ಸಂತೆ ಬಾಚಹಳ್ಳಿಯ ಮಹಾಲಿಂಗೇಶ್ವರ ದೇವಾಲಯ
Team Udayavani, Dec 9, 2017, 12:43 PM IST
ಕೆ.ಆರ್ ಪೇಟೆಯಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಒಂದು ಚಿಕ್ಕಪಟ್ಟಣ ಸಂತೆಬಾಚಹಳ್ಳಿ. ಇಲ್ಲಿ ಹೊಯ್ಸಳರ ಕಾಲದ ಸುಂದರವಾದ ಮಹಾಲಿಂಗೇಶ್ವರ ದೇವಾಲಯವಿದೆ. ಊರ ಹೊರ ಭಾಗದಲ್ಲಿ ಸುಂದರವಾದ ಪ್ರಕೃತಿ ಸೌಂದರ್ಯದ ಮಧ್ಯೆ ಹೊಯ್ಸಳರ ಕಾಲದ ಏಕಕೂಟ ಮಹಾಲಿಂಗೇಶ್ವರ ದೇವಾಲಯವು ಶೋಭಾಯಮಾನವಾಗಿದೆ. ಈ ದೇವಾಲಯವು ಗರ್ಭಗೃಹ, ಶುಕನಾಸಿ ಹಾಗೂ ಒಂಭತ್ತು ಅಂಕಣದ ನವರಂಗವನ್ನು ಹೊಂದಿದೆ.
ಈ ದೇವಾಲಯದಲ್ಲಿ ಮೂರ್ತಿಗಳನ್ನು ಹೊಂದಿರುವ ಮೂರು ಹಂತದ ಶಿಖರಗಳಿವೆ. ಇವು ದೇವಾಲಯದ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿವೆ. ಅವುಗಳಲ್ಲಿ ಪ್ರಮುಖವಾಗಿ ಉಗ್ರನರಸಿಂಹ, ವೇಣುಗೋಪಾಲ, ತಾಂಡವೇಶ್ವರ, ಉಮಾಮಹೇಶ್ವರ, ಭೈರವ, ಲಕ್ಷ್ಮೀ ನಾರಾಯಣನ ವಿಗ್ರಹಗಳು ಭಕ್ತಾದಿಗಳನ್ನು ಆಕರ್ಷಿಸುತ್ತಿವೆ.
ತ್ರಿಮೂರ್ತಿಗಳು ಒಂದೇ ಕಡೆ ಇರುವುದು ಮಹಾಲಿಂಗೇಶ್ವರ ದೇವಾಲಯದ ಮತ್ತೂಂದು ಪ್ರಮುಖ ಆಕರ್ಷಣೆ. ದೇಗುಲದ ನವರಂಗದ ಉತ್ತರದ ಸಣ್ಣಗುಡಿಯಲ್ಲಿ ಮಹಾವಿಷ್ಣುವಿನ ವಿಗ್ರಹವಿದ್ದರೆ, ದಕ್ಷಿಣದ ಗುಡಿಯಲ್ಲಿ ಚತುರ್ಮುಖ ಬ್ರಹ್ಮನ ಮೂರ್ತಿ ಇದೆ. ಇವೆರಡರ ಮಧ್ಯಭಾಗದಲ್ಲಿ ಪ್ರಧಾನ ಗರ್ಭಗೃಹವಿದ್ದು ಇಲ್ಲಿ ಶ್ರೀ ಮಹಾಲಿಂಗೇಶ್ವರ ಲಿಂಗರೂಪದಲ್ಲಿ ನೆಲಸಿದ್ದಾನೆ. ಹೀಗಾಗಿ ಇದೊಂದು ತ್ತೈಪುರುಷ ದೇವಾಲಯವೂ ಆಗಿದೆ. ಇಲ್ಲಿರುವ ನವರಂಗದ ನಾಲ್ಕು ಕಂಬಗಳ ಮೇಲೆ ಸೂಕ್ಷ್ಮ ರೀತಿಯಲ್ಲಿ ಬಳ್ಳಿ, ಹೂಗಳು,ಮಣಿಸರಗಳು, ವಜ್ರಾಕೃತಿಗಳ ಚಿತ್ತಾರಗಳಿದ್ದು ನೋಡುಗರನ್ನು ಸೆಳೆಯುತ್ತಿವೆ. ನವರಂಗದಲ್ಲಿ 9 ಭುವನೇಶ್ವರಿಗಳಿದ್ದು ವಿಶಿಷ್ಟವಾಗಿ ವಿನ್ಯಾಸಗೊಂಡಿವೆ.
ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿದ ಮಹಾಲಿಂಗೇಶ್ವರ ದೇವಾಲಯದಲ್ಲಿ ಕಾರ್ತಿಕ ಸೋಮವಾರಗಳು ಹಾಗೂ ಮಹಾಶಿವರಾತ್ರಿ ದಿನಗಳಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ಪ್ರತಿ ವರ್ಷ ದೀಪಾವಳಿ ಅಮವಾಸ್ಯೆಯಂದು ಲಕ್ಷ ದೀಪೋತ್ಸವ ನಡೆಯುತ್ತದೆ. ಈ ದೇವಾಲಯಕ್ಕೆ ಹೊಂದಿಕೊಂಡಂತೆ ಪಾರ್ವತಿ ದೇವಿಗೆ ಪ್ರತ್ಯೇಕ ಗರ್ಭಗುಡಿ ಇದೆ.
ಸಂತೇಬಾಚಹಳ್ಳಿಯು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿದೆ. ನಾಗಮಂಗಲ-ಕೆ.ಆರ್.ಪೇಟೆ ರಸ್ತೆಯಲ್ಲಿ ನಾಗಮಂಗಲದಿಂದ ಸುಮಾರು 2 4 ಕಿ.ುà ಬಂದರೆ ಸಂತೇಬಾಚಹಳ್ಳಿ ಹ್ಯಾಂಡ್‌ಪೊಸ್ಟ್ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿ 3 ಕಿ.ಮೀ ಕ್ರಮಿಸಿ ಮಹಾಲಿಂಗೇಶ್ವರ ದೇವಾಲಯ ತಲುಪಬಹುದು.
ಆಶಾ ಎಸ್. ಕುಲಕರ್ಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.