‘ವಿದ್ಯಾರ್ಥಿಗಳ ತಿದ್ದಿ, ಭವಿಷ್ಯ ರೂಪಿಸುವ ಕಾರ್ಯ ಮುಖ್ಯ’
Team Udayavani, Dec 9, 2017, 5:19 PM IST
ನೆಹರೂನಗರ: ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ತಿದ್ದಿ ತೀಡಿ, ಅವರ ಭವಿಷ್ಯ ರೂಪಿಸುವ ಕಾರ್ಯ ಮಹತ್ವದಾಗಿದೆ. ಆ ನಿಟ್ಟಿನಲ್ಲಿ ಪ್ರಗತಿ ಸ್ಟಡಿ ಸೆಂಟರ್‌ನ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರ್ತಿಕಜೆ ಗಣಪತಿ ಭಟ್ ಹೇಳಿದರು.
ಸುದಾನ ವಸತಿಯುತ ಶಾಲಾ ಆವರಣದಲ್ಲಿ ಪ್ರಗತಿ ಸ್ಟಡಿ ಸೆಂಟರ್ ದಶಮಾನೋತ್ಸವ ಸಮಾರಂಭ ‘ದಶ ಪ್ರಣತಿ’ಯ ಸಾಂಸ್ಕೃತಿಕ ಕಾರ್ಯಕ್ರಮ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ಮಕ್ಕಳ ಭವಿಷ್ಯದಲ್ಲಿ ಆಶಾಕಿರಣವಾಗಿ ಮೂಡಿ ಬಂದ ಸಂಸ್ಥೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದಿದೆ.
ಶಿಕ್ಷಕರು, ಸಿಬಂದಿ, ಹೆತ್ತವರ ಪ್ರಯತ್ನದಿಂದ ದಶ ವರುಷಗಳನ್ನು ಕಂಡಿದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಉಪನ್ಯಾಸಕ ಎನ್.ಕೆ. ರಾಮಚಂದ್ರ ಭಟ್ ಮಾತನಾಡಿ, ಮ್ಯಾರಥಾನ್‌ನಂತೆ ಮುಂದೆ ಸಾಗುತ್ತಿರುವ ಪ್ರಗತಿ ಸಂಸ್ಥೆ
ಗುರುಕುಲ ಪದ್ಧತಿ ಶಿಕ್ಷಣಕ್ಕೆ ಸಮಾನ. ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಂಚಾಲಕ ಗೋಕುಲ್‌ನಾಥ್ ಅವರ ಪ್ರಯತ್ನ
ಇತರರಿಗೆ ಮಾದರಿ ಎಂದರು.
ಆಶಾಕಿರಣ
ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕ ರಘುರಾಜ್ ಉಬರಡ್ಕ ಮಾತನಾಡಿ, ಗಾಳಿಪಟ ತನ್ನ
ಸೂತ್ರ ನೂಲಿನಿಂದ ಹೇಗೆ ಸಮತೋಲನಕ್ಕೆ ಬರುತ್ತದೋ ಹಾಗೇ ಕಲಿಕೆಯಲ್ಲಿ ಹಿಂದುಳಿದು ದಿಕ್ಕು ತಪ್ಪಿ ಹೋಗುತ್ತಿರುವ ವಿದ್ಯಾರ್ಥಿಗಳ ಬಾಳಿನಲ್ಲಿ ಆಶಾ ಕಿರಣವಾಗಿ ಪ್ರಗತಿ ಸ್ಟಡಿ ಸೆಂಟರ್ ಕೆಲಸ ಮಾಡುತ್ತಿದ್ದು, ಪ್ರಸ್ತುತ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಬೆಳೆದಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸವಣೂರು ಸ. ಪ.ಪೂ. ಕಾಲೇಜು ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ,
ಕಲಿಕೆಯಲ್ಲಿ ಹಿಂದುಳಿದವರಿಗೆ ಜ್ಞಾನವನ್ನು ಒದಗಿಸುವ ಕಾರ್ಯ ಮಾಡುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನ್ನು ಧರ್ಮವೇ
ಇಂದು ರಕ್ಷಿಸಿದೆ. ಕೇವಲ ದುಡ್ಡಿನ ಹಿಂದೆ ಹೋಗದೆ ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಕೆಲಸ ಕಾರ್ಯಗಳನ್ನು ಮಾಡುತ್ತಾ
ಮತ್ತೂಂದು ಮೈಲಿಗಲ್ಲು ಸ್ಥಾಪಿಸುವತ್ತ ಸಂಸ್ಥೆ ಮುನ್ನುಗ್ಗುತ್ತಿದೆ ಎಂದರು.
ಚೆನ್ನೈ ಕೆ.ಜೆ. ಆಸ್ಪತ್ರೆಯ ಡಾ| ಕೆ. ಮೋಹನ್‌ದಾಸ್, ಚೆನ್ನೈ ಲೇಡಿ ಅಂಡಾಳ್ ಮೆಟ್ರಿಕ್ಯುಲೇಷನ್ ಸ್ಕೂಲ್‌ನ ಆಡಳಿತಾ
ಧಿಕಾರಿ ಹಿಜಾ ಮೋಹನ್‌ದಾಸ್, ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ಸದಸ್ಯ ಕೊಂಕೋಡಿ ಸುಬ್ರಾಯ ಭಟ್, ನಗರಸಭಾ ಸದಸ್ಯ ರಾಜೇಶ್ ಬನ್ನೂರು, ಬಿಜೆಪಿ ಮುಖಂಡ ಗೋಪಾಲಕೃಷ್ಣ ಹೇರಳೆ, ಉದ್ಯಮಿ ಅಕ್ಷಯ್ ಕುಮಾರ್, ಕಸ್ತೂರಬಾ ಮೆಡಿಕಲ್ ಕಾಲೇಜು ಉಪನ್ಯಾಸಕಿ ಮೇಘಾ ಗೋಕುಲ್ ಶುಭ ಹಾರೈಸಿದರು.
ಜಯಶ್ರೀ, ಸಾವಿತ್ರಿ ರಾಜಗೋಪಾಲ್, ಹೇಮಾ ಭಾಸ್ಕರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ಮುಸ್ತಫಾ, ಕಾರ್ಯದರ್ಶಿ ಸ್ಫೂರ್ತಿ ಗೌಡ, ಜತೆ ಕಾರ್ಯದರ್ಶಿ ಎಲ್.ಡಿ. ಡಯಾನ ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ವಿ.ಪಿ. ಗೋಕುಲ್ ನಾಥ್ ಸ್ವಾಗತಿಸಿದರು. ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ವಂದಿಸಿದರು. ಮಮತಾ ನಿರೂಪಿಸಿದರು.
ಇದೇ ಸಂದರ್ಭ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ಸ್ಪರ್ಧಾಕಾರ್ಯಕ್ರಮ ಹಾಗೂ ಕ್ರೀಡೋತ್ಸ ದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮಕಳಲ್ಕಿ ಆತ್ಮ ವಿಶ್ವಾಸ ತುಂಬಿ
ಶಿವಮೊಗ್ಗ ಡಯಟ್‌ನ ಹಿರಿಯ ಉಪನ್ಯಾಸಕ ಜಿ.ಎಸ್. ಶಶಿಧರ್ ಮಾತನಾಡಿ, ಯಾವುದೇ ಸಂಸ್ಥೆಯನ್ನು ಬೆಳೆಸಲು ಅಗಾಧವಾದ ಸಹನೆ ಇರಬೇಕಾದ್ದು ಮುಖ್ಯ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ವಿದ್ಯೆಯನ್ನು ಧಾರೆ ಎರೆದು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿಯ ಪ್ರಗತಿ ಸ್ಟಡಿ ಸೆಂಟರ್‌ನ ಪ್ರಯತ್ನ ಮೆಚ್ಚುವಂತದ್ದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.