಹುದು.
ಸದ್ಯ ಕೊಹ್ಲಿ ಏಕದಿನ ಹಾಗೂ ಟಿ20 ಕ್ರಿಕೆಟಿನ ಅಗ್ರಮಾನ್ಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಈವರೆಗೆ ಏಕಕಾಲದಲ್ಲಿ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಅಗ್ರಸ್ಥಾನ ಅಲಂಕರಿಸಿದ ಆಟಗಾರನೆಂದರೆ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ (ಡಿಸೆಂಬರ್-ಜನವರಿ 20005-06).
ಶ್ರೀಲಂಕಾದ ನಾಯಕ ದಿನೇಶ್ ಚಂಡಿಮಾಲ್ ಮೊದಲ ಸಲ ಟಾಪ್-10 ಯಾದಿಯಲ್ಲಿ ಕಾಣಿಸಿ ಕೊಂಡಿದ್ದಾರೆ. ಸರಣಿಯಲ್ಲಿ 366 ರನ್ ಪೇರಿಸಿದ ಚಂಡಿಮಾಲ್ ಅವರದು 8 ಸ್ಥಾನಗಳ ಜಿಗಿತ. ಟೆಸ್ಟ್ ಬೌಲಿಂಗ್ ಯಾದಿಯಲ್ಲಿ ಜೇಮ್ಸ್ ಆ್ಯಂಡರ್ಸನ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ (894), ರಬಾಡ, ಜಡೇಜ, ಅಶ್ವಿನ್ ಅನಂತರದ ಸ್ಥಾನದಲ್ಲಿದ್ದಾರೆ.
ಒಂದು ಅಂಕ ನಷ್ಟ: 1-0 ಸರಣಿ ಜಯಿಸಿದ ಭಾರತ, ಟೀಮ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದು ಕೊಂಡರೂ ಒಂದು ಅಂಕ ಕಳೆದು ಕೊಂಡಿದೆ. ಶ್ರೀಲಂಕಾ 94 ಅಂಕ ದೊಂದಿಗೆ 6ನೇ ಸ್ಥಾನದಲ್ಲೇ ಮುಂದುವರಿದಿದೆ. ದಕ್ಷಿಣ ಆಫ್ರಿಕಾ ದ್ವಿತೀಯ (111), ಶ್ರೀಲಂಕಾ ತೃತೀಯ (105) ಸ್ಥಾನದಲ್ಲಿದೆ.
ಟಾಪ್-10 ಟೆಸ್ಟ್ ಬ್ಯಾಟ್ಸ್‌ಮನ್
1. ಸ್ಟೀವನ್ ಸ್ಮಿತ್ (938)
2. ವಿರಾಟ್ ಕೊಹ್ಲಿ (893)
3. ಜೋ ರೂಟ್ (879)
4. ಚೇತೇಶ್ವರ್ ಪೂಜಾರ (873)
5. ಕೇನ್ ವಿಲಿಯಮ್ಸನ್ (865)
6. ಡೇವಿಡ್ ವಾರ್ನರ್ (815)
7. ಹಾಶಿಮ್ ಆಮ್ಲ (795)
8. ಅಜರ್ ಅಲಿ (755)
9. ದಿನೇಶ್ ಚಂಡಿಮಾಲ್ (743)
10. ಡೀನ್ ಎಲ್ಗರ್ (732).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.