ಕಂಠೀರವ ಬ್ಯಾರಿಕೇಡ್ ತೆಗೆಯಲು ಜಿಂದಾಲ್ ನಕಾರ
Team Udayavani, Dec 12, 2017, 7:05 AM IST
ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಬ್ಯಾರಿಕೇಡ್ ತೆಗೆಯಲು ನ್ಯಾಯಾಲಯ ಆದೇಶಿಸಿರುವುದರ ವಿರುದ್ಧ ಜಿಂದಾಲ್ ಈಗ ಮೇಲ್ಮನವಿ ಸಲ್ಲಿಸಿದೆ.
ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿ ಎಚ್.ಜಿ ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಕ್ರೀಡಾಂಗಣ ಬಳಕೆ ಬಗ್ಗೆ ಅಥ್ಲೀಟ್‌ಗಳು ಹಾಗೂ ಸರ್ಕಾರ ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳಲು ಪ್ರಯತ್ನಿಸಿ ಎಂದು ಸಲಹೆ ನೀಡಿತು. ಅಲ್ಲದೆ ಮುಂದಿನ ವಿಚಾರಣೆಯನ್ನು ನ್ಯಾಯಪೀಠ ಜನವರಿ 5ಕ್ಕೆ ಮುಂದೂಡಿತು.
ಜಿಂದಾಲ್ ಪರ ಕ್ರೀಡಾ ಇಲಾಖೆ ಬ್ಯಾಟಿಂಗ್: ಕಂಠೀರವ ಕ್ರೀಡಾಂಗಣವನ್ನು ಫುಟ್‌ಬಾಲ್‌ಗಾಗಿ ನೀಡಿದ್ದೇವೆ. ಇದರಿಂದ ಕ್ರೀಡಾಂಗಣ ಮೂಲಸೌಕರ್ಯ ಹೆಚ್ಚಿದೆ ಎಂದು ಸರ್ಕಾರಿ ವಕೀಲರು ವಾದ ಮಂಡನೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರು ಜಾವಲಿನ್ ಅಥವಾ ಶಾಟ್‌ಪುಟ್ ಅಭ್ಯಾಸ ನಡೆಸಿರುವುದರಿಂದ ಫುಟ್‌ಬಾಲ್‌ಗಾಗಿ ಅಳವಡಿಸಿದ ಹುಲ್ಲು ಹಾಳಾಗುತ್ತದೆ. ಹೀಗಾಗಿ ಕ್ರೀಡಾ ಇಲಾಖೆಯಿಂದ ಅಥ್ಲೀಟ್‌ಗಳ ಅಭ್ಯಾಸಕ್ಕಾಗಿ ಪ್ರತ್ಯೇಕ 200 ಮೀ. ಟ್ರ್ಯಾಕ್ ವ್ಯವಸ್ಥೆ ಇದೆ. ಅದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನ್ಯಾಯಾಲಯ ಎದುರು ತಿಳಿಸಿದ್ದಾರೆ ಎನ್ನಲಾಗಿದೆ.
200 ಮೀ. ಟ್ರ್ಯಾಕ್‌ನಲ್ಲಿ ಅಭ್ಯಾಸಕ್ಕೆ ನಿರಾಕರಿಸಿದ ಕ್ರೀಡಾಪಟುಗಳು: ವಿಶ್ವ ಮಟ್ಟದ ಕ್ರೀಡಾಪಟುಗಳು ಎಲ್ಲಿಯೂ 200 ಮೀ. ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸಿದ ಉದಾಹರಣೆ ಇದುವರೆ ಇಲ್ಲ. ಅಭ್ಯಾಸ ನಡೆಸಿದರೆ ಕ್ರೀಡಾಪಟುಗಳ ಜೀವಕ್ಕೇ ಅಪಾಯವಾಗುವ ಸಾಧ್ಯತೆ ಇದೆ ಎಂದು ಕೋಚ್‌ವೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.
200 ಮೀ. ಟ್ರ್ಯಾಕ್‌ನಲ್ಲಿ ಜಾವೆಲಿನ್ ಅಭ್ಯಾಸ ನಡೆಸುವುದರಿಂದ ಸಾವು ನೋವುಗಳು ಸಂಭವಿಸಬಹುದು. ನ್ಯಾಯಾಲಯಕ್ಕೆ ಇದರ ಗಂಭೀರತೆಯನ್ನು ನಾವು ಮುಂದಿನ ವಿಚಾರಣೆ ವೇಳೆ ಮಂಡಿಸುವ ಪ್ರಯತ್ನ ನಡೆಸುತ್ತೇವೆ ಎಂದು ಅವರು ತಿಳಿಸಿದರು.
1 ಕೋಟಿ ಜನಕ್ಕೆ 1 ಕ್ರೀಡಾಂಗಣ ಸಾಕೇ?: ಹೈ ಪ್ರಶ್ನೆ: ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ಅಥ್ಲೀಟ್‌ಗಳ ಬಳಕೆಗೆ ಪ್ರತ್ಯೇಕ ಟ್ರ್ಯಾಕ್ ನಿರ್ಮಿಸಲಾಗಿದ್ದು ಅವಕಾಶ ಮಾಡಿಕೊಡಲಾಗುತ್ತಿದೆ. ನಗರದಲ್ಲಿ ಒಂದೇ ದೊಡ್ಡ ಕ್ರಿಡಾಂಗಣವಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಗರದಲ್ಲಿ 1 ಕೋಟಿಗೂ ಅಧಿಕ ಜನಸಂಖ್ಯೆಯಿದೆ. ಒಂದು ಕ್ರೀಡಾಂಗಣ ಸಾಕಾಗಲಿದೆಯೇ ಎಂದು ರಾಜ್ಯಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ಜನರ ಬಳಕೆಗೆ ಅನುಕೂಲವಾಗುವಂತೆ ಕನಿಷ್ಟ 10 ಕ್ರೀಡಾಂಗಳನ್ನು ನಿರ್ಮಾಣ ಮಾಡುವ ಬಗ್ಗೆ ಗಮನಹರಿಸಿ. ಇದರಿಂದ ಜನರ ಆರೋಗ್ಯ ವೃದ್ಧಿಸಿ ಆಸ್ಪತ್ರೆ ವೆಚ್ಚವೂ ಕಡಿಮೆಯಾಗಲಿದೆ ಎಂದು ಮೌಖೀಕ ಸಲಹೆ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.