ಆವಿಷ್ಕಾರಕ್ಕೆ ಕುತೂಹಲದ ಮನೋಭಾವನೆ ಅಗತ್ಯ: ಡಾ| ಶಾಂತಾರಾಮ ಶೆಟ್ಟಿ
Team Udayavani, Dec 9, 2017, 1:04 PM IST
ಉಳ್ಳಾಲ: ಸಂಶೋಧಕರು ಹೊಸ ಹೊಸ ವಿಷಯಗಳ ಬಗ್ಗೆ ಆಳವಾದ ಜ್ಞಾನದೊಂದಿಗೆ ಕುತೂಹಲ ಮನೋಭಾವನೆಯಿಂದ ಸಂಶೋಧನೆ ನಡೆಸಿದರೆ, ಹೊಸ ಆವಿಷ್ಕಾರಗಳು ಬರಲು ಸಾಧ್ಯ ಎಂದು ನಿಟ್ಟೆ ವಿವಿಯ ಸಹ ಕುಲಾಧಿಪತಿ ಪ್ರೊ| ಡಾ| ಎಂ. ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ನಿಟ್ಟೆ ವಿವಿಯ ಕೆ.ಎಸ್. ಹೆಗ್ಡೆ ಅಡಿಟೋರಿಯಂನಲ್ಲಿ ಇಂಡಿಯನ್ ವೈರೊಲಾಜಿಕಲ್ ಸೊಸೈಟಿ ಹಾಗೂ ನಿಟ್ಟೆ ವಿವಿ ಜಂಟಿ ಆಶ್ರಯದಲ್ಲಿ ಗುರುವಾರ ನಡೆದ ವೈರೋಕಾನ್- 2017 ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿ ಮಾತನಾಡಿದರು. ಪ್ರಸ್ತುತ ದಿನಗಳು ಸಂಶೋಧನೆಗೆ ಪೂರಕವಾಗಿವೆ. ಈ ನಿಟ್ಟಿನಲ್ಲಿ ಇಂತಹ ವಿಚಾರ ಸಂಕಿರಣಗಳು ಹೊಸ ವಿಚಾರಗಳ ಕುರಿತು ಬೆಳಕು ಚೆಲ್ಲಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಇಂಡಿಯನ್ ವೈರೊಲಾಜಿಕಲ್ ಸೊಸೈಟಿ ಅಧ್ಯಕ್ಷ ಪ್ರೊ| ಅನುಪಮ್ ವರ್ಮ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಸಂಶೋಧನೆಗಳು ನಡೆದಿರುವುದರಿಂದ ಸದ್ಯ ರೋಗ ಪತ್ತೆಹಚ್ಚುವಿಕೆ ವಿಧಾನ ಸರಳವಾಗಿದೆ ಎಂದರು.
ನಿಟ್ಟೆ ವಿವಿ ಕುಲಪತಿ ಪ್ರೊ| ಡಾ| ಸತೀಶ್ ಕುಮಾರ್ ಭಂಡಾರಿ ನಿಟ್ಟೆ ವಿವಿಯ ಕುರಿತಾಗಿ ಪರಿಚಯಿಸಿ, ಎ ಸೆಂಚುರಿ ಆಫ್ ಪ್ಲಾಂಟ್ ವೈರಾಲಾಜಿ ಇನ್ ಇಂಡಿಯಾ ಎಂಬ ಕೃತಿ ಬಿಡುಗಡೆಗೊಳಿಸಿದರು.
ಸಂಪಾದಕ ಮಂಡಳಿಯ ಪ್ರೊ| ಮಂಡಲ್ ಕೃತಿಯ ಬಗ್ಗೆ ಪರಿಚಯಿಸಿದರು. ಇಂಟರ್ ನ್ಯಾಷನಲ್ ಕಮಿ ಷನ್ ಆಫ್ ವೈರಲ್ ಟ್ಯಾಕ್ಸಾನಮಿ ಯುನೈಟೆಡ್ ಕಿಂಗ್‌ಡಮ್ ಚೇರ್‌ವೆುನ್ ಪ್ರೊ| ಡಾ| ಆ್ಯಂಡ್ ರೋ ಡೇವಿಸನ್ ಮಾತನಾಡಿದರು. ವೈರೊಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಪ್ರೊ| ಡಾ| ಜಿ.ಪಿ.ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಮ್ಮೇಳನ ಸಂಘಟಕ ಪ್ರೊ| ಡಾ| ಇಡ್ಯಾ ಕರುಣಾಸಾಗರ್ ಸ್ವಾಗತಿಸಿದರು. ನಿಟ್ಟೆ ವಿವಿ ಸಂಶೋಧನಾ ನಿರ್ದೇಶಕಿ, ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಪ್ರೊ| ಡಾ| ಇಂದ್ರಾಣಿ ಕರುಣಾಸಾಗರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.