ಮುಂದಿನ ಬಾರಿಯೂ ನಮ್ಮದೇ ಸರ್ಕಾರ: ಆಂಜನೇಯ
Team Udayavani, Dec 10, 2017, 7:20 AM IST
ಸಿರಿಗೆರೆ (ಚಿತ್ರದುರ್ಗ): ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ನಂತರ ಸರ್ವ ಸಮುದಾಯಗಳ ಏಳ್ಗೆಗೆ ಶ್ರಮಿಸಿದ ಏಕೈಕ ಸರ್ಕಾರವೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.
ಸಮೀಪದ ಪಳಿಕೆಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಗ್ರಾಮ ವಾಸ್ತವ್ಯ ಮಾಡಿದ್ದ ಅವರು, ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಹಸಿದವರಿಗೆ ಅನ್ನ, ನೆರಳಿಲ್ಲದವರಿಗೆ ಸೂರು ಮೊದಲಾದ ಜನಪ್ರಿಯ ಯೋಜನೆಗಳನ್ನು ಸರಕಾರ ಜಾರಿಗೊಳಿಸಿದೆ. ಹಾಗಾಗಿ, ಮುಂದೆಯೂ ನಮ್ಮದೇ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಗಂಗಾಕಲ್ಯಾಣ ಹಾಗೂ ರೈತ ಸಮುದಾಯದ ಏಳ್ಗೆಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಇಷ್ಟೊಂದು ಕೆಲಸ ಈ ಹಿಂದಿನ ಯಾವ ಸರ್ಕಾರದ ಅವ ಧಿಯಲ್ಲೂ ಆಗಿಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಉದ್ಭವಿಸದು. ಅಲ್ಲದೆ, ಯಾರೊಂದಿಗೂ ಕೈ ಜೋಡಿಸುವ ಪರಿಸ್ಥಿತಿ ಕಾಂಗ್ರೆಸ್ಗೆ ಬರುವುದಿಲ್ಲ ಎಂದರು.
ಹಿಂದೆ ಸಮ್ಮಿಶ್ರ ಸರ್ಕಾರಗಳು ಆಡಳಿತ ನಡೆಸಿದಾಗ ಉಂಟಾಗಿದ್ದ ಗೊಂದಲ, ಸಮಸ್ಯೆಯನ್ನು ಮತದಾರರು ಗಮನಿಸಬೇಕು. ಒಂದೇ ಪಕ್ಷಕ್ಕೆ ಬಹುಮತ ನೀಡಬೇಕು. ಒಂದು ಪಕ್ಷದ ಆಡಳಿತದಿಂದ ಮಾತ್ರ ಸುಭದ್ರ ಸರ್ಕಾರ ಸಾಧ್ಯ ಎಂದು ಪ್ರತಿಪಾದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.