ಸೌತೆಕಾಯಿಂದ ಸಿರಿ ಬಂತು !


Team Udayavani, Dec 11, 2017, 11:29 AM IST

11-17.jpg

ನಲವತ್ತೇ ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುವ ಮಿಡಿ ಸೌತೆಯಿಂದ ಲಕ್ಷಾಂತರ ರೂಪಾಯಿ ಲಾಭ ಸಿಗುತ್ತದೆ ಅನ್ನುತ್ತಾರೆ ಯಲ್ಪಟ್ಟಿ ಧನಪಾಲ. 

 ಬಾಗಲಕೋಟ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಹಳಿಂಗಳಿಯ ಧನಪಾಲ ಯಲ್ಲಟ್ಟಿ ಅವರ ವಯಸ್ಸು 54 ವರ್ಷ.  ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ. ಆದರೆ ತಾವು ಯಾವುದೇ ಆಧುನಿಕ ರೈತನಿಗೆ ಕಡಿಮೆ ಇಲ್ಲ ಎಂಬುದನ್ನು ಹೊಸ ಹೊಸ ಕೃಷಿ ಪ್ರಯೋಗಗಳ ಮೂಲಕ ತೋರಿಸಿಕೊಟ್ಟಿದ್ದಾರೆ. 

    ಇವರಿಗಿರುವ 20 ಗುಂಟೆ ಜಾಗೆಯಲ್ಲಿ ನೆಟ್‌ಹೌಸ್‌ ನಿರ್ಮಿಸಿಕೊಂಡು ಮಿಡಿ ಸೌತೆಕಾಯಿ ಬೆಳೆದು, ಕಡಿಮೆ ಅವಧಿಯಲ್ಲಿ ನಿಯಮಿತವಾಗಿ ಲಕ್ಷಾಂತರ ರೂ ಲಾಭ ಮಾಡಿಕೊಳ್ಳುತ್ತಿದ್ದಾರೆ.

ಮೊದಲು ಭೂಮಿಯನ್ನು ಚೆನ್ನಾಗಿ ಹದ ಮಾಡಿಕೊಂಡು ಸಾಲಿನಿಂದ ಸಾಲಿಗೆ 5 ಅಡಿ, ಕುಣಿಯಿಂದ ಕುಣಿಗೆ 2 ಅಡಿಯಂತೆ ಜಿಗ್‌ಜಾಗ್‌ ಪದ್ಧತಿಯಲ್ಲಿ 2000 ಸಸಿಗಳನ್ನು ನಾಟಿ ಮಾಡಿದ್ದಾರೆ. ನಾಟಿ ಮಾಡುವ ಪೂರ್ವದಲ್ಲಿ ಬೆಡ್‌ ನಿರ್ಮಾಣಕ್ಕೂ ಮೊದಲು ಡಿಎಪಿ 50ಕೆಜಿ, ಪೋಟ್ಯಾಶ್‌ 50 ಕೆ.ಜಿ, ಬೇವಿನ ಹಿಂಡಿ 100ಕೆಜಿ, ಗ್ರೀನ್‌ ಕ್ರಾಪ್‌, 10 ಕೆಜಿ ಅಮಿನೋ ಜಿ ಪ್ಲಸ್‌ 10ಕೆಜಿ ಯಷ್ಟು ಹಾಕಿ ಸಸಿ ನಾಟಿ ಮಾಡಿದ್ದಾರೆ. 

ಮಿಡಿ ಸೌತೆಯು ನಾಟಿ ಮಾಡಿದ 25 ದಿನಕ್ಕೆ ಹೂ ಬಿಡುತ್ತದೆ. 30 ದಿನಕ್ಕೆ ಕಾಯಿ ಬಿಡಲು ಪ್ರಾರಂಭ 35ನೇ ದಿನಕ್ಕೆ ಕೊಯ್ಲು ಪ್ರಾರಂಭವಾಗುತ್ತದೆ. ಇದು 2 ತಿಂಗಳ ಬೆಳೆ. ನೆಟ್ಟ 35 ರಿಂದ 40 ದಿನಕ್ಕೆ ಇಳುವರಿ ದೊರೆಯುತ್ತದೆ.  ಪ್ರತಿದಿನಕ್ಕೆ 1 ಕ್ವಿಂಟಾಲ್‌, 40 ರಿಂದ 60ನೇ ದಿನದವರೆಗೆ ಪ್ರತಿ ದಿನಕ್ಕೆ 2 ಕ್ವಿಂಟಾಲ್‌ ಇಳುವರಿ ದೊರೆಯುತ್ತದೆ. ನಾಲ್ಕು ತರಹದ ಮಿಡಿ ಸೌತೆ ದೊರೆಯುತ್ತದೆ.      ಅದರಲ್ಲಿ 1ನೇ ಕ್ವಾಲಟಿ ಮಿಡಿ ಸೌತೆಗೆ ರೂ. 34, 2ನೇ ಕ್ವಾಲಿಟಿಗೆ ರೂ. 2013ನೇ ಕ್ವಾಲಿಟ್ಟಿಗೆ ರೂ. 10 ದೊರೆಯುತ್ತಿದೆ. ಒಟ್ಟು 20 ಗುಂಟೆ ಜಾಗೆಯಲ್ಲಿ 8 ರಿಂದ 10 ಟನ್‌ ಇಳುವರಿಯಿಂದಾಗಿ ಖರ್ಚು ರೂ. 70 ಸಾವಿರ ಆಗಿದೆ. ಇದನ್ನು  ತೆಗೆದು ಅಂದಾಜು ರೂ. 3 ಲಕ್ಷದವರೆಗೆ ಆದಾಯ ಪಡೆಯಬಹುದು ಎನ್ನುತ್ತಾರೆ ಧನಪಾಲ ಯಲ್ಲಟ್ಟಿ.

ಮಾರುಕಟ್ಟೆ 
    ಬೆಂಗಳೂರಿನ ವಿಶಾಲ್‌ ನ್ಯಾಚುರಲ್‌ ಪುಡ್‌ ಪ್ರಾಡಕ್ಟ್ ಇಂಡಿಯಾ ಪ್ರ„. ಲಿ. ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಧನಪಾಲ್‌.  ಅವರೇ ಬಂದು ಮಿಡಿಸೌತೆಯನ್ನು ತೆಗೆದುಕೊಂಡು ಹೋಗುತ್ತಾರೆ. ಇದನ್ನು ಅಮೆರಿಕಾದ ಬಹುತೇಕ ನಗರಗಳಿಗೆ ರಫ್ತು ಮಾಡಲಾಗುತ್ತಿದೆಯಂತೆ.  ಈ ಬೆಳೆ ಸಂಪೂರ್ಣವಾಗಿ ಸಾವಯವವಾಗಿ ಬೆಳೆ ಬೆಳೆದಿದ್ದು ಎನ್ನುತ್ತಾರೆ ಧನಪಾಲ. 
    ಹೆಚ್ಚಿನ ಮಾಹಿತಿಗಾಗಿ ಧನಪಾಲ ಎನ್‌. ಯಲ್ಲಟ್ಟಿ, ಮೊ: 9900030678 ಗೆ ಸಂಪರ್ಕಿಸಬಹುದು. 

ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

courts

Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.