ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಅಂತರ್‌ಶಾಲಾ ಪ್ರತಿಭಾ ಸ್ಪರ್ಧೆ
Team Udayavani, Dec 9, 2017, 4:21 PM IST
ಮುಂಬಯಿ: ಜಗಜ್ಯೋತಿ ಕಲಾವೃಂದ ಮುಂಬಯಿ ಇದರ ವಾರ್ಷಿಕ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಅಂತರ್‌ಶಾಲಾ ಪ್ರತಿಭಾಸ್ಪರ್ಧೆ ಹಾಗೂ ಸಮ್ಮಾನ ಡಿ. 3 ರಂದು ಅಲೆಕ್ಸಾಂಡ್ರಿಯಾ ಗರ್ಲ್ಸ್ ಹೈಸ್ಕೂಲ್‌ನ ಸಭಾಗೃಹದಲ್ಲಿ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಅಂತರ್‌ಶಾಲಾ ಪ್ರತಿಭಾ ಸ್ಪರ್ಧೆ ಯಲ್ಲಿ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಮಂಜುನಾಥ ವಿದ್ಯಾಲಯ ಮುಡಿಗೇರಿಸಿಕೊಂಡರೆ, ದ್ವಿತೀಯ ಪ್ರಶಸ್ತಿ ಯನ್ನು ಬಿಲ್ಲವರ ಅಸೋಸಿ ಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಶಾಲೆ ಸಾಂತಾಕ್ರೂಜ್ ತನ್ನದಾಗಿಸಿಕೊಂಡಿದೆ.
ಭಾಷಣ ಸ್ಪರ್ಧೆಯಲ್ಲಿ ಮಂಜುನಾಥ ವಿದ್ಯಾಲಯದ ಅನ್ವಿತಾ ಎಂ. ಎಸ್. ಪ್ರಥಮ, ಗುರುನಾರಾಯಣ ರಾತ್ರಿಶಾಲೆಯ ಐಶ್ವರ್ಯಾ ಆರ್. ಪೂಜಾರಿ ದ್ವಿತೀಯ, ಮಂಜುನಾಥ ವಿದ್ಯಾಲಯದ ಧನುಶ್ ಪೂಜಾರಿ ಮತ್ತು ಕನ್ನಡ ಭವನ ಶಾಲೆಯ ಸುಮಾ ಗೌಡ ತೃತೀಯ ಹಾಗೂ ಕನ್ನಡ ಭವನದ ರಂಜಿತಾ ಗೌಡ ಅವರು ಸಮಾಧಾನಕರ ಬಹುಮಾನವನ್ನು ಪಡೆದರು.
ಭಾವಗೀತೆ ಸ್ಪರ್ಧೆಯಲ್ಲಿ ಮಂಜುನಾಥ ವಿದ್ಯಾಲಯದ ಚೈತನ್ಯ ಪಾಟೀಲ್ ಪ್ರಥಮ, ಕನ್ನಡ ಭವನ ಶಾಲೆಯ ಸೋನಿ ಮನಿಕೇರಿ ದ್ವಿತೀಯ, ಮುಲುಂಡ್ ವಿಪಿಎಂ ಶಾಲೆಯ ಪೂಜಾ ಜಾಧವ್ ತೃತೀಯ ಹಾಗೂ ಡಾ| ಅಂಬೇಡ್ಕರ್ ಶಾಲೆಯ ಪ್ರಿಯಾಂಕಾ ಜಯಪ್ಪ ಅವರು ಸಮಾಧಾನಕರ ಬಹುಮಾನ ಗಳಿಸಿದರು.
ಸಮೂಹ ಗೀತೆ ಸ್ಪರ್ಧೆಯಲ್ಲಿ ಗುರುನಾರಾ ಯಣ ರಾತ್ರಿಶಾಲೆಯ ಸರಸ್ವತಿ ಬಿ. ಗುತ್ತೆದಾರ್ ಮತ್ತು ತಂಡದವರು ಪ್ರಥಮ, ಮುಲುಂಡ್ ವಿಪಿಎಂ ಶಾಲೆಯ ಪವಿತ್ರಾ ಆಚಾರ್ಯ ಮತ್ತು ತಂಡ ದ್ವಿತೀಯ, ಮಂಜುನಾಥ ವಿದ್ಯಾಲಯದ ಚೈತನ್ಯ ಪಾಟೀಲ್ ಮತ್ತು ತಂಡದವರು ತೃತೀಯ ಹಾಗೂ ಚೆಂಬೂರು ಕರ್ನಾಟಕ ಸಂಸ್ಥೆಯ ಪ್ರಿಯಾಂಕಾ ಗೌಡ ಮತ್ತು ತಂಡದವರು ಸಮಾಧಾನಕರ ಬಹುಮಾನ ಗಳಿಸಿದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಚೆಂಬೂರು ಕರ್ನಾಟಕ ಶಾಲೆಯ ಅಭಿಷೇಕ್ ಮತ್ತು ಸೋನಾಲಿ ತಂಡ ಪ್ರಥಮ, ವಿಪಿಎಂ ಶಾಲೆಯ ಪ್ರೀತಿ ಮತ್ತು ಮನು ತಂಡ ದ್ವಿತೀಯ ಹಾಗೂ ಮಂಜುನಾಥ ವಿದ್ಯಾಲಯದ ಧನುಶ್ ಮತ್ತು ಅನುಷಾ ತಂಡ ತೃತೀಯ ಬಹುಮಾನಕ್ಕೆ ಭಾಜನರಾದರು. ಹರೀಶ್ ಶೆಟ್ಟಿ ಮೆಮೋರಿಯಲ್ ಶೀಲ್ಡ್‌ನ್ನುಮಂಜುನಾಥ ವಿದ್ಯಾಲಯ ತನ್ನದಾಗಿಸಿಕೊಂಡಿತು.
ಅಂತಿಮವಾಗಿ ಶ್ರೀಮತಿ ಸುಶೀಲಾ ಎಂ. ಶೆಟ್ಟಿ ಸ್ಮಾರಕ ಸಮಗ್ರ ಪ್ರಶಸ್ತಿಯನ್ನು ಮಂಜುನಾಥ ವಿದ್ಯಾಲಯ ಡೊಂಬಿವಲಿ ಪಡೆದರೆ, ಗುರುನಾರಾಯಣ ರಾತ್ರಿಶಾಲೆ ದ್ವಿತೀಯ ಪ್ರಶಸ್ತಿಗೆ ಭಾಜನವಾಯಿತು. ಪ್ರತಿಭಾ ಸ್ಪರ್ಧೆಯ ತೀರ್ಪುಗಾರರಾಗಿ ಶಾರದಾ ವಿಜಾಪೂರೆ, ಹೇಮಾ ಹೆಗಡೆ, ಚಂದ್ರಾ ಎನ್. ನಾಯ್ಕ ಅವರು ಸಹಕರಿಸಿದರು. ವಿಜೇತ ತಂಡಗಳಿಗೆ ಗಣ್ಯರು ಪ್ರಶಸ್ತಿಯನ್ನು ಪ್ರದಾನಿಸಿ ಶುಭಹಾರೈಸಿದರು.
ಉದ್ಯಮಿ, ಸಮಾಜ ಸೇವಕ ನಲ್ಯಗುತ್ತು ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹರೀಶ್ ಎಸ್. ಪೂಜಾರಿ, ಸಂಘದ ಅಧ್ಯಕ್ಷ ರಮೇಶ್ ಎ. ಶೆಟ್ಟಿ, ಯಂಗ್‌ಮೆನ್ಸ್ ರಾತ್ರಿಶಾಲೆ ಹಾಗೂ ಜನತಾ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯದರ್ಶಿ, ನಿವೃತ್ತ ಶಿಕ್ಷಕ ಸುಂದರ ಮೊಲಿ, ಗೌರವ ಪ್ರಧಾನ ಕಾರ್ಯದರ್ಶಿ ಬಾಬು ಕೆ. ಮೊಗವೀರ, ಕೋಶಾಧಿಕಾರಿ ಚಂದ್ರ ಎನ್. ನಾಯ್ಕ, ಸಂಘಟನ ಕಾರ್ಯದರ್ಶಿ ಸಂತೋಷ್ ಪಿ. ಶೆಟ್ಟಿ ಉಪಸ್ಥಿತರಿದ್ದರು. ಸಂಘಟನಾ ಜತೆ ಕಾರ್ಯದರ್ಶಿ ಸುರೇಂದ್ರ ಆರ್. ನಾಯ್ಕ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯ ಸಂತೋಷ್ ಬಿ. ಪುತ್ರನ್ ಅವರು ಉಪಸ್ಥಿತರಿದ್ದರು.
ತಾರಾನಾಥ ಎಸ್. ಅಮೀನ್, ರಾಜು ಆರ್. ಸುವರ್ಣ, ಉಮೇಶ್ ಡಿ. ಸುವರ್ಣ, ಸನತ್ ಕುಮಾರ್ ಜೈನ್, ಸದಾಶಿವ ಶ್ರೀಯಾನ್, ಎಲ್. ಆರ್. ಮೂಲ್ಯ, ಉಮೇಶ್ ಡಿ. ಸುವರ್ಣ, ಆನಂದ ಕೆ. ಪೂಜಾರಿ, ಸುಕುಮಾರ್ ಎನ್. ಶೆಟ್ಟಿ, ಜಯಕರ ಟಿ. ಶೆಟ್ಟಿ ಪಡುಕುಡೂರು, ರಮೇಶ್ ಎ. ಶೆಟ್ಟಿ, ರಾಜು ಆರ್. ಸುವರ್ಣ, ಸಂದೀಪ್ ಕೋಟ್ಯಾನ್ ಅವರು ಸಹಕರಿಸಿದರು.
ವಸಂತ ಎನ್. ಸುವರ್ಣ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಬಾಬು ಕೆ. ಮೊಗವೀರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.