32 ಸಾಧಕರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ


Team Udayavani, Dec 12, 2017, 7:25 AM IST

folk-academy-karnataka.jpg

ಬೆಂಗಳೂರು: 2017-18ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಲಿಕಾರ ಗ್ರಾಮದ ಸರಿಪಾಡಾªನ ಕಲಾವಿದೆ ಲೀಲಾ ಶೆಡ್ತಿ, ಉಡುಪಿ ಜಿಲ್ಲೆ ಹಿರಿಯಡ್ಕದ ಗುಡ್ಡೆಯಂಗಡಿ ಗ್ರಾಮದ ಕೊರಗರ ಡೋಲು ಕಲಾವಿದ ಗುರುವ ಡೋಲು ಸೇರಿ32 ಜನ ಕಲಾವಿದರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು ಪ್ರಕಟಿಸಿದರು. 

ರಾಮನಗರದ ಸುಪ್ರಸಿದ್ಧ ಸೋಬಾನೆ ಪದ ಹಾಡುಗಾರ್ತಿ ಗಂಗನರಸಮ್ಮ, ಕೋಲಾರದ ಮಾವಳ್ಳಿ ಗ್ರಾಮದ ಮಾರಮ್ಮ, ದಾವಣಗೆರೆಯ ಜಾನಪದ ಕಲಾವಿದ ಜಿ.ಸಿದ್ಧನಗೌಡ, ತುಮಕೂರು ಜಿಲ್ಲೆಯ ವೀರಭದ್ರ ಕುಣಿತ ಕಲಾವಿದ ಕೆ.ಆರ್‌.ಹೊಸಳಯ್ಯ, ಬೆಂಗಳೂರು ನಗರದ ದಾಸರ ಪದ ಕಲಾವಿದ ಎಚ್‌.ಕೆ.ಪಾಪಣ್ಣ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೋಳೂರು ಗ್ರಾಮದ ಮದುವೆ ಹಾಡುಗಳ ಕಲಾವಿದೆ ಅಕ್ಕಯ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಾಂಪ್ರದಾಯಿಕ ಪದಗಳ‌ ಹಾಡುಗಳಿಗೆ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರದ ಮಳ್ಳೂರು ಗ್ರಾಮದ ಶಾಂತಮ್ಮ, ಬಾಗಲಕೋಟೆಯ ಘಟನಟ್ಟಿ ಗ್ರಾಮದ ಸಾಬವ್ವ ಅಣ್ಣಪ್ಪ ಕೋಳಿ, ಕೊಪ್ಪಳದ ಹನುಮವ್ವ ವಾಲೀಕಾರ, ಕೋಲಾಟ ಪದಗಳ ಮೂಲಕ ಹೆಸರು ಮಾಡಿರುವ ಚಿತ್ರದುರ್ಗ ಜಿಲ್ಲೆಯ ಕಾಲ್ಕೆರೆ ಗ್ರಾಮದ ಡಿ.ತಿಮ್ಮಪ್ಪ, ಜನಪದ ವೈದ್ಯ ಶಿವಮೊಗ್ಗ ಜಿಲ್ಲೆಯ ಸಾಗರದ ಕೆ.ವಾಸುದೇವ, ಬುರ್ರಕಥೆಯ ಅಂದ ಕಲಾವಿದೆ ಸಂಡೂರು ತಾಲೂಕಿನ ಬುಡ್ಗ ಜಂಗಮ ಕಲಾಗ್ರಾಮದ ಶಿವಮ್ಮ, ಯಾದವಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೆಜ್ಜೆ ಕುಣಿತ ಕಲಾವಿದ ಶಿವಪ್ಪ ಹೆಬ್ಟಾಳ, ರಾಯಚೂರಿನ ರಾಮನತಾಳದ ತತ್ವಪದ ಕಲಾವಿದೆ ರುಕ್ಕವ್ವ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೀದರನ ಮೊಹರಂ ಪದ ಕಲಾವಿದ ನಾಗಪ್ಪ ಕಾಶಂಪೂರ, ಕಲಬುರಗಿಯ ಗೀಗಿಪದ ಕಲಾವಿದ ಇಸ್ಮಾಯಿಲ್‌ ಸಾಬ್‌, ಬಾಗಲಕೋಟೆಯ ಜಕ್ಕವ್ವ ಸತ್ಯಪ್ಪ ಮಾದರ, ಗೀಗಿ ಭಜನೆಯ ಹಾಡುಗಾರ ಧಾರವಾಡದ ವೀರಭದ್ರಪ್ಪ ಯ.ಮಳ್ಳೂರ, ವಿಜಯಪುರದ ಸಾಲೋಟಿಯ ಜಗದೇವ ಗೊಳವ್ವ ಮಾಡ್ಯಾಳ, ಹಾವೇರಿಯ ಪುರವಂತಿಕೆ ಕಲಾವಿದ ಮಹಾರುದ್ರಪ್ಪ ವೀರಪ್ಪ ಇಟಗಿ, ಡೊಳ್ಳಿನ ಪದದ ಕಲಾವಿದ ಗದಗ್‌ನ ಡೋಣಿ ಗ್ರಾಮದ ರಾಮಪ್ಪ ದ್ಯಾಮಪ್ಪ ಕೊರವ, ಉತ್ತರ ಕನ್ನಡ ಜಿಲ್ಲೆಯ ಗೊಂಡರ ಢಕ್ಕೆ ಕುಣಿತ ಕಲಾವಿದ ಸೋಮಯ್ಯ ಸಣ್ಣಗೊಂಡ, ಮೈಸೂರಿನ ಬೀಸು ಕಂಸಾಳೆ ಕಲಾವಿದ ಪುಟ್ಟಸ್ವಾಮಿ, ಚಿಕ್ಕಮಗಳೂರಿನ ಚೌಡಕಿ ಪದದ ಹಾಡುಗಾರ ಎಸ್‌.ಜಿ.ಜಯಣ್ಣ, ಮಂಡ್ಯದ ಗಾರುಡಿ ಗೊಂಬೆ ಕಲಾವಿದ ಕೃಷ್ಣೇಗೌಡ, ಚಾಮರಾಜನಗರದ ನೀಲಗಾರರ ಕಾವ್ಯ ಕಲಾವಿದ ಸಣ್ಣಶೆಟ್ಟಿ, ಹಾಸನದ ಭಜನೆ ಕಲಾವಿದೆ ಲಕ್ಷ್ಮಮ್ಮ, ಕೊಡಗಿನ ಉಮ್ಮತ್ತಾಟ್‌ ಕಲಾವಿದೆ ರಾಣಿಮಾಚಯ್ಯ ಈ ಸಾಲಿನ ಜಾನಪದ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಸಾಲಿನ ಡಾ.ಜಿಶಂಪ ತಜ್ಞ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಎನ್‌.ಹುಚ್ಚಪ್ಪ ಮಾಸ್ತರ್‌ ಮತ್ತು ಡಾ.ಬಿ.ಎಸ್‌.ಗದ್ದಗಿಮs…, ತಜ್ಞ ಪ್ರಶಸ್ತಿಗೆ ಧಾರವಾಡದ ಶಾಲಿನಿ ರಘುನಾಥ್‌ ಆಯ್ಕೆಯಾಗಿದ್ದಾರೆ ಎಂದು ಟಾಕಪ್ಪ ತಿಳಿಸಿದರು.

ಸಾಗರದಲ್ಲಿ ಪ್ರಶಸ್ತಿ ಪ್ರದಾನ
ಪ್ರಶಸ್ತಿಗಳಲ್ಲಿ ಎರಡು ವಿಧಗಳಿದ್ದು, ಕಲಾ ಪ್ರಕಾರದ ಪ್ರಶಸ್ತಿಗೆ ಆಯ್ಕೆಯಾಗಿರುವ ಕಲಾವಿದರಿಗೆ 25 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಮತ್ತು ತಜ್ಞ ಪ್ರಶಸ್ತಿಗೆ ಆಯ್ಕೆಯಾದ ಕಲಾವಿದರಿಗೆ 50 ಸಾವಿರ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಡಿ.28ರಿಂದ 29ರವರೆಗೆ ಹಮ್ಮಿಕೊಂಡಿರುವ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಿ.ಟಾಕಪ್ಪ ಕಣ್ಣೂರು ತಿಳಿಸಿದರು. ಸರ್ಕಾರ ಕಲಾವಿದರಿಗೆ ಈಗ ನೀಡುತ್ತಿರುವ ಮಾಸಾಶನ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಲಾವಿದರ ಮಾಸಾಶನವನ್ನು 4,500 ರೂ.ಗೆ ಏರಿಕೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.

ಟಾಪ್ ನ್ಯೂಸ್

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.