ಟಾಪ್‌ ಗೇರ್‌ : ಕಮಾನ್‌ ನಾರ್ಟಾನ್‌


Team Udayavani, Dec 11, 2017, 12:01 PM IST

11-22.jpg

ವಿಶೇಷ ವಿನ್ಯಾಸದಿಂದಲೇ ಹುಡುಗರ ಮಂಡೆಬಿಸಿ ಮಾಡುವ ನಾರ್ಟಾನ್‌ ಬೈಕ್‌ಗಳ ಭಾರತ ಪ್ರವೇಶ ಈಗಾಗಲೇ ಬೇರೂರಿರುವ ಪ್ರತಿಷ್ಠಿತ ಕಂಪನಿಗಳಿಗೆ ಸಣ್ಣದೊಂದು ಆತಂಕ ಸೃಷ್ಟಿಸಿದ್ದರೆ ಅಚ್ಚರಿಯಲ್ಲ. 2018ರಿಂದಲೇ ಕಿನೆಟಿಕ್‌ ನಾರ್ಟಾನ್‌ ಭಾರತದಲ್ಲಿ ರಸ್ತೆಗಳಿಗೆ ಇಳಿಯಲಿದೆ.

ಮೂರು ದಶಕಗಳ ಹಿಂದೆ ಭಾರತದಲ್ಲಿ ಬೆಸ್ಟ್‌ ಸೆಲ್ಲಿಂಗ್‌ ಸ್ಕೂಟರ್‌ಯಾವುದು ಎಂದು ಕೇಳಿದ್ದರೆ, ಅದಕ್ಕೆ ಉತ್ತರವಾಗಿ ಅಗ್ರ ಪಂಕ್ತಿಯಲ್ಲಿ “ಕಿನೆಟಿಕ್‌ ಹೋಂಡಾ’ ಇದ್ದೇ ಇರುತ್ತಿತ್ತು. ಅಷ್ಟು ಜನಪ್ರಿಯತೆಯನ್ನೂ ಕಂಡುಕೊಂಡಿದ್ದ ಸ್ಕೂಟರ್‌ ಅದಾಗಿತ್ತು. ಆದರೆ ಬದಲಾದ ಜಮಾನದಲ್ಲಿ ಬಹುತೇಕ ದ್ವಿಚಕ್ರ ವಾಹನಗಳ ವಿನ್ಯಾಸಗಳೇ ಬೇರೆಯಾದ ಕಾರಣ ಸಹಜವಾಗಿ “ಕಿನೆಟಿಕ್‌ ಹೋಂಡಾ’ ಗುಜರಿ ಸೇರುತ್ತಿದೆ. ಕಿನೆಟಿಕ್‌ ಎಂಜಿನಿಯರಿಂಗ್‌ ಲಿಮಿಟೆಡ್‌ ಹಾಗೂ ಹೋಂಡಾ ಮೊಟಾರ್ ಜಂಟಿಯಾಗಿ ಪರಿಚಯಿಸಿದ್ದ ಲಘು ಭಾರದ “ಕಿನೆಟಿಕ್‌ ಹೋಂಡಾ’ಗಳು, ಇಂದೂ ಅಲ್ಲಿಲ್ಲೊಂದು ಕಾಣಸಿಗುವುದುಂಟು. 
 
ಆಟೋಮೊಬೈಲ್‌ ಕ್ಷೇತ್ರದ ಪ್ರಮುಖ ಕಂಪನಿಗಳಲ್ಲಿ ಒಂದು ಎನಿಸಿಕೊಂಡಿರುವ ಕಿನೆಟೆಕ್‌ನ ಲಕ್ಸುರಿ ಬೈಕ್‌ಗಳ ತಯಾರಕ ಕಂಪೆನಿಯಿಂದ ಮೋಟೊರಾಯಲ್‌ ಇದೀಗ ಬ್ರಿಟಿಷ್‌ ಆಟೋ ತಯಾರಕ ನಾರ್ಟಾನ್‌ ಜತೆ ಕೈಜೋಡಿಸಿದ್ದು, ಶೀಘ್ರದಲ್ಲಿಯೇ ಭಾರತದ ಮಾರುಕಟ್ಟೆಗೆ ಲಕ್ಸುರಿ ಬೈಕ್‌ಗಳನ್ನು  ಪರಿಚಯಿಸಲು ಮುಂದಾಗಿದೆ. ಈಗಾಗಲೇ ಜಾಯಿಂಟ್‌ ವೆಂಚರ್‌ಗೂ ಚಾಲನೆ ನೀಡಲಾಗಿದ್ದು, ನಾರ್ಟಾನ್‌ ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಈಗಾಗಲೇ ಬ್ರಿಟಿಷ್‌ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿರುವ ನಾರ್ಟಾನ್‌ ಬೈಕ್‌ಗಳು ಇನ್ನು ಮುಂದೆ ಭಾರತದ ನೆಲದಲ್ಲಿಯೇ ತಯಾರಾಗಿ ರಸ್ತೆಗಿಳಿಯಲಿವೆ. ವಿ4 ಆರ್‌ಆರ್‌, ಡಾಮಿನೇಟರ್‌ ಹಾಗೂ ಕಮಾಂಡೋ ಸರಣಿಯ ಬೈಕ್‌ಗಳು ಬ್ರಿಟಿಷ್‌ ರಸ್ತೆಗಳಲ್ಲಿ ಪಾಪ್ಯುಲಾರಿಟಿ ಪಡೆದುಕೊಂಡಿರುವಂತೆ ಭಾರತದಲ್ಲಿಯೂ ತನ್ನದೇ ಬ್ರಾಂಡ್‌ ಕ್ರಿಯೇಟ್‌ ಮಾಡಿಕೊಳ್ಳುವ ಬಹು ನಿರೀಕ್ಷೆಯಲ್ಲಿದೆ. ತನ್ನ ಬ್ರಾಂಡ್‌ಗಳ ಪೈಕಿ ವಿಶ್ವಮನ್ನಣೆಗಳಿಸಿರುವ ಬೈಕ್‌ಗಳನ್ನೇ ಭಾರತದಲ್ಲಿ ಪರಿಚಯಿಸುವ ಉದ್ದೇಶ ನಾರ್ಟಾನ್‌ ಕಂಪನಿಯದ್ದಾಗಿದೆ.

ಕಿನೆಟಿಕ್‌ ನಾರ್ಟಾನ್‌ ಒಪ್ಪಂದ
ಮೊನ್ನೆ ಮೊನ್ನೆಯಷ್ಟೇ “ಕಿನೆಟಿಕ್‌ ನಾರ್ಟಾನ್‌’ ಬ್ರಾಂಡ್‌ ನಿರ್ಮಾಣಕ್ಕೆ ಕಿನೆಟಿಕ್‌ ಎಂಜಿನಿಯರಿಂಗ್‌ ವ್ಯವಸ್ಥಾಪಕ ನಿರ್ದೇಶಕ ಅಜಿಂಕ್ಯಾ ಫಿರೋಡಿಯಾ ಹಾಗೂ ನಾರ್ಟಾನ್‌ ಮೋಟಾರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟುವರ್ಟ್‌ ಗಾರ್ನೇರ್‌ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಒಪ್ಪಂದದ ಪ್ರಕಾರ 51% ಕಿನೆಟಿಕ್‌, 49% ನಾರ್ಟಾನ್‌ ಪಾಲುದಾರಿಕೆಯನ್ನು ಹೊಂದಿದೆ.

ಲಾಗಿನ್‌ ಟು ಇಂಡಿಯಾ
ಭಾರತದಲ್ಲಿಯೇ ಉತ್ಪಾದನೆಗೆ ವೇದಿಕೆ ಸೃಷ್ಟಿಸಿಕೊಂಡು ಆಗಮಿಸುತ್ತಿರುವ ಕಿನೆಟಿಕ್‌ ನಾರ್ಟಾನ್‌ ಆರಂಭದಲ್ಲಿ ತನ್ನ ಟಾಪ್‌ ಬ್ರಾಂಡ್‌ ಬೈಕ್‌ಗಳಾದ ಕಮಾಂಡೋ ಸರಣಿಯ ಬೈಕ್‌ಗಳನ್ನು ಹಾಗೂ ವಿನೂತನ ವಿನ್ಯಾಸದ ಡಾಮಿನೇಟರ್‌ ಅನ್ನು ಪರಿಚಯಿಸಲಿದೆ. ವಿಶೇಷ ವಿನ್ಯಾಸದಿಂದಲೇ ಹುಡುಗರ ಮಂಡೆಬಿಸಿ ಮಾಡುವ ನಾರ್ಟಾನ್‌ ಬೈಕ್‌ಗಳ ಭಾರತ ಪ್ರವೇಶ ಈಗಾಗಲೇ ಬೇರೂರಿರುವ ಪ್ರತಿಷ್ಠಿತ ಕಂಪನಿಗಳಿಗೆ ಸಣ್ಣದೊಂದು ಆತಂಕ ಸೃಷ್ಟಿಸಿದ್ದರೆ ಅಚ್ಚರಿಯಲ್ಲ. 2018ರಿಂದಲೇ ಕಿನೆಟಿಕ್‌ ನಾರ್ಟಾನ್‌ ಭಾರತದಲ್ಲಿ ರಸ್ತೆಗಳಿಗೆ ಇಳಿಯಲಿದೆ.

ಸೂಪರ್‌ ಡೂಪರ್‌ ಬೈಕ್‌ಗಳಿವು
ಹೌದು, ನಾರ್ಟಾನ್‌ ಕಮಾಂಡೋ ಹಾಗೂ ಡಾಮಿನೇಟರ್‌, ಈ ಎರಡೂ ಬೈಕ್‌ಗಳು ಕ್ರೇಜಿಗಳ ಮನಗೆಲ್ಲುವ ಸ್ಟಾರ್‌ ಬೈಕ್‌ಗಳು. ಆ ಕಾಲದಲ್ಲೇ 850ಸಿಸಿಯೊಂದಿಗೆ ರಸ್ತೆಗಿಳಿದಿದ್ದ ಕಮಾಂಡೋ ಉತ್ಪಾದನೆ, ಆರಂಭವಾಗಿ 10 ವರ್ಷದಲ್ಲೇ ವಿಶ್ವ ಖ್ಯಾತಿ ಪಡೆದುಕೊಂಡಿತ್ತು. ಈಗ ಹೊಸ ವಿನ್ಯಾಸ, 961ಸಿಸಿ ಟ್ವಿನ್‌ ಎಂಜಿನ್‌ 79ಬಿಎಚ್‌ಪಿ ಹಾಗೂ 90ಎನ್‌ಎಂ ಟಾರ್ಕ್‌ ಸಾಮರ್ಥ್ಯದೊಂದಿಗೆ ಕಮಾಂಡೋ ನ್ಪೋರ್ಟ್ಸ್ ಹಾಗೂ ಕೆಫೆ ರೇಸರ್‌ ಬರಲಿದೆ. ಡಾಮಿನೇಟರ್‌ ಕೂಡ ಇದೇ ಸಾಮರ್ಥ್ಯದೊಂದಿಗೆ ವಿಭಿನ್ನ ವಿನ್ಯಾಸದಲ್ಲಿ ಸ್ಪರ್ಧೆಗಿಳಿಯಲಿದೆ.

1,200 2,000
ಬೈಕ್‌ಗಳನ್ನು ಒಂದು  ವರ್ಷ ಅವಧಿಯಲ್ಲಿ ಉತ್ಪಾದಿಸುವುದೇ ಮೊದಲ ಟಾರ್ಗೆಟ್‌

4,000 5,000
ಬೈಕ್‌ಗಳನ್ನು ಮುಂದಿನ ಮೂರು ವರ್ಷದ ಬಳಿಕ ಪ್ರತಿವರ್ಷ ಉತ್ಪಾದಿಸುವ ಗುರಿ

 18 19 ಲಕ್ಷ ರೂ.
ಲಕ್ಸುರಿ ವಿನ್ಯಾಸದಲ್ಲಿ ಭಾರತಕ್ಕೆ ಬರಲಿರುವ ನಾರ್ಟಾನ್‌ ಬೈಕ್‌ಗಳ ಅಂದಾಜು ಬೆಲೆ 

ಅಗ್ನಿಹೋತ್ರಿ

ಟಾಪ್ ನ್ಯೂಸ್

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

2(1

Sullia: ಜಾಕ್‌ವೆಲ್‌ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್‌

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

1(1

Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.