ಸಾಮರಸ್ಯ ನಡಿಗೆ: ಪೂರ್ವಭಾವಿ ಸಮಾಲೋಚನಾ ಸಭೆ


Team Udayavani, Dec 9, 2017, 3:54 PM IST

9-Dec-12.jpg

ಬೆಳ್ತಂಗಡಿ: ಚುನಾವಣೆಗಾಗಿ ದ.ಕ.ದಲ್ಲಿ ಕೋಮಗಲಭೆ ಉಂಟು ಮಾಡಲಾಗುತ್ತಿದೆ. ಸಾಮರಸ್ಯ ನಡಿಗೆಗೆ ಪಕ್ಷ ಮುಖ್ಯ ಅಲ್ಲ. ಜಿಲ್ಲೆಯ ಸಾಮರಸ್ಯವೇ ಮುಖ್ಯ. ಇಲ್ಲಿ ಯಾವುದೇ ಘೋಷಣೆಗಳಿಗೆ ಅವಕಾಶ ಇಲ್ಲ. ಕೇವಲ ಮೌನ ನಡಿಗೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಾತ್ಯತೀತ ಪಕ್ಷ, ಸಂಘಟನೆಗಳ ಸಹಭಾಗಿತ್ವದಲ್ಲಿ ಡಿ.12ರಂದು ಫ‌ರಂಗಿ ಪೇಟೆಯಿಂದ ಮಾಣಿವರೆಗೆ ನಡೆಯುವ ಸಾಮರಸ್ಯ ನಡಿಗೆ ಸೌಹಾರ್ದದ ಕಡೆಗೆ ಕುರಿತು ಸಮಾಲೋಚನ ಸಭೆಯಲ್ಲಿ ಮಾತನಾಡಿದರು.

ಬಿಜೆಪಿಗೆ ಹೋಗಲಾರೆ
ಕೆಲವು ಮಾಧ್ಯಮಗಳಿಗೂ ಸಂಯಮದ ಅಗತ್ಯವಿದೆ. ಇಲ್ಲಸಲ್ಲದ್ದನ್ನು ಇಡೀ ದಿನ ಪ್ರಚಾರ ಮಾಡಬಾರದು. ಬಂಗೇರ ಬಿಜೆಪಿಗೆ ಎಂದು ಅಪಪ್ರಚಾರ ಮಾಡಿದರು. ಸ್ಪಷ್ಟನೆ ನೀಡಿದರೆ ಅದನ್ನು ಸಣ್ಣದಾಗಿ ಹಾಕಿದರು. ನಾನು ಬಿಜೆಪಿಗೆ ಖಂಡಿತ ಹೋಗುವುದಿಲ್ಲ. ಬಿಜೆಪಿಗೆ ಹೋಗುವುದು ಎಂದರೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ ಎಂದರು.

ಜಿಲ್ಲೆಗೆ ಕಳಂಕ ತರುವ ಕೆಲಸ
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ವಿದ್ಯಾರ್ಥಿ ದೆಸೆಯಿಂದ ಸಾಮಾಜಿಕ ಬದುಕಿಗೆ ಒಡ್ಡಿಕೊಂಡವನು ನಾನು. ಅಂದಿನ ಹಳ್ಳಿಗಳಲ್ಲಿ ಜಾತಿಗಳ ನಡುವೆ ವೈಷಮ್ಯ ಇರಲಿಲ್ಲ. ಇತ್ತೀಚೆಗೆ ಮನುಷ್ಯ, ಮನುಷ್ಯರ ನಡುವೆ ವರ್ಗ ಸಂಘರ್ಷ ತಂದಿಡುವ ಕೆಲಸವನ್ನು ಕೆಲವು ಸಂಘಟನೆಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ದ್ವೇಷದ ರಾಜಕೀಯ ಹರಡಿಸುತ್ತಿವೆ. ಇದು ಸಾಮರಸ್ಯಕ್ಕೆ ದೊಡ್ಡ ಗಂಡಾಂತರ. ಬುದ್ಧಿವಂತರ ಜಿಲ್ಲೆಯಲ್ಲಿ ಘರ್ಷಣೆ ಮಾಡಿ ಜಿಲ್ಲೆಗೆ ಕಳಂಕ ತರುವ ಕೆಲಸ ನಡೆದಿದೆ ಎಂದರು.

ಸಮಾಲೋಚನಾ ಸಭೆಯಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಕೆಪಿಸಿಸಿ ಹಿಂದುಳಿದ ಘಟಕಗಳ ಉಪಾಧ್ಯಕ್ಷ ಬಿ. ಪೀತಾಂಬರ ಹೇರಾಜೆ, ಬ್ಲಾಕ್‌ ಕಾಂಗ್ರೆಸ್‌ ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಗ್ರಾಮಾಂತರ ಅಧ್ಯಕ್ಷ ಶ್ರೀನಿವಾಸ ಕಿಣಿ, ಕೆಪಿಸಿಸಿ ಸದಸ್ಯ ರಾಮಚಂದ್ರ ಗೌಡ, ಸಿಪಿಐಎಂ ಕಾರ್ಯದರ್ಶಿ ಶಿವಕುಮಾರ್‌, ರೈತ ಸಂಘದ ಬಿ.ಎಂ. ಭಟ್‌, ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗ ಸಂಚಾಲಕ ಚಂದು ಎಲ್‌, ಜಿ.ಪಂ. ಸದಸ್ಯರಾದ ಧರಣೇಂದ್ರ, ಸಾಹುಲ್‌ ಹಮೀದ್‌ ಕೆ.ಕೆ., ನಮಿತಾ, ಶೇಖರ ಕುಕ್ಕೇಡಿ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಸದಸ್ಯ ಪ್ರವೀಣ್‌, ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್‌, ಉಪಾಧ್ಯಕ್ಷ ಡಿ. ಜಗದೀಶ್‌, ಸದಸ್ಯರಾದ ಸಂತೋಷ್‌ ಕುಮಾರ್‌ ಜೈನ್‌, ಮಮತಾ ವಿ. ಶೆಟ್ಟಿ, ನಳಿನಿ ವಿಶ್ವನಾಥ್‌, ರಮೇಶ್‌ ಪೂಜಾರಿ, ಜೆಡಿಎಸ್‌ನ ಸುದರ್ಶನ ಹೆಗ್ಡೆ, ಕಾಂಗ್ರೆಸ್‌ನ ಮುಖಂಡರಾದ ಹರೀಶ ಗೌಡ ಬಂದಾರು, ನಾಗರಾಜ ಲಾೖಲ, ಪ್ರಮೋದ್‌ ರೆಖ್ಯ, ಪದ್ಮನಾಭ ಸಾಲ್ಯಾನ್‌ ಮಾಲಾಡಿ, ಮೋಹನ ಗೌಡ ಕಲ್ಮಂಜ,  ಇಸುಬು ಇಳಂತಿಲ, ಅಶ್ರಫ್‌ ನೆರಿಯ, ಶ್ರೀನಿವಾಸ್‌ ಉಜಿರೆ, ಬಿ.ಎಂ. ಹಮೀದ್‌, ರಫೀಕ್‌ ಸವಣಾಲು, ವಿಠಲ ಕುಕ್ಕೇಡಿ, ಅಶೊಕ್‌ ಪಾಣೂರು, ಮಲಯಾಳಿ ಕ್ರಿಶ್ಚಿಯನ್‌ ಎಸೋಸಿಯೇಶನ್‌ನ ಮ್ಯಾಥ್ಯೂ ಎ.ಸಿ., ಅಜಯ್‌ ಬೆಳ್ತಂಗಡಿ, ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕರೀಂ ಗೇರುಕಟ್ಟೆ, ಕರ್ನಾಟಕ ಆದಿವಾಸಿ ಮಲೆಕುಡಿಯ ಸಂಘದ ಸಂಚಾಲಕ ಜಯಾನಂದ ಪಿಜಕಳ, ಮೂಲನಿವಾಸಿ ಮಲೆಕುಡಿಯ ಸಂಘದ ಕಾರ್ಯದರ್ಶಿ ಲೋಕೇಶ್‌ ಬಿ.ಕೆ., ಡಿಎಸ್‌ಎಸ್‌ನ ಬಿ.ಕೆ. ವಸಂತ್‌, ನೇಮಿರಾಜ ಕಿಲ್ಲೂರು, ನಾರಾಯಣ ಪುದುವೆಟ್ಟು, ಆದಿವಾಸಿ ಹಕ್ಕುಗಳ ಹೋರಾಟ ಸಮಿತಿಯ ಶೇಖರ್‌ ಎಲ್‌., ಆದಿವಾಸಿ ಸಮನ್ವಯ ಸಮಿತಿ ಸದಸ್ಯ ವಸಂತ ನಡ, ತಾಲೂಕು ಬೈರ ಸಮಾಜ ಸಂಘದ ಅಧ್ಯಕ್ಷ ಉದಯ್‌ಕುಮಾರ್‌ ಲಾೖಲ, ತಾಲೂಕು ಮುಸ್ಲಿಂ ಒಕ್ಕೂಟದ ನಜೀರ್‌ ಬೆಳ್ತಂಗಡಿ, ಹಸನಬ್ಬ ಚಾರ್ಮಾಡಿ, ಜಮೀಯತುಲ್‌ ಫಲಾಹ್‌ನ ಕಾಸಿಂ ಮಲ್ಲಿಗೆಮನೆ, ಉಮ್ಮರ್‌ಕುಂಞಿ ನಾಡ್ಜೆ, ಅಲ್ಪಸಂಖ್ಯಾಕ ಘಟಕ ಮುಖಂಡ ಅಬ್ದುಲ್‌ ರಹಿಮಾನ್‌ ಪಡ್ಪು , ಪ್ರಗತಿಪರ ಚಿಂತಕ ದಮ್ಮಾನಂದ, ಜಯರಾಮ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

Hospitalised: ಚಂದ್ರಬಾಬು ನಾಯ್ಡು ಸಹೋದರನ ಆರೋಗ್ಯ ಸ್ಥಿತಿ ಗಂಭೀರ… ಆಸ್ಪತ್ರೆಗೆ ದಾಖಲು

Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.