ಕಾಳಸಂತೆಯಲ್ಲಿ ಬಿಕರಿಯಾಗುತ್ತಿವೆ ಬಡವರ ಜನೌಷಧ!
Team Udayavani, Dec 9, 2017, 7:34 AM IST
ಮಂಗಳೂರು: ಕೇಂದ್ರ ಸರಕಾರವು ಬಡವರಿಗಾಗಿ ಕೈಗೆಟಕುವ ದರದಲ್ಲಿ ಔಷಧ ಒದಗಿಸುವ ಉದ್ದೇಶದಿಂದ ಪ್ರಾರಂಭಿಸಿರುವ ಜನೌಷಧ ಕೇಂದ್ರದಲ್ಲೀಗ ಅಕ್ರಮದ ವಾಸನೆ ಹೊಡೆದಿದೆ. ಕಡಿಮೆ ಬೆಲೆಯ ಇಲ್ಲಿನ ಔಷಧಗಳು ಖಾಸಗಿ ಮೆಡಿಕಲ್‌ಗಳ ಮೂಲಕ ಮಾರಾಟವಾಗುತ್ತಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರದ
ನಿವಾಸಿಯೊಬ್ಬರು ನೇರವಾಗಿ ಪ್ರಧಾನಿ ನರೇಂದ್ರ ಮೋದಿಗೇ ದೂರು ನೀಡಿದ್ದಾರೆ. ಜನೌಷಧ ಕೇಂದ್ರಕ್ಕೆ ಔಷಧ ಪೂರೈಕೆ ಮಾಡುವ ಡೀಲರ್‌ಗಳು ಅಕ್ರಮಕ್ಕೆ ಮೂಲ ಕಾರಣರಾಗಿದ್ದಾರೆ.
ಪ್ರಧಾನಿಗೆ ದೂರು: ಅಕ್ರಮ ಬಗ್ಗೆ ಖಚಿತ ಮಾಹಿತಿ ಪಡೆದಿರುವ ನಗರದ ಬಿಜೈ ನಿವಾಸಿ ಸರಸ್ವತಿ ಅವರು ಪಿಜಿ ಪೋರ್ಟಲ್ ಮೂಲಕ ಪ್ರಧಾನಿ ಕಚೇರಿಗೆ ದೂರು ನೀಡಿದ್ದಾರೆ. ಜತೆಗೆ ಪ್ರಧಾನಿ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರ ಟ್ವಿಟರ್ ಖಾತೆಗೂ ದೂರು ನೀಡಿದ್ದಾರೆ. ಸರಸ್ವತಿ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಕಾರ್ಯಾಲಯ ಕ್ರಮಕ್ಕೆ ಮುಂದಾಗಿದೆ. ದೂರಿನ
ಬಗ್ಗೆ ಹಿಮ್ಮಾಹಿತಿಯನ್ನೂ ನೀಡಿದೆ. ಸರಸ್ವತಿ ಅವರು ನ. 18ರಂದು ದೂರು ನೀಡಿದ್ದು, ನ. 20ರಂದು ದೂರನ್ನು ಫಾರ್ಮಾ
ಸುಟಿಕಲ್ಸ್ ವಿಭಾಗಕ್ಕೆ ವರ್ಗಾಯಿಸಲಾಗಿದೆ. ನ. 21ರಂದು ನ್ಯಾಷನಲ್ ಫಾರ್ಮಸಿಟಿಕಲ್ಸ್ ಪ್ರೈಸಿಂಗ್ ಅಥಾರಿಟಿಗೆ ವರ್ಗಾಯಿಸಲಾಗಿದೆ ಎಂದು ಈಮೇಲ್ ಮೂಲಕ ತಿಳಿಸಲಾಗಿದೆ. ನ. 28ರಂದು ತನಿಖೆ ಪ್ರಗತಿಯಲ್ಲಿದೆ ಎಂಬ ಉತ್ತರ ಬಂದಿದೆ.
ಪ್ರಸ್ತುತ ದ.ಕ.ಜಿಲ್ಲೆಯ ಮಂಗಳೂರಿನಲ್ಲಿ ಎರಡು ಕೇಂದ್ರಗಳು ಹಾಗೂ ಪುತ್ತೂರು, ಬೆಳ್ತಂಗಡಿಯಲ್ಲಿ ಒಂದೊಂದು ಜನೌಷಧ
ಕೇಂದ್ರಗಳು ಕಾರ್ಯಾಚರಿಸುತ್ತಿವೆ. ನಗರದ ವೆನಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಯ ಬಳಿ ಇರುವ ಕೇಂದ್ರಗಳು ಆಸ್ಪತ್ರೆಯ ಅಧೀನದಲ್ಲಿದ್ದರೆ, ಪುತ್ತೂರು ಹಾಗೂ ಬೆಳ್ತಂಗಡಿಯ ಕೇಂದ್ರಗಳು ಆರೋಗ್ಯ ಇಲಾಖೆ ಅಧೀನದಲ್ಲಿದೆ.
ಖಾಸಗಿ ಮೆಡಿಕಲ್‌ಗೆ ಪೂರೈಕೆ: ಜನೌಷಧ ಕೇಂದ್ರಗಳ ಮೂಲಕ ಔಷಧಗಳನ್ನು ಸುಮಾರು ಶೇ.90ರವರೆಗೂ ರಿಯಾಯಿತಿ ದರದಲ್ಲಿ
ನೀಡಲಾಗುತ್ತಿದೆ. ಇದೇ ಔಷಧಗಳು ಖಾಸಗಿ ಮೆಡಿಕಲ್‌ನಲ್ಲೂ ಸಿಗುತ್ತಿವೆ. ಪೂರೈಕೆದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಖಾಸಗಿ ಮೆಡಿಕಲ್‌ಗಳು ಜನೌಷಧ ಕೇಂದ್ರಕ್ಕೆ ಪೂರೈಕೆ ಯಾಗಬೇಕಾದ ರಿಯಾಯಿತಿ ದರದ ಔಷಧ ಅಕ್ರಮವಾಗಿ ಪಡೆದು ಎಂಆರ್‌ಪಿ ಬೆಲೆಗೇ ಮಾರಾಟ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿದೆ. ಇದರಿಂದ ಜನೌಷಧಿ ಕೇಂದ್ರಗಳಲ್ಲಿ ಔಷಧಗಳ ಕೊರತೆ ಕಂಡುಬಂದಿದೆ. ಮುಖ್ಯವಾಗಿ ಜನೌಷಧಿ ಕೇಂದ್ರಗಳಲ್ಲಿ ಲಭ್ಯವಾಗುವ ಔಷಧಗಳಲ್ಲಿ ರಿಯಾಯಿತಿ ದರದ ಔಷಧ ಎಂದು ನಮೂದಿಸದ ಹಿನ್ನೆಲೆಯಲ್ಲಿ ಈ ರೀತಿಯ ತೊಂದರೆಗಳು ಎದುರಾಗಿದೆ.
ದ.ಕ. ಜಿಲ್ಲೆಯ ಎಲ್ಲಾ ಜನೌಷಧ ಕೇಂದ್ರಗಳು ಉತ್ತಮವಾಗಿ ಕಾರ್ಯಾಚರಿಸುತ್ತಿವೆ. ಔಷಧ ಕೊರತೆಯ ಯಾವುದೇ ದೂರುಗಳು ಬಂದಿಲ್ಲ. ಜತೆಗೆ ಖಾಸಗಿ ಮೆಡಿಕಲ್‌ಗಳಿಗೆ ಔಷಧ ಮಾರಾಟದ ಕುರಿತು ಕೂಡ ನಮ್ಮ ಗಮನಕ್ಕೆ ಬಂದಿಲ್ಲ.’
●ಡಾ| ರಾಮಕೃಷ್ಣ ರಾವ್, ಆರೋಗ್ಯಾಧಿಕಾರಿ, ದ.ಕ. ಜಿಲ್ಲೆ
ನಾನು ಜನೌಷಧಿ ಕೇಂದ್ರ ಆರಂಭಗೊಂಡ ಬಳಿಕ ಅಲ್ಲಿಂದಲೇ ಔಷಧಗಳನ್ನು ಖರೀದಿಸುತ್ತೇನೆ. ಕೆಲವೊಂದು ಔಷಧಗಳು ಶೇ.90ರವರೆಗೂ ರಿಯಾಯಿತಿಯಲ್ಲಿ ಸಿಗುತ್ತಿದೆ. ಆದರೆ ಕೆಲವು ದಿನ ಸ್ಟಾಕ್ ಇಲ್ಲ ಎಂದು ಹೇಳುತ್ತಾರೆ. ಜತೆಗೆ ಖಾಸಗಿ ಮೆಡಿಕಲ್‌ಗೆ
ಮಾರಾಟವಾಗುವ ವಿಚಾರವನ್ನು ಮೆಡಿಕಲ್ ಶಾಪ್ ನಡೆಸುತ್ತಿರುವ ಗೆಳೆಯರೊಬ್ಬರು ತಿಳಿಸಿದ್ದಾರೆ.
● ಶಂಕರ್ ಭಟ್, ಬಿಜೈ ನಿವಾಸಿ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.