ನಕಾರಾತ್ಮಕ ಕಿಡಿಯಿಂದ ಸಕಾರಾತ್ಮಕ ಜ್ಯೋತಿ ಬೆಳಗಲು ಸಾಧ್ಯವೇ?


Team Udayavani, Dec 9, 2017, 1:16 PM IST

09-46.jpg

ನಮ್ಮ ಸಂಪರ್ಕಕ್ಕೆ ಬರುವ ವ್ಯಕ್ತಿಯನ್ನು ಚಿಕ್ಕವನೆಂದು ಸಾಬೀತು ಮಾಡಿ ನಾವು ದೊಡ್ಡವರಾಗುವುದಕ್ಕೆ ಸಾಧ್ಯವಿಲ್ಲ. ಯಾವಾಗ ನಾವು ಇನ್ನೊಬ್ಬರಲ್ಲಿ ಕೀಳರಿಮೆ ಹುಟ್ಟುಹಾಕುವ ಪ್ರಯತ್ನವನ್ನು ನಿಲ್ಲಿಸುತ್ತೀವೋ ಆಗ ಮಾತ್ರ ನಮ್ಮಲ್ಲೂ ಸ್ವಾಭಿಮಾನದ ಪ್ರತಿಷ್ಠಾಪನೆ ಆಗುತ್ತದೆ.

ಸೋಷಿಯಲ್ ಮೀಡಿಯಾ ಅಥವಾ ಸಾಮಾಜಿಕ ಮಾಧ್ಯಮವನ್ನು ನಾವು ಕೃತಕ ಜಗತ್ತು ಎಂದು ಭಾವಿಸಿ ಅದನ್ನು ಅಣಕಿಸುತ್ತೇವೆ.  ಅದರಲ್ಲಿ ವಾಸ್ತವ ಏನೂ ಇಲ್ಲ. ಜನರೆಲ್ಲ ಬಹಳ ಫೇಕ್‌ ಆಗಿ ವರ್ತಿಸುತ್ತಾರೆ. ಪ್ಲೀಸ್‌ ಅದನ್ನೆಲ್ಲ ಸೀರಿಯಸ್‌ ಆಗಿ ತೊಗೊಳ್ಬೇಡಿ ಎಂದೂ ಹೇಳುತ್ತೇವೆ. ಸರಿ ಒಪ್ಪಿಕೊಳ್ಳೋಣ.

ಹಾಗಿದ್ದರೆ ಈಗ ಪ್ರಶ್ನೆಯೊಂದು ಏಳುತ್ತದೆ. ಅದೆಲ್ಲವೂ ಫೇಕ್‌ ಎನ್ನುವು ದಾದರೆ, ಸೋಷಿಯಲ್‌ ಮೀಡಿಯಾದಲ್ಲಿ ಆಗುವ ಅಪ್ರಿಯ ಘಟನೆಗ ಳಿಂದಾಗಿ ನಾವು ವಾಸ್ತವದಲ್ಲೇಕೆ ವಿಪರೀತ ಪ್ರಭಾವಿತರಾಗುತ್ತೇವೆ?

ನಾವು ಸೋಷಿಯಲ್‌ ಮೀಡಿಯಾದಲ್ಲಿ ಸಿಗುವ ಪ್ರೇಮ ಮತ್ತು ಆದರ ವನ್ನಂತೂ ಸುಳ್ಳೆಂದು ಭಾವಿಸಿಬಿಡುತ್ತೇವೆ. ಆದರೆ ಅಲ್ಲಿ ಸೃಷ್ಟಿಯಾಗುವ ದ್ವೇಷವನ್ನೇಕೆ ನಮ್ಮ ಜೀವನದ ವಾಸ್ತವವೆಂದು ಭಾವಿಸಿ ಅದರ ಭಾರವನ್ನು ತಲೆಯಲ್ಲಿ ಹೊತ್ತು ತಿರುಗುತ್ತೇವೆ? ಭಾರ ತಡೆಯದೆ ತಲೆಚಿಟ್ಟು ಹಿಡಿಸಿ ಕೊಳ್ಳುತ್ತೇವೆ? ಸೋಷಿಯಲ… ಮೀಡಿಯಾದಲ್ಲಿ ಸಿಗುವ ಮಾನ- ಸಮ್ಮಾನವನ್ನು ನಾವು ಫೇಕ್‌/ನಕಲಿ ಎನ್ನುವುದೇ ಆದರೆ, ಅಲ್ಲಿ ನಮಗೆ ಎದುರಾಗುವ ಅಪಮಾನವನ್ನೂ ಫೇಕ್‌ ಎಂದು ಭಾವಿಸಬೇಕು ತಾನೆ?

ಅದರಲ್ಲಿ ಉದ್ಭವಿಸುವ ಪ್ರೀತಿಯು ಸುಳ್ಳೆನ್ನುವುದಾದಾರೆ, ಅಲ್ಲಿ ಹುಟ್ಟಿ ಕೊಳ್ಳುವ ದ್ವೇಷವೂ ಸುಳ್ಳಿನ ಶ್ರೇಣಿಯಲ್ಲಿ ಜಾಗ ಪಡೆಯಬೇಕಲ್ಲವೇ? ಅದೇಕೆ ಯಾವಾಗಲೂ ನಾವು ನಮ್ಮ ಜೀವನದಲ್ಲಿ ಅರ್ಥಪೂರ್ಣ ಭಾವಗಳೆನಿವೆಯೊ ಅವುಗಳಿಂದ ಪ್ರಭಾವಿತರಾಗುವುದಿಲ್ಲ? ಆದರೆ ವೇಸ್ಟ್‌ ಮತ್ತು ಟೇಸ್ಟ್‌ ಯಾವುದು ವ್ಯರ್ಥ ಭಾವನೆಗಳಾಗಬೇಕೋ ಅವನ್ನು ಮಾತ್ರ ನಾವು ಅರ್ಥಪೂರ್ಣವೆಂದು ಭಾವಿಸಿ ಪ್ರಭಾವಿತರಾಗಿಬಿಡುತ್ತೇವೆ? ಇದರರ್ಥ ವಿಷ್ಟೆ- ಸೋಷಿಯಲ… ಮೀಡಿಯಾದಲ್ಲಿನ ಸಕಾರಾತ್ಮಕ ಅಂಶಗಳಿಗಿಂತಲೂ ಹೆಚ್ಚಾಗಿ, ನಕಾರಾತ್ಮಕ ಸಂಗತಿಗಳೇ ನಮ್ಮನ್ನು ಹೆಚ್ಚು ಪ್ರಭಾವಿಸುತ್ತವೆ. 

ಹಾಗಿದ್ದರೆ ಮನುಷ್ಯನ ಮೂಲ ಗುಣ ಅಥವಾ ಅವನ ಪ್ರಕೃತಿಯೇ ನಕಾರಾತ್ಮಕವಿರಬಹುದಾ? ಇರಬಹುದೇನೋ?! ಈ ಕಾರಣದಿಂದಾಗಿಯೇ ನಾವು ಸಾರರಹಿತವಾದದ್ದು ಯಾವುದಿದೆಯೋ ಅದನ್ನು ಸಾರಭರಿತವೆಂದು ಭಾವಿಸಿಬಿಟ್ಟಿರಬಹುದಾ? ಇದರಿಂದಾಗಿ ಯಾವುದು ನಿಜಕ್ಕೂ ನಮ್ಮ ಪಾಲಿಗೆ ವೇಸ್ಟ್ ಆಗಬೇಕಿತ್ತೋ ಅದೇ ನಮ್ಮ ಟೇಸ್ಟ್ ಆಗಿ ಬದಲಾಗಿದೆಯೇ?

ಅದೇಕೆ ಸೋಷಿಯಲ್ ಮೀಡಿಯಾದಲ್ಲಿ ನಾವು ಜನರ ಗುಣವನ್ನು ಸುಲಭವಾಗಿ ಅರ್ಥಮಾಡಿಕೊಂಡಿದ್ದೇವೆ ಎಂದು ವಾದಿಸುತ್ತೇವೆ. ಅವರ ಮಾತುಗಳನ್ನು ಏನಕೇನ ಏಕ್‌ದಂ ಇದೇ ಎಂದು ತೀರ್ಪು ನೀಡಿಬಿಡುತ್ತೇವೆ. ಆ ವ್ಯಕ್ತಿಯ ಗುಣ ಇಂತಿಂಥದ್ದು ಎಂದು  ಹೇಳಿಬಿಡುತ್ತೇವೆ. ಆದರೆ ಇಷ್ಟೆಲ್ಲ ಮಾಡುವ ನಾವು ಅದೇಕೆ ಸಾಮಾಜಿಕ ಮಾಧ್ಯಮಗಳಲ್ಲಿನ ನಮ್ಮ ವ್ಯಕ್ತಿತ್ವ-ವರ್ತನೆಯ ಬಗ್ಗೆ ತೃಣಮಾತ್ರವೂ ಅರ್ಥಮಾಡಿಕೊಳ್ಳುವುದಿಲ್ಲ?

ನಾವು ಜೀವನ ಪರ್ಯಂತ ಕೂಡಿಸುವ ಭಾವದಿಂದ ಪ್ರೇರಿತವಾಗಿರುವ ಜೀವಿಗಳು, ಆದರೆ ನಾವಿಲ್ಲಿ (ಸೋಷಿಯಲ್‌ ಮೀಡಿಯಾಗಳಲ್ಲಿ) ಕಳೆದುಕೊಳ್ಳುತ್ತಾ ಸಾಗುವುದೇಕೆ? ಅದೇಕೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬಗ್ಗೆ, ತನ್ನ ದೃಷ್ಟಿಕೋನದ ಬಗ್ಗೆ ಆದರ, ಗೌರವ ಮತ್ತು ಸ್ವಾಗತವನ್ನು ನಿರೀಕ್ಷಿಸುತ್ತಾನೆ. ಆದರೆ ಅನ್ಯ ಜನರ ದೃಷ್ಟಿಕೋನವನ್ನು ಒಪ್ಪದೆ, ಅದನ್ನು ಅಪಮಾನಿಸುವುದಕ್ಕೆ ಹಿಂದೆ ಮುಂದೆ ಯೋಚಿಸುವುದಿಲ್ಲ? 

ಬಿತ್ತಿದ್ದನ್ನೇ ಬೆಳೆಯುತ್ತೇವೆ
ನಾವು ಚಿಕ್ಕವರಿದ್ದಾಗಿನಿಂದಲೂ “ಏನು ಬಿತ್ತುತ್ತೇವೋ ಅದನ್ನೇ ಬೆಳೆ ಯುತ್ತೀವಿ’ ಎನ್ನುವ ಹಿತವಚನವನ್ನು ಬಾಯಿಪಾಠ ಮಾಡಿ ಬೆಳೆದಿದ್ದೇವೆ. ಈ ಮಾತು ನಮ್ಮ ನಾಲಗೆಯ ಮೇಲೆಯೇ ಇದೆ. ಹೀಗಿರುವಾಗ ಇನ್ನೊಬ್ಬರಿಗೆ ಅಪಮಾನ ಮಾಡುತ್ತಾ ನಮಗೆ “ಮಾನದ ಮಹಲ…’ ಹೇಗೆ ನಿರ್ಮಿಸಿಕೊಳ್ಳಬಲ್ಲೆವು?

ಅದೇಕೆ ನಾವು ವಿಷ ಬೀಜವನ್ನು, ಮುಳ್ಳನ್ನು ಬಿತ್ತಿ ಹೂವಿನ ಗಿಡವನ್ನೇಕೆ ನಿರೀಕ್ಷಿಸುತ್ತೇವೆ? ನಮ್ಮ ಸುತ್ತಲಿನ ವಿದ್ಯಮಾನಗಳನ್ನೆಲ್ಲ ಬಾಲಿಷ ಮತ್ತು ನಗಣ್ಯವೆಂದು ಭಾವಿಸುತ್ತಾ , “ಸ್ವಯಂ’ ಅನ್ನು ಮಾತ್ರ ಪ್ರೌಢ ಮತ್ತು ಗಣಮಾನ್ಯವೆಂದು ರುಜುವಾತುಪಡಿಸಿಕೊಳ್ಳುವುದು ಏಕೆೆ? ಹೇಗೆ? ಈ ವಿಷಯವಾಗಿ ಮನಃಶಾಸ್ತ್ರಜ್ಞರು ಹೇಳುತ್ತಾರೆ- ಯಾವಾಗ ನಮ್ಮ ಬಗ್ಗೆ ನಮಗೆ ಗೌರವವಿರುವುದಿಲ್ಲವೋ, ನಮ್ಮ ತಲೆಯಲ್ಲಿ ಸ್ವಯಂ ಬಗ್ಗೆ ಅಸ್ವೀಕಾರ, ಅನಾದರ, ಅಸಹಮತಿಯ ಭಾವವನ್ನು ತುಂಬಿಕೊಂಡಿರು ತ್ತೇವೋ ಆಗ ಮಾತ್ರವೇ ನಾವು ಇನ್ನೊಬ್ಬರಿಂದ ಸ್ವೀಕಾರ, ಆದರ ಮತ್ತು ಸಹಮತಿಯನ್ನು ತೀವ್ರವಾಗಿ ಬಯಸುತ್ತೇವೆ. ಈ ಸಮಯದಲ್ಲಿ ನಾವು, ನಮಗೆ ಯಾವುದನ್ನು ಕೊಟ್ಟು ಕೊಳ್ಳಲು ಆಗುತ್ತಿಲ್ಲವೋ ಅದನ್ನು ಇನ್ನೊ ಬ್ಬರಿಗೆ ಹೇಗೆ ಕೊಡಬಲ್ಲೆವು ಎನ್ನುವುದನ್ನು ಮರೆತುಬಿಡುತ್ತೇವೆ.

ಕೊಡುಕೊಳ್ಳುವಿಕೆ
ನಾವು ಇನ್ನೊಬ್ಬರಿಂದ ಏನನ್ನು ನಿರೀಕ್ಷಿಸುತ್ತೀವೋ ಅದನ್ನು ಅವರೂ ನಮ್ಮಿಂದ ನಿರೀಕ್ಷಿಸುತ್ತಾರಲ್ಲವೇ? ಇದು ಕೊಡುಕೊಳ್ಳುವಿಕೆಯ ಪ್ರಕ್ರಿಯೆ ಯಷ್ಟೆ. ಸೋಷಿಯಲ್ ಮೀಡಿಯಾ ಎಂದು ಕರೆಸಿಕೊಳ್ಳುವ ಈ ಮಾಧ್ಯ ಮದಲ್ಲಿ ನಾವು ಬಯಸದೆಯೇ ಅನ್‌ಸೋಷಿಯಲ್‌ ಆಗುತ್ತಾ ಹೊರಟಿ ದ್ದೇವೆ. ಅದರಲ್ಲಿ ದಕ್ಕುವ ತಿರಸ್ಕಾರ, ಅಪಮಾನ, ದ್ವೇಷವನ್ನೆಲ್ಲ ಸಹಜವೆಂದು ಸ್ವೀಕರಿಸಿ ಅದರಿಂದ ಪ್ರಭಾವಿತರಾಗುತ್ತಿದ್ದೇವೆ. ಏಕೆಂದರೆ ಈ ಎಲ್ಲಾ ನಕಾರಾತ್ಮಕ ಭಾವನೆಗಳು ನಮ್ಮೊಳಗೆ ಗಟ್ಟಿಯಾಗಿ ಬೆಸೆದುಕೊಂಡುಬಿಟ್ಟಿವೆ.

ಈಗ ವಿಚಾರಮಾಡಲೇಬೇಕಾದ ಸಂಗತಿಯೆಂದರೆ ನಾವು ಸ್ವಯಂ ನಿಂದಲೇ ತುಂಡರಿಸಿಕೊಂಡಿರುವಾಗ, ಸಂಸಾರದೊಂದಿಗೆ ಕೂಡಿಕೊಳ್ಳು ವುದು ಹೇಗೆ? ಸಂಸಾರದೊಂದಿಗೆ ಕೂಡಿಕೊಳ್ಳಬೇಕು ಎಂದಾದರೆ ಮೊದಲು ನಮ್ಮೊಂದಿಗೆ ನಾವು ಜೊತೆಯಾಗಬೇಕು. ಆಗ ಮಾತ್ರ ಸಮಾಜವನ್ನು ಮುರಿದುಬೀಳದಂತೆ ಕಾಪಾಡಲು ನಾವೆಲ್ಲ ಶಕ್ತರಾಗುತ್ತೇವೆ. ನಮ್ಮೊಂದಿಗೆ ನಾವು ಸ್ನೇಹ ಭಾವ ಬೆಳೆಸಿಕೊಂಡಾಗ ಮಾತ್ರ ಸಮಸ್ತ ಸಂಸಾರವನ್ನು ಅಂಥದ್ದೇ ದೃಷ್ಟಿಯಲ್ಲಿ ನೋಡಬಲ್ಲೆವು. 

ಬೇಕಿದ್ದರೆ ಗಮನಿಸಿ ನೋಡಿ. ಶ್ರೇಷ್ಠ ವ್ಯಕ್ತಿತ್ವದ ವ್ಯಕ್ತಿಗಳಿಗೆ “ಇನ್ನೊಬ್ಬರ ಕನಿಷ್ಠತೆಯ ಮೇಲೆ ಸ್ವಯಂ ಶ್ರೇಷ್ಠತೆಯ ಮಹಲನ್ನು ಕಟ್ಟಿನಿಲ್ಲಿಸಲಾಗದು’ ಎನ್ನುವ ಸತ್ಯದ ಅರಿವಿರುತ್ತದೆ. ನಮ್ಮ ಸಂಪರ್ಕಕ್ಕೆ ಬರುವ ವ್ಯಕ್ತಿಯನ್ನು ಚಿಕ್ಕವನೆಂದು ಸಾಬೀತು ಮಾಡಿ ನಾವು ದೊಡ್ಡವರಾಗುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಇಂಥವರಿಗೆ ಗೊತ್ತಿರುತ್ತದೆ. ಯಾವಾಗ ನಾವು ಇನ್ನೊಬ್ಬರಲ್ಲಿ ಕೀಳರಿಮೆ ಹುಟ್ಟುಹಾಕುವ ಪ್ರಯತ್ನವನ್ನು ನಿಲ್ಲಿಸುತ್ತೀವೋ ಆಗ ಮಾತ್ರ ನಮ್ಮಲ್ಲೂ ಸ್ವಾಭಿಮಾನದ ಪ್ರತಿಷ್ಠಾಪನೆ ಆಗುತ್ತದೆ. ನಕಾರಾತ್ಮಕತೆಯ ಕಿಡಿಯಿಂದ ಸಕಾರಾತ್ಮಕ ಜ್ಯೋತಿ ಬೆಳಗುವುದಕ್ಕೆ ಸಾಧ್ಯವಿದೆಯೇ?

ನಮ್ಮ ಜೀವನ ಆಭಾಸಗಳಿಂದಲ್ಲ, ಭಾವನೆಗಳಿಂದ ನಡೆಯುವಂಥದ್ದು. ನಮ್ಮ ವಾಸ್ತವಿಕ ಜೀವನದ ಭಾವನೆಗಳ ಪ್ರತಿಬಿಂಬ ಸೋಷಿಯಲ್ ಮೀಡಿಯಾ. ಸೋಷಿಯಲ್ ಮೀಡಿಯಾದೊಳಗಿನ ನಮ್ಮ ಭಾವನೆಗಳ ಪ್ರತಿರೂಪವೇ ವಾಸ್ತವಿಕ ಜೀವನ. 
ಬನ್ನಿ ನಮ್ಮ ಪ್ರತಿಬಿಂಬವನ್ನು ನೋಡಿಕೊಂಡು ಬಿಂಬವನ್ನು ಸುಧಾರಿಸಿ ಕೊಳ್ಳೋಣ. ಬಿಂಬ ಸುಧಾರಿಸಿ ಸುಂದರವಾದರೆ ಪ್ರತಿಬಿಂಬವೂ ಸುಂದರವಾಗುತ್ತದಲ್ಲವೇ?  ಮಹಾದೇವ ಶಿವ ಮತ್ತು ಜಗಜ್ಜನನಿ ಶಕ್ತಿಯ ಆಶಿರ್ವಾದ ನಮ್ಮೆಲ್ಲರ ಮೇಲೆ ಸದಾಇರಲಿ ಎಂಬ ಪ್ರಾರ್ಥನಿಯೊಂದಿಗೆ…

ಅಶುತೋಶ್‌ ರಾಣಾ ಬಾಲಿವುಡ್‌ ನಟ

ಟಾಪ್ ನ್ಯೂಸ್

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

11

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.