ಮುಂಬಯಿಗೆ ದಟ್ಟ ಮಂಜಿನ ಮುಸುಕು; ರೈಲುಗಳು ವಿಳಂಬ
Team Udayavani, Dec 9, 2017, 11:21 AM IST
ಮುಂಬಯಿ : ಇಂದು ಶನಿವಾರ ಬೆಳಗ್ಗಿನ ಜಾವ ಸಿಹಿ ನಿದ್ದೆಯಿಂದ ಎದ್ದ ಮುಂಬಯಿಗರಿಗೆ ಅತ್ಯಾಶ್ಚರ್ಯಕರವಾಗಿ ಇಡಿಯ ನಗರವನ್ನು ಮುಸುಕಿರುವ ದಟ್ಟನೆಯ ಮಂಜು ಸುಪ್ರಭಾತ ಹೇಳಿತು.
ಚಳಿಗಾಲದ ಈ ದಿನಗಳಲ್ಲಿ ದೇಶದ ವಿವಿಧೆಡೆ ಬೆಳಗ್ಗಿನ ಜಾವ ಮಂಜು ಮುಸುಕಿದ ವಾತಾವರಣ ಇರುವುದು ಸಹಜ ಮತ್ತು ಸಾಮಾನ್ಯ. ವ್ಯತಿರಿಕ್ತವಾಗಿ ಮುಂಬಯಿ ಮಾತ್ರ ಬೆಳಗ್ಗೆ ಪ್ರಖರ ಸೂರ್ಯನನ್ನು ಕಾಣುವುದೇ ಸಾಮಾನ್ಯ. ಆದರೆ ಇಂದು ಮಾತ್ರ ದಟ್ಟನೆ ಮಂಜು ಮುಸುಕಿದ ವಾತಾವರಣವನ್ನು ಕಂಡು ದಿಗ್ಭ್ರಮೆಗೊಂಡರು.
ದಟ್ಟನೆಯ ಮಂಜಿನಿಂದಾಗಿ ಗೋಚರತೆಯ ಅತ್ಯಂತ ನಿಕೃಷ್ಟ ಮಟ್ಟದಲ್ಲಿ ಇದ್ದುದರಿಂದ ಹಲವಾರು ಲೋಕಲ್ ರೈಲುಗಳು ವಿಳಂಬಿತವಾಗಿ ಓಡಾಡುತ್ತಿದ್ದು ಇದರಿಂದ ಪ್ರಯಾಣಿಕರು ತೀವ್ರ ಬವಣೆಗೆ ಗುರಿಯಾದರು. ಕೆಲವೆಡೆ ರೈಲು ಪ್ರಯಾಣಿಕರು ಮಿಂಚಿನ ಪ್ರತಿಭಟನೆಯನ್ನೂ ನಡೆಸಿದರು. ರಸ್ತೆಗಳಲ್ಲಿ ಮೋಟಾರು ವಾಹನಗಳ ಸರತಿಯ ಸಾಲಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದುದ್ದು ಕಂಡು ಬಂತು.
“ದಟ್ಟನೆಯ ಮಂಜಿನಿಂದಾಗಿ ರೈಲುಗಳು ನಿಧಾನಗತಿಯಲ್ಲಿವೆ; ದಯವಿಟ್ಟು ತಾಳ್ಮೆ ವಹಿಸಿ ಸಹಕರಿಸಿ’ ಎಂದು ರೈಲ್ವೇ ಇಲಾಖೆ ಮುಂಬಯಿಗರಲ್ಲಿ ಪ್ರಾರ್ಥಿಸಿತು.
ದಟ್ಟನೆಯ ಮಂಜಿನ ಪರಿಣಾಮವಾಗಿ ವಡಾಲಾ ಮತ್ತು ಸಯಾನ್‌ನಲ್ಲಿ ತಾಪಮಾನ ತೀವ್ರವಾಗಿ ಕುಸಿದಿದೆ. ಇಂತಹ ಸ್ಥಿತಿಯಲ್ಲಿ ವಿಮಾನಗಳ ಅವತರಣಕ್ಕಾಗಿ ನಿಲ್ದಾಣ ಅಧಿಕಾರಿಗಳು ವಿಶೇಷ ಉಪಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಯಿತು.
“ಹೊರವಲಯದ ಕಲ್ಯಾಣ್ ಮತ್ತು ಅದಾರಚೆಗಿನ ಪ್ರದೇಶಗಳಲ್ಲಿ ಗೋಚರತೆ ತುಂಬ ಕನಿಷ್ಠ ಮಟ್ಟದಲ್ಲಿದೆ; ಹಾಗಾಗಿ ಹೊರ ವಲಯದ ರೈಲುಗಳು ವಿಳಂಬಿತವಾಗಿ ಓಡಾಡುತ್ತಿವೆ’ ಎಂದು ಸೆಂಟ್ರಲ್ ರೈಲ್ವೇಸ್‌ನ ಸಿಪಿಆರ್‌ಓ ಸುನೀಲ್ ಉದಾಸಿ ಹೇಳಿದರು.
ಅನೇಕ ಮುಂಬಯಿ ನಿವಾಸಿಗಳು, ಮಹಾನಗರದ ವಾಯು ಗುಣಮಟ್ಟ ದಿಲ್ಲಿಯಂತೆ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ; ವಾಯು ಮಾಲಿನ್ಯ ಅತ್ಯಧಿಕ ಮಟ್ಟದಲ್ಲಿದೆ; ಗಗನ ರೇಖೆ ಕಳೆದ ತಿಂಗಳಲ್ಲಿ ಪೂರ್ತಿಯಾಗಿ ಕಪ್ಪನೆಯ ಬಣ್ಣದಲ್ಲಿತ್ತು ಎಂದು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್ ಹೆಸರಿಲ್ಲ?
Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.