ಚಾವಡಿ ಪಟ್ಟಾಂಗ
Team Udayavani, Dec 11, 2017, 2:40 PM IST
ಪುಂಜಾಲಕಟ್ಟೆ: ತುಳುವರ ಬೆನ್ನೆಲುಬಾಗಿರುವ ಕೃಷಿ ಸಂಸ್ಕೃತಿ ಉಳಿಯದಿದ್ದರೆ ಉಳಿಗಾಲವಿಲ್ಲ. ತುಳು ಸಂಸ್ಕೃತಿಯ ಪ್ರದರ್ಶನ ಮತ್ತು ಅಧ್ಯಯನಕ್ಕೆ ರಾಷ್ಟ್ರೀಯ ಮಟ್ಟದ ಸಂಶೋಧನ ಕೇಂದ್ರ ಬೇಕು. ತುಳು ಭಾಷೆಯ ಉಳಿವಿಗೆ 8ನೇ ಪರಿಚ್ಛೇದಕ್ಕೆ ಸೇರಬೇಕು. ಸಂಧಿ ಪಾಡªನಗಳ ಅಧ್ಯಯನ ನಡೆಯಬೇಕು. ತುಳು ಯುವಕರ ಉದ್ಯೋಗ ಸಮಸ್ಯೆ ನೀಗಬೇಕು. ತುಳು ಭಾಷೆಯ ಸ್ಪಷ್ಟ ಪರಿಚಯ ಮಕ್ಕಳಿಗೆ ಕೊಡಬೇಕು ಎಂಬಿತ್ಯಾದಿ ಗಂಭೀರ ವಿಚಾರಗಳ ಕುರಿತು ಚಿಂತನೆ ನಡೆಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಬಂಟ್ವಾಳ ತಾ| ತುಳು ಸಾಹಿತ್ಯ ಸಮ್ಮೇಳನ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾಮಂದಿರದಲ್ಲಿ ರವಿವಾರ ನಡೆದ ಬಂಟ್ವಾಳ ತಾ| ಮಟ್ಟದ ಪ್ರಥಮ ತುಳು ಸಾಹಿತ್ಯ ಸಮ್ಮೇಳನದಲ್ಲಿ ತುಳು ಪರಪುದ ಒರಿಪು (ತುಳು ಸಂಸ್ಕೃತಿಯ ಉಳಿವು) ವಿಚಾರಗೋಷ್ಠಿಯ ಚಾವಡಿ ಪಟ್ಟಾಂಗದಲ್ಲಿ ವಿಚಾರಗಳು ಮಂಡನೆಗೊಂಡವು.
ಸಮ್ಮೇಳನಾಧ್ಯಕ್ಷ ಮಲಾರು ಜಯರಾಮ ರೈ ಉಪಸ್ಥಿತರಿದ್ದರು. ಉಡುಪಿ ಸರಕಾರಿ ಪ್ರ. ದ. ಕಾಲೇಜು ಉಪನ್ಯಾಸಕ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಡಾ| ದುಗ್ಗಪ್ಪ ಕಜೆಕಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ಪೀಳಿಗೆಗೆ ತುಳು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಐದನೇ ತರಗತಿಯಿಂದ ತುಳು ಪಠ್ಯದ ಕಲಿಕೆಗೆ ತುಳು ಅಕಾಡೆಮಿ ಅವಕಾಶ ಕಲ್ಪಿಸಿದೆ. ಮಕ್ಕಳಿಗೆ ಸ್ಪಷ್ಟ ತುಳು ಭಾಷೆಯ ಅರಿವು ಮೂಡಿಸಬೇಕಾಗಿದೆ ಎಂದರು.
ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಮಾತನಾಡಿ, ತುಳುನಾಡು ಸಾಮಾಜಿಕ ಸಂಸ್ಕೃತಿ, ಭಾಷಾ ಸಂಸ್ಕೃತಿ, ಧಾರ್ಮಿಕ ಸಂಸ್ಕೃತಿಗಳಲ್ಲಿ ವೈವಿಧ್ಯ ಹೊಂದಿದ್ದರೂ ಭಾಷಾ ಏಕತೆ ಹೊಂದಿದೆ. ಆದರೆ ಮೂಲ ಸಂಸ್ಕೃತಿಯಾದ ಕೃಷಿ ಸಂಸ್ಕೃತಿ ಅಲುಗಾಡುತ್ತಿದೆ. ಇದನ್ನು ಉಳಿಸುವ ಕಾರ್ಯವಾಗಬೇಕು ಎಂದರು.
ಬರಹಗಾರ ಮಹೇಂದ್ರನಾಥ ಸಾಲೆತ್ತೂರು ಮಾತನಾಡಿ, ಕೃಷಿ ನಾಶವಾದರೆ ಅದಕ್ಕೆ ಸಂಬಂಧಿಸಿದ ಅವೆಷ್ಟೋ ಭಾಷಾ ಶಬ್ದಗಳು ನಾಶವಾಗುತ್ತವೆ. ತುಳು ಆಚರಣೆಗಳನ್ನು ಅರಿತು ಆಚರಿಸಬೇಕು ಎಂದರು.
ರಂಗಕರ್ಮಿ ಮಂಜು ವಿಟ್ಲ ಸ್ವಾಗತಿಸಿದರು. ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ವಂದಿಸಿದರು. ರಂಗ ಕಲಾವಿದ ರತ್ನದೇವ್ ಕಾರ್ಯಕ್ರಮ ನಿರೂಪಿಸಿದರು.
ಊರುಗಳ ಹೆಸರು ಬದಲಾವಣೆ..
ಅರಿವು ಯುವ ಸಂವಾದ ಕೇಂದ್ರದ ನಿರ್ದೇಶಕ ನಾದ ಮಣಿನಾಲ್ಕೂರು ಮಾತನಾಡಿ, ಊರುಗಳ ಹೆಸರು ಬದಲಾವಣೆಯಿಂದ ಸಮುದಾಯದ ಬದುಕೇ ನಾಶವಾಗುವ ಆತಂಕವಿದೆ. ಅಭಿವೃದ್ಧಿಯ ಹೆಸರಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಆಗಮನದಿಂದ ನಮ್ಮ ನೆಲ, ಜಲ, ದೈವ-ದೇವಸ್ಥಾನ ನಾಶವಾದರೆ ಸಂಸ್ಕೃತಿಯೂ ನಾಶವಾಗುತ್ತದೆ ಎಂದರು.
ರಾಷ್ಟ್ರ ಮಟ್ಟದ ಸಂಶೋಧನ ಕೇಂದ್ರ ಅಗತ್ಯ
ಪ್ರದರ್ಶನ, ಅಧ್ಯಯನಗಳಿಂದ ತುಳು ಸಂಸ್ಕೃತಿಯ ಉಳಿವು ಸಾಧ್ಯ. ಇದಕ್ಕೆ ವಿಶ್ವ ತುಳು ಸಮ್ಮೇಳನ ನಾಂದಿಯಾಗಿದೆ. ಆಟಿ ಕೂಟ, ತುಳು ಜಾತ್ರೆಗಳಂತಹ ಕಾರ್ಯಕ್ರಮಗಳ ಅಗತ್ಯವಿದೆ. ತುಳುವಿಗೆ ರಾಷ್ಟ್ರೀಯ ಮಟ್ಟದ ಸಂಶೋಧನ ಕೇಂದ್ರ ಬೇಕು.
– ಚೇತನ್ ಮುಂಡಾಜೆ,
ಉಪನ್ಯಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.