ಪಾಕ್‌ ಕಂಡರೆ ಭಾರತೀಯರಿಗೆ ನಖಶಿಖಾಂತ ಸಿಟ್ಟು


Team Udayavani, Dec 9, 2017, 6:00 AM IST

PAK-IND-70.jpg

ನವದೆಹಲಿ: ಪಾಕಿಸ್ತಾನ ಕಂಡರೆ ನಮಗೆ ಬಿಲ್‌ಕುಲ್‌ ಆಗುವುದೇ ಇಲ್ಲ!  ಇದು ಬಹುತೇಕ ಭಾರತೀಯರ ಒಕ್ಕೊರಲ ಮಾತು. ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆ “ಪ್ಯೂ’ನ ಸಮೀಕ್ಷೆ ಪ್ರಕಾರ, ಶೇ.72 ರಷ್ಟು ಭಾರತೀಯರಿಗೆ ಪಾಕಿಸ್ತಾನವೆಂದರೆ ಇಷ್ಟವಿಲ್ಲ. ಅದರಲ್ಲೂ ಶೇ.64 ರಷ್ಟು ಮಂದಿಗೆ ಪಾಕಿಸ್ತಾನವೆಂದರೆ ನಖಶಿಖಾಂತ ಸಿಟ್ಟು. 2013ರಿಂದಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧದ ಬಗ್ಗೆ ದಾಖಲೀಕರಣ ಮಾಡುತ್ತಿರುವ ಪ್ಯೂ ರಿಸರ್ಚ್‌ ಸಂಸ್ಥೆ, ಇದೇ ಮೊಟ್ಟ ಮೊದಲ ಬಾರಿಗೆ, ಭಾರತೀಯರಲ್ಲಿ ಪಾಕ್‌ ಕುರಿತ ಭಾರಿ ದ್ವೇಷವನ್ನು ಕಂಡಿದೆ.

ಇದು ಕೇವಲ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮಂದಿಯ ಭಾವನೆ ಎಂದು ತಿಳಿದರೆ ಅದು ತಪ್ಪು. ಪಾಕಿಸ್ತಾನದವರನ್ನು ಬಿಜೆಪಿಯವರಷ್ಟೇ ಅಲ್ಲ, ಕಾಂಗ್ರೆಸ್‌ನವರೂ ತೀವ್ರವಾಗಿ ವಿರೋಧಿಸುತ್ತಾರೆ ಎಂದು ಈ ಸಂಶೋಧನೆ ಹೇಳಿದೆ. ಅಂದರೆ ಬಿಜೆಪಿಯ ಶೇ.70 ಮತ್ತು ಕಾಂಗ್ರೆಸ್‌ನ ಶೇ.63 ರಷ್ಟು ಮಂದಿ ಪಾಕ್‌ ಕಂಡರೆ ಇಷ್ಟವಿಲ್ಲ ಎಂದಿದ್ದಾರೆ.

ಈ ಮಧ್ಯೆ ಪಾಕಿಸ್ತಾನ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಜನ ಒಪ್ಪಿಲ್ಲ. ಇದು ವ್ಯರ್ಥಶ್ರಮವೆಂದೇ ಭಾವಿಸಿದ್ದಾರೆ. ಅಂದರೆ, ಶೇ.21ರಷ್ಟು ಮಂದಿ ಮಾತ್ರ ಪಾಕ್‌ ಕುರಿತ ಮೋದಿ ನಿಲುವನ್ನು ಒಪ್ಪಿದ್ದಾರೆ. ಆದರೆ ವಿಶೇಷವೆಂದರೆ ಕಾಶ್ಮೀರ ವಿಚಾರದಲ್ಲಿ ಮೋದಿ ಸರ್ಕಾರದ ನಿಲುವನ್ನು 10ರಲ್ಲಿ 4 ಮಂದಿ ಒಪ್ಪಿದ್ದಾರೆ. ಅದರಲ್ಲೂ 18ರಿಂದ 29ರ ಒಳಗಿನ ಯುವ ಜನತೆ ಕಾಶ್ಮೀರ ವಿಚಾರದಲ್ಲಿ ಮೋದಿ ಅವರನ್ನು ಹೆಚ್ಚು ಕಡಿಮೆ ಸಂಪೂರ್ಣವಾಗಿ ಒಪ್ಪಿದೆ. ಇದಕ್ಕೆ ಭಿನ್ನವಾಗಿ 50 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಕಾಶ್ಮೀರ ಸಮಸ್ಯೆ ಪರಿಹರಿಸುತ್ತಿರುವ ಮೋದಿ ಸರ್ಕಾರದ ಪ್ರಯತ್ನವನ್ನು ಅರ್ಧದಷ್ಟು ಮಾತ್ರ ಒಪ್ಪಿದ್ದಾರೆ.

ಸರ್ಜಿಕಲ್‌ ಸ್ಟ್ರೈಕ್‌ಗೆ ಓಕೆ
ಶೇ.62 ರಷ್ಟು ಭಾರತೀಯರು ಕಾಶ್ಮೀರ ಸಮಸ್ಯೆಯನ್ನು ಭಾರಿ ದೊಡ್ಡದು ಎಂದೇ ನಂಬಿದ್ದು, ಮಾತುಕತೆ ಏಕೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಇವರ ಪ್ರಕಾರ, ಏಕದಂ ಬಂದೂಕು ತೆಗೆದುಕೊಂಡು ಹೋಗಿ, ಕಾರ್ಯಾಚರಣೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.63 ರಷ್ಟು ಮಂದಿ ಸೇನಾ ಕಾರ್ಯಾಚರಣೆ ಬಗ್ಗೆಯೇ ಒಲವು ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯ ಮುಖ್ಯಾಂಶಗಳು
ಪಾಕ್‌ ಕಂಡರೆ ದ್ವೇಷ – ಶೇ.72
ಬಿಜೆಪಿ ಬೆಂಬಲಿಗರು – ಶೇ.70
ಕಾಂಗ್ರೆಸ್‌ ಬೆಂಬಲಿಗರು – ಶೇ.63

ಪಾಕ್‌ ಕುರಿತ ಮೋದಿ ನಿಲುವು
ಸರಿ ಇಲ್ಲ – ಶೇ.79
ಸರಿಯಾಗಿದೆ – ಶೇ.21

ಕಾಶ್ಮೀರ ಸಮಸ್ಯೆ ದೊಡ್ಡದೇ?
ಹೌದು – ಶೇ.62
ಇಲ್ಲ – ಶೇ.38
ಕಾಶ್ಮೀರ ಸಮಸ್ಯೆಗೆ ಸೇನಾ ಕಾರ್ಯಾಚರಣೆಯೇ ಪರಿಹಾರ – ಶೇ.63

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.