ಸೌದಿಯಲ್ಲಿ ಸಿನಿಮಾಗೆ ಓಕೆ
Team Udayavani, Dec 12, 2017, 8:00 AM IST
ರಿಯಾದ್: ಸೌದಿ ಅರೇಬಿಯಾ ಸರಕಾರದ ಸುಧಾರಣಾ ಕ್ರಮಗಳಿಗೆ ಮತ್ತೂಂದು ಸೇರ್ಪಡೆಯಾಗಿದೆ. ಅದೇನೆಂದರೆ, ಇನ್ನು ಈ ದೇಶದಲ್ಲಿ ಆರಾಮವಾಗಿ ಸಿನಿಮಾವನ್ನೂ ನೋಡಬಹುದು. ಇದುವರೆಗೆ ಚಿತ್ರಮಂದಿರಗಳಲ್ಲಿ ಚಲನಚಿತ್ರ ವೀಕ್ಷಣೆಗೆ ಇದ್ದ ನಿರ್ಬಂಧವನ್ನು 2018ರ ಮಾರ್ಚ್‌ನಿಂದ ತೆಗೆದು ಹಾಕುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ.
35 ವರ್ಷಗಳ ಹಿಂದೆ ಅಂದರೆ 1980ರಲ್ಲಿ ಮೂಲಭೂತವಾದಿಗಳ ಪ್ರಬಲ ಆಕ್ಷೇಪದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಸಿನಿಮಾ ವೀಕ್ಷಣೆಗೆ ತಡೆ ಹೇರಲಾಗಿತ್ತು. ಇದೀಗ ಸೌದಿಯ ಭಾವೀ ದೊರೆ, 32 ವರ್ಷದ ಮೊಹಮ್ಮದ್ ಬಿನ್ ಸಲ್ಮಾನ್ ಸುಧಾರಣಾವಾದಿ ದೃಷ್ಟಿಕೋನ ಹೊಂದಿರುವುದರಿಂದ ಅವರು 35 ವರ್ಷಗಳಿಂದ ಜಾರಿಯಲ್ಲಿರುವ ನಿಷೇಧ ಕ್ರಮ ಹಿಂಪಡೆಯಲು ಮುಂದಾಗಿದ್ದಾರೆ. ಗಮನಾರ್ಹ ಅಂಶವೆಂದರೆ ಇಂಥ ನಿರ್ಧಾರ ಕೈಗೊಳ್ಳಲೂ ಕಾರಣವಿದೆ. ತೈಲ ಆರ್ಥಿಕತೆಯನ್ನೇ ಇದುವರೆಗೆ ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ನಂಬಿಕೊಂಡಿತ್ತು. ಪ್ರಾಕೃತಿಕವಾಗಿ ಕಚ್ಚಾ ತೈಲ ನಿಕ್ಷೇಪಗಳಲ್ಲಿ ಕೊರತೆ ಕಂಡುಬಂದಿರುವುದರಿಂದ ದೊರೆ ಮೊಹಮ್ಮದ್ ಇಂಥ ನಿರ್ಣಯಕ್ಕೆ ಬಂದಿದ್ದಾರೆ.
“ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದರಿಂದಸರಕಾರದ ಬೊಕ್ಕಸಕ್ಕೂ ಅನುಕೂಲವಾಗಿ ಆರ್ಥಿಕಾಭಿವೃದ್ಧಿ ಆಗುತ್ತದೆ. ಜತೆಗೆ ಸಾಂಸ್ಕೃತಿಕ ವೈವಿಧಿÂàಕರಣಕ್ಕೂ ಅವಕಾಶ ಮಾಡಿದಂತಾಗುತ್ತದೆ’ ಎಂದು ಅಲ್ಲಿನ ಸಾಂಸ್ಕೃತಿಕ ಮತ್ತು ಮಾಹಿತಿ ಸಚಿವ ಅವ್ವದ್ ಬಿನ್ ಸಲೇಹ್ ಅಲ್ವದ್ ತಿಳಿಸಿದ್ದಾರೆ. 2030ರ ಒಳಗಾಗಿ 2 ಸಾವಿರ ಸ್ಕ್ರೀನ್‌ಗಳನ್ನು ಒಳಗೊಂಡಿರುವ 300 ಚಿತ್ರಮಂದಿರಗಳನ್ನು ಆರಂಭಿಸುವ ಗುರಿ ಹಾಕಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.