ಅನುಷ್ಕಾ-ವಿರಾಟ್ ಜಾಹೀರಾತಿಗೆ ಭಾರೀ ಬೇಡಿಕೆ !
Team Udayavani, Dec 11, 2017, 6:00 AM IST
ಮುಂಬಯಿ: ಬಾಲಿವುಡ್‌ನಲ್ಲಿ ತಾರಾ ದಂಪತಿಗಳ ಬಂಧ ಗಟ್ಟಿಯಾದಷ್ಟು ಬ್ರ್ಯಾಂಡ್ ಮೌಲ್ಯವೂ ಏರುತ್ತದೆ. ಕಾಲಕಾಲಕ್ಕೆ ಬಾಲಿವುಡ್‌ನಲ್ಲಿ ದಾಂಪತ್ಯಕ್ಕೆ ರೋಲ್ ಮಾಡೆಲ್ ಆದ ತಾರೆಯರು ಬದಲಾಗುತ್ತಾರೆ. ಅಮಿತಾಭ್ ಬಚ್ಚನ್-ಜಯಾ ಬಚ್ಚನ್, ಅಜಯ್ ದೇವಗನ್ ಮತ್ತು ಕಾಜೋಲ್, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಸದ್ಯ ತಾರಾ ಜೋಡಿಗಳಾಗಿದ್ದು, ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅತ್ಯಂತ ಚರ್ಚೆಯಲ್ಲಿರುವ ಜೋಡಿ ಎಂದರೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಇನ್ನೇನು ಕೆಲವೇ ದಿನಗಳಲ್ಲಿ ವಿವಾಹ ವಾಗಲಿರುವ ಇವರು ಈಗಾಗಲೇ ಉಡುಪು ಬ್ರ್ಯಾಂಡ್ “ಮಾನ್ಯವರ್’ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಾಲ್ಕು ವರ್ಷಗಳ ಹಿಂದೆ ಇವರ ಮಧ್ಯೆ ಪ್ರೇಮಾಂಕುರವಾಗುತ್ತಿದ್ದಂತೆ ಹಿಂದೂಸ್ಥಾನ್ ಯೂನಿಲಿವರ್‌ನ ಕ್ಲಿಯರ್ ಶಾಂಪೂ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
ಒಂದೊಂದು ಜೋಡಿಯೂ ಪ್ರತಿ ಬ್ರ್ಯಾಂಡ್‌ಗೆ 4ರಿಂದ 8 ಕೋಟಿ ರೂ.ವರೆಗೂ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ಅವರ ಜನಪ್ರಿಯತೆಯೇ ಅಳತೆಗೋಲು. ಈ ಬಾರಿ ಅನುಷ್ಕಾ ಮತ್ತು ವಿರಾಟ್ ಅತ್ಯಂತ ಜನಪ್ರಿಯ ವಾಗಿರುವುದರಿಂದ ಹಾಗೂ ಯುವಕರನ್ನು ಸೆಳೆಯುವ ಶಕ್ತಿ ಹೆಚ್ಚು ಇರುವುದರಿಂದ ಈ ಸಂಭಾವನೆಯ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಇವರ ಸಂಭಾವನೆ 10 -12 ಕೋಟಿ ರೂ.ಗೆ ತಲುಪುವ ಸಾಧ್ಯತೆಯಿದೆ. ಅಲ್ಲದೆ ಇವರು ಎರಡು ಕ್ಷೇತ್ರದ ಅಭಿಮಾನಿಗಳನ್ನು ಹೊಂದಿದ್ದಾರೆ. ವಿರಾಟ್ ಕ್ರಿಕೆಟ್ ಮೆಚ್ಚುವ ಯುವಕರನ್ನು ಸೆಳೆಯಲಿದ್ದರೆ, ಅನುಷ್ಕಾ ಸಿನೆಮಾ ಪ್ರಿಯ ರನ್ನು ಸೆಳೆಯಲಿದ್ದಾರೆ. ಹೀಗಾಗಿ ಅವರ ಜಾಹೀರಾತನ್ನು ನೋಡುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಮಾನ್ಯವರ್‌ನ ದೀಪಾವಳಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಇವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ರ್ಯಾಂಡ್‌ಗಳನ್ನೂ ಪ್ರಚಾರ ಮಾಡಬಹುದು. ವಿವಾಹವಾಗುತ್ತಿದ್ದಂತೆಯೇ ಬ್ರ್ಯಾಂಡ್‌ಗಳು ಇವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಹಾತೊರೆಯಲಿವೆ.
ಸದ್ಯ ಇಬ್ಬರೂ ಪ್ರತ್ಯೇಕವಾಗಿ ಹಲವು ಬ್ರ್ಯಾಂಡ್‌ಗಳಿಗೆ ರಾಯಭಾರಿಗಳಾಗಿದ್ದಾರೆ. ಪುಮಾ, ಎಂಆರ್‌ಎಫ್, ಆಡಿ, ಕಾಲ್ಗೇಟ್ ಸಹಿತ ಹಲವು ಬ್ರ್ಯಾಂಡ್‌ಗಳಿಗೆ ಕೊಹ್ಲಿ ಜಾಹೀರಾತಿನಲ್ಲಿ ಭಾಗವಹಿಸಿ ದ್ದಾರೆ. ಅನುಷ್ಕಾ ಕೂಡ ಹಲವು ಬ್ರ್ಯಾಂಡ್‌ಗಳ ಪ್ರಚಾರ ರಾಯಭಾರಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.