ಸಿರಿಯಾದಿಂದ ರಶ್ಯ ಸೇನೆಯ ಆಂಶಿಕ ವಾಪಸಾತಿಗೆ ಪುಟಿನ್ ಆದೇಶ
Team Udayavani, Dec 11, 2017, 4:49 PM IST
ಮಾಸ್ಕೋ : ಸಮರ-ತ್ರಸ್ತ ಸಿರಿಯಾಗೆ ಅಚ್ಚರಿಯ ಭೇಟಿ ನೀಡಿರುವ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇಂದು ಸೋಮವಾರ ಸಿರಿಯಾದಿಂದ ಗಮನಾರ್ಹ ಪ್ರಮಾಣದ ರಶ್ಯ ಸೇನೆಯ ಆಂಶಿಕ ವಾಪಸಾತಿಯನ್ನು ಆದೇಶಿಸಿದರು.
ಸಿರಿಯಾ ಸಮರದಲ್ಲಿ ರಶ್ಯ 2015ರಲ್ಲಿ ಮೊದಲ ಬಾರಿಗೆ ಮಧ್ಯ ಪ್ರವೇಶ ಮಾಡಿತ್ತು. ತನ್ನ ಮಿತ್ರನಾದ ಡಮಾಸ್ಕಸ್ ಪರವಾಗಿ ವಾಯು ದಾಳಿ ಆರಂಭಿಸಿದ್ದ ರಶ್ಯ, ಸಿರಿಯಾ ಸರಕಾರದ ವಿರುದ್ಧ ಹೋರಾಡುತ್ತಿದ್ದ ಬಂಡುಕೋರರನ್ನು, ಐಸಿಸ್ ಉಗ್ರರನ್ನು ಮತ್ತು ಇತರ ಜಿಹಾದಿಗಳನ್ನು ಗುರಿ ಇರಿಸಿ ಬಾಂಬಿಂಗ್ ನಡೆಸಿತ್ತು.
ಸಿರಿಯಾದಿಂದ ರವ್ಯದ ಮಿಮೀನ್ ವಾಯು ನೆಲೆಯನ್ನು ತಲುಪಿದೊಡನೆಯೇ ಪುಟಿನ್ ಅವರು ಟವಿ ಪ್ರಸಾರಿತ ಭಾಷಣದಲ್ಲಿ “ನಾನೊಂದು ನಿರ್ಧಾರ ತೆಗೆದುಕೊಂಡಿದ್ದೇನೆ. ರಶ್ಯ ಸಮೂಹದ ಗಮನಾರ್ಹ ಪ್ರಮಾಣದ ಸೈನಿಕರು ಈಗಿಂದೀಗಲೇ ಸಿರಿಯಾದಿಂದ ತಮ್ಮ ಶಾಶ್ವತ ನೆಲೆಗಳಿಗೆ ಮರಳಲು ಆರಂಭಿಸಬೇಕು ಎಂಬ ಆದೇಶವನ್ನು ನಾನು ಈ ಮೂಲಕ ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರಿಗೆ ನೀಡುತ್ತಿದ್ದೇನೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.