ಐದೇ ವರ್ಷದಲ್ಲಿ ಬೆಂಗಳೂರು ಡೆಡ್ಲಿ ಸಿಟಿ


Team Udayavani, Dec 9, 2017, 12:37 PM IST

bang-deadly.jpg

ಉಡುಪಿ: ಕೇವಲ 200 ವರ್ಷಗಳ ಹಿಂದೆ ಬೇಸಗೆಯಲ್ಲಿ 14 ಡಿಗ್ರಿ ಸೆ. ಉಷ್ಣಾಂಶವನ್ನು ಅನುಭವಿಸಿದ್ದ ಬೆಂಗಳೂರಿಗರು ಇಂದು 34 ಡಿಗ್ರಿ ಸೆ. ಉಷ್ಣಾಂಶದಲ್ಲಿ ಕಂಗೆಡುವ ಸ್ಥಿತಿ ಇದೆ. ಡಿಸೆಂಬರ್‌ನಲ್ಲಿ ಶೂನ್ಯ ಡಿಗ್ರಿ ಉಷ್ಣಾಂಶವನ್ನು ಹೊಂದಿ ಸೇಬು ಹಣ್ಣುಗಳನ್ನು ಬೆಳೆಯುತ್ತಿದ್ದ ಬೆಂಗಳೂರು, ಇದೀಗ ಕಾಂಕ್ರೀಟ್‌ ಕಾಡಾಗಿ ಮಾರ್ಪಟ್ಟಿದೆ.

ಪ್ರಕೃತಿ ವಿರೋಧಿ ಚಟುವಟಿಕೆಗಳು ಹೀಗೆಯೇ ಮುಂದುವರೆದರೆ ಇನ್ನೈದು ವರ್ಷಗಳಲ್ಲಿ ರಾಜಧಾನಿ ಸಮಾಧಿ ನಗರವಾಗಿ (ಡೆಡ್ಲಿ ಸಿಟಿ) ಮಾರ್ಪಡುತ್ತದೆ ಎಂದು ಬೆಂಗಳೂರು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ನ ಹಿರಿಯ ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ ಭವಿಷ್ಯ ನುಡಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಸಹಯೋಗದೊಂದಿಗೆ ಶುಕ್ರವಾರ ನಡೆದ “ಶಕ್ತಿ ಮೂಲಗಳ ಸಮಸ್ಯೆ-ಪರ್ಯಾಯ ಆಯ್ಕೆಗಳು’ ಕುರಿತು ಜರಗಿದ ಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವೇಸ್ಟ್‌ ಬಾಡಿಗಳ ವೇಸ್ಟ್‌ ಕೆಲಸ: ರಾಜ್ಯ ಸರಕಾರವು ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಿ ತರಾತುರಿಯಲ್ಲಿ ಪೂರ್ಣಗೊಳಿಸುತ್ತಿರುವ ಎತ್ತಿನಹೊಳೆ ಯೋಜನೆಯಿಂದ 24 ಟಿಎಂಸಿ ನೀರಲ್ಲ; 0.85 ಟಿಎಂಸಿ ನೀರು ಮಾತ್ರ ಲಭ್ಯವಾಗುತ್ತದೆ. ಯೋಜನೆ ಆರಂಭ ಕಾಲಕ್ಕೆ 24 ಟಿಎಂಸಿ ನೀರು ಸಿಗಲಿದೆ ಎಂದು ಹೇಳಲಾಗಿತ್ತು. ವಾಸ್ತವವಾಗಿ ಅಲ್ಲಿ 9.85 ಟಿಎಂಸಿ ನೀರು ಮಾತ್ರ ಲಭ್ಯ. ಇನ್ನು 6 ಟಿಎಂಸಿ ನೀರನ್ನು ಕೃಷಿ ಮತ್ತು ಗದ್ದೆಗೆ, 2 ಟಿಎಂಸಿ ನೀರನ್ನು ಸ್ಥಳೀಯರಿಗೆ ನೀಡಿದರೆ ಉಳಿಯುವುದು ಕೇವಲ 0.85 ಟಿಎಂಸಿ ನೀರು ಮಾತ್ರ. ಇದೊಂದು ವೇಸ್ಟ್‌ ಬಾಡಿಗಳು ಮಾಡುವ ವೇಸ್ಟ್‌ ಕೆಲಸ ಎಂದು ಅವರು ಲೇವಡಿ ಮಾಡಿದರು.

ಬೆಂಗಳೂರು ಜನರಿಗೆ 18-20 ಟಿಎಂಸಿ ನೀರು ಬೇಕು. ಪ್ರಸ್ತುತ 15 ಟಿಎಂಸಿ ನೀರು ಅಂದರೆ, ಶೇ.70ರಷ್ಟು ನೀರು ಸ್ಥಳೀಯ ಮೂಲಗಳಿಂದಲೇ ದೊರಕುತ್ತದೆ. ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡಿದರೆ ಸುಮಾರು 16 ಟಿಎಂಸಿ ನೀರು ಪುನರ್‌ಬಳಕೆಗೆ ದೊರಕುತ್ತದೆ. ಇಂತಹ ಯೋಜನೆಗಳನ್ನು ಬಿಟ್ಟ ಸರಕಾರ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಅವರು ಹೇಳಿದರು.

ನಾವೇ ಕೆಡಿಸುತ್ತಿದ್ದೇವೆ: ಐರೋಪ್ಯ ವಿಜ್ಞಾನಿಗಳಾದ ಟೆಸ್ಲಾ ಮತ್ತು ಐನ್‌ಸ್ಟಿನ್‌ ಅವರೇ ಭಗವಂತನ ಶಕ್ತಿಯನ್ನು ನಂಬಿದ್ದರು. ಸ್ಪಷ್ಟವಾಗಿ ಗೋಚರವಾಗದ ಶಕ್ತಿಯೊಂದಿದೆ ಎಂದು ಉಲ್ಲೇಖೀಸಿದ್ದರು. ಈ ಶಕ್ತಿಯನ್ನು ತಾರ್ಕಿಕ ಪರಾಮರ್ಶೆಗೆ ಒಳಪಡಿಸುತ್ತಿರುವುದು ವಿಪರ್ಯಾಸ. ಪ್ರಾಕೃತಿಕ ಸಂಪತ್ತನ್ನು ವಿವೇಚನಾರಹಿತವಾಗಿ ಬಳಸಿ ಭವಿಷ್ಯದ ಅನಾಹುತಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ ಎಂದು ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿ ಡಾ. ಕೆ.ಜೆ. ರಾವ್‌ ಹೇಳಿದರು.

ಉಡುಪಿಗೂ ಅಪಾಯ ಕಾದಿದೆ: ಕರಾವಳಿ ಸಮುದ್ರ ಮಟ್ಟದಿಂದ 111 ಅಡಿ ಎತ್ತರದಲ್ಲಿದೆ. ಮುಂದಿನ 100-150 ವರ್ಷಗಳಲ್ಲಿ ಪರಿಸರ ಮಾಲಿನ್ಯದಿಂದ ವಾತಾವರಣದ ಉಷ್ಣಾಂಶ 1 ಡಿಗ್ರಿ ಹೆಚ್ಚಲಿದೆ. ಇದು 2 ಡಿಗ್ರಿಗೆ ಏರಿದರೆ ಸಮುದ್ರ ತೀರದ ಪ್ರದೇಶಗಳಿಗೆ ಅಪಾಯವಿದೆ. ಹಿಂದೆ ದ್ವಾರಕೆ ಮುಳುಗಿತು. ಅಲ್ಲಿಂದ ಇಲ್ಲಿಗೆ ಬಂದ ಶ್ರೀಕೃಷ್ಣನ ನಾಡು ಉಡುಪಿಗೂ ಅಪಾಯವಿದೆ ಎಂದು ಡಾ. ರಾವ್‌ ಎಚ್ಚರಿಸಿದರು.

ರಬ್ಬರ್‌ ತೋಟದ ಹಸಿರು, ಹಸಿರಲ್ಲ: ವಿಶೇಷ ಉಪನ್ಯಾಸ ನೀಡಿದ ರಾಮಚಂದ್ರ ಅವರು ಶರಾವತಿ ಯೋಜನೆಯನ್ನು 1965ರಲ್ಲಿ ನಿರ್ಮಿಸಲಾಯಿತು. 116 ವರ್ಷಗಳ ಮಳೆ ಅಂಕಿ ಅಂಶ ಇದೆ. 1965ಕ್ಕಿಂತ ಹಿಂದೆ ಮತ್ತು ಅನಂತರದ ಅಂಕಿಅಂಶ ಗಮನಿಸಿದರೆ ಮಳೆ ಕಡಿಮೆಯಾಗಿರುವುದು ತಿಳಿಯುತ್ತದೆ. ಪ. ಘಟ್ಟ ಪ್ರದೇಶದಲ್ಲಿ 3,500ರಿಂದ 4,500 ಮಿ.ಮೀ. ಮಳೆ ಬೀಳುತ್ತಿತ್ತು.

ಎಲ್ಲೆಲ್ಲಿ ಕಾಡು ನಾಶ ಮಾಡಲಾಯಿತೋ ಅಂತಹ ಪ್ರದೇಶಗಳಲ್ಲಿ ಈಗ 1,700ರಿಂದ 1,900 ಮಿ.ಮೀ. ಮಳೆ ಬೀಳುತ್ತಿದೆ. ಉತ್ತಮ ಅರಣ್ಯ ಇರುವಲ್ಲಿ 3,500ರಿಂದ 4,500 ಮಿ.ಮೀ. ಮಳೆ ಬೀಳುತ್ತದೆ ಎನ್ನುವುದು ನನ್ನ ಅಧ್ಯಯನದ ವಿಷಯ. ಸಹಜ ಅರಣ್ಯ ನಾಶ ಮಾಡಿ ರಬ್ಬರ್‌ ತೋಪು ಬೆಳೆಸುವುದರಿಂದ ಹಸಿರು ಉಳಿದಂತೆ ಆಗುವುದಿಲ್ಲ ಎಂದು ಡಾ.ರಾವ್‌ ನುಡಿದರು.

ಸೌರ ವಿದ್ಯುತ್‌ ಹೇರಳ ಉತ್ಪಾದನೆ ಸಾಧ್ಯವಿದ್ದರೂ ಇದರ ಸಂಗ್ರಹ ಕಷ್ಟವಾಗುತ್ತಿದೆ. ಇದಕ್ಕೆ ಬೇಕಾದ ಸಿಲಿಕಾನ್‌ ಸೆಲ್‌ಗ‌ಳು ದುಬಾರಿ. ಈಗ ಇದಕ್ಕೆ ಪರ್ಯಾಯವಾಗಿ ಪೆರೋಸೈಟ್ಸ್‌ ಬರುತ್ತಿದೆ. ಇದು ಅಗ್ಗ. ಅದಾನಿ ಸಂಸ್ಥೆಯವರು ತಮಿಳುನಾಡಿನಲ್ಲಿ ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿದ್ದಾರೆ. ಭಾರತ, ಸ್ಪೇಯ್ನ, ಅಮೆರಿಕದಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೆ ಬಂಡವಾಲ ಹೂಡಿಕೆ ವೃದ್ಧಿಸಿದೆ ಆಗಿದೆ ಎಂದು ಡಾ. ರಾವ್‌ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.

ಬೆಂಗಳೂರಿನ ಕೆರೆ ಉಳಿಸಿಕೊಂಡಿದ್ದರೆ!: “ವಿದ್ಯಾರ್ಥಿಗಳು ವಿಶೇಷ ಆಸಕ್ತಿ ವಹಿಸಿ ತಮ್ಮ ತಮ್ಮ ಪ್ರದೇಶದಲ್ಲಿ ಕೆರೆ, ಮದಗಗಳನ್ನು ಉಳಿಸಬೇಕು, ನಿರ್ಮಿಸಬೇಕು. ಇದರಿಂದ ನೀರಿನ ಒರತೆ ಹೆಚ್ಚಿ ನೆಲ, ಜಲ ಉಳಿಯುತ್ತದೆ. ಬೆಂಗಳೂರಿನಲ್ಲಿದ್ದ ಸಾವಿರಕ್ಕೂ ಹೆಚ್ಚಿನ ಕೆರೆಗಳನ್ನು ಉಳಿಸಿಕೊಂಡಿದ್ದರೆ ಎತ್ತಿನಹೊಳೆ ಯೋಜನೆಯ ಅಗತ್ಯವೇ ಬರುತ್ತಿರಲಿಲ್ಲ.

ಗೋಕರ್ಣದ ಕೋಟಿತೀರ್ಥವನ್ನು ಉಳಿಸಿದ ಬಗೆಯನ್ನು ನೋಡಿ. ಹಿಂದೆ ಅದು ಮಲಿನವಾಗುತ್ತಿತ್ತು. ಈಗ ಸಣ್ಣ ಎರಡು ಹೊಸ ನೀರಿನ ಹೊಂಡಗಳನ್ನು ನಿರ್ಮಿಸಿ, ಅಲ್ಲಿಗೆ ಅನ್ನ ಹಾಕಲು ತಿಳಿಸಿ ಕೋಟಿತೀರ್ಥವನ್ನು ಶುಚಿಯಾಗಿರಿಸಲು ಸೂಚಿಸಿದೆ. ಪರಿಣಾಮವಾಗಿ ಕೋಟಿತೀರ್ಥ ಪರಿಶುದ್ಧವಾಗಿ ಉಳಿದಿದೆ. ಯಾವುದೇ ನೀರು ಮಲಿನವಾದರೆ ನಾಶವಾಗುತ್ತದೆ,’ ಎಂದು  ಪ್ರೊ. ಟಿ.ವಿ. ರಾಮಚಂದ್ರ ಹೇಳಿದರು.

ಹಿಂದೆ ಕೊಬ್ಬರಿ ಎಣ್ಣೆಯಿಂದ ಕೊಲೆಸ್ಟರಾಲ್‌ ಹೆಚ್ಚುತ್ತದೆ ಎಂಬ ಸುದ್ದಿ ಹಬ್ಬಿಸಿದ್ದರು. ಆದರೆ ಕೊಬ್ಬರಿ ಎಣ್ಣೆಯಿಂದ ಕೊಲೆಸ್ಟರಾಲ್‌ ಹೆಚ್ಚುವುದಿಲ್ಲ ಎಂದು ಸಂಶೋಧನಾ ವರದಿ ಬರುವುದರೊಳಗೆ 4 ಕೋಟಿ ರೂ. ಮೌಲ್ಯದ ಮಾತ್ರೆಗಳ ವ್ಯಾಪಾರ ನಡೆಯಿತು. ಡಾ. ಬಿ.ಎಂ. ಹೆಗ್ಡೆಯವರು ವಿದೇಶಗಳಲ್ಲೂ ಭಾಷಣ ಮಾಡಿ ಕೊಬ್ಬರಿ ಎಣ್ಣೆಯಿಂದ ಕೊಲೆಸ್ಟರಾಲ್‌ ಹೆಚ್ಚುವುದಿಲ್ಲ ಎಂದು ಹೇಳಿದ್ದಾರೆ.
-ಡಾ. ಕೆ.ಜೆ. ರಾವ್‌, ನಿವೃತ್ತ ವಿಜ್ಞಾನಿ

ಟಾಪ್ ನ್ಯೂಸ್

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Kota-Shrinivas

Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.