ಪ್ರವಾಸಿ ಕೇಂದ್ರ ಘೋಷಣೆಗೆ ಸೀಮಿತ


Team Udayavani, Dec 12, 2017, 10:13 AM IST

bid-1.jpg

ಬಸವಕಲ್ಯಾಣ: ಸಮಾನತೆ ತತ್ವದಡಿ 12ನೇ ಶತಮಾನದಲ್ಲಿ ಕ್ರಾಂತಿ ಮಾಡಿದ ಗುರು ಬಸವಣ್ಣನವರ ಕಾಯಕ ಭೂಮಿ ಬಸವಕಲ್ಯಾಣ ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿಸಬೇಕು ಎನ್ನುವ ಸರ್ಕಾರ ನಿರ್ಧಾರ ಬರಿ ಘೋಷಣೆಗೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ.

ಆಳುವವರಿಗೆ ಘೋಷಣೆ ಮತ್ತು ಅನುಷ್ಠಾನದ ಮಧ್ಯೆ ವ್ಯತ್ಯಾಸ ಕಾಣುತ್ತಿಲ್ಲ, ಹಾಗಾಗಿಯೇ ಕಳೆದೊಂದು ದಶಕದ ಹಿಂದೆ ಆರಂಭವಾದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿಕೆಡಿಬಿ) ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದರೂ ಸರ್ಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲ. 

ಸಲೀಸಾಗಿ ಯೋಜನೆಗಳನ್ನು ಘೋಷಣೆ ಮಾಡುವ ಸರ್ಕಾರಗಳು ಬಳಿಕ ಅನುಷ್ಠಾನಕ್ಕೆ ಒತ್ತು ನೀಡುತ್ತಿಲ್ಲ ಎಂಬುದು ಹಳೇ ಆರೋಪ. ಈ ಆರೋಪವು ಇಲ್ಲಿನ ಬಿಕೆಡಿಬಿಗೆ ಚೆನ್ನಾಗಿ ಅನ್ವಯಿಸುತ್ತದೆ. ಮಾಜಿ ಮುಖ್ಯಮಂತ್ರಿ ದಿ| ಎನ್‌.ಧರ್ಮಸಿಂಗ್‌ ಮುಖ್ಯ ಮಂತ್ರಿಯಾಗಿದ್ದಾಗ ಅಸ್ತಿತ್ವಕ್ಕೆ ಬಂದ ಬಿಕೆಡಿಬಿ ಆರಂಭ ಶೂರತ್ವ ಮಾತ್ರ ತೋರಿದ್ದು ಬಿಟ್ಟರೆ ಹೇಳಿಕೊಳ್ಳುವ ಕಾಮಗಾರಿಗಳು ನಡೆದಿಲ್ಲ ಎನ್ನುವುದು ದಾಖಲೆಗಳಿಂದ ಸ್ಪಷ್ಟವಾಗುತ್ತವೆ.

ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿ ಆರು ಜನ ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಈ ಪೈಕಿ ಬಹುತೇಕ ಮುಖ್ಯಮಂತ್ರಿಗಳು ಬಸವಣ್ಣನ ತತ್ವಾದರ್ಶಗಳ ಮೇಲೆ ನಂಬಿಕೆ ಇಟ್ಟುಕೊಂಡೇ ಅಧಿಕಾರಕ್ಕೇರಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಆದರೆ, ಇಲ್ಲಿವರೆಗೆ 74.97 ಕೋಟಿ ಅನುದಾನ ಬಿಡುಗಡೆಯಾಗಿದ್ದು ಬಿಟ್ಟರೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಸರ್ಕಾರ ಮಾತ್ರ ಮನಸು ಮಾಡಲಿಲ್ಲ. ಬಿಡುಗಡೆಯಾದ ಅನುದಾನದಲ್ಲಿ ಒಟ್ಟು 67.71 ಕೋಟಿ ಖರ್ಚಾಗಿದ್ದು, ಪ್ರಥಮ ಹಂತದಲ್ಲಿ ಬಿಕೆಡಿಬಿಯಿಂದ
ಕೈಗೆತ್ತಿಕೊಳ್ಳಲಾದ 29 ಶರಣ ಸ್ಮಾರಕಗಳ ಪೈಕಿ ಇದು ವರೆಗೆ ಪೂರ್ಣಗೊಂಡಿದ್ದು 17 ಸ್ಮಾರಕಗಳು ಮಾತ್ರ.

ಅಂಬಿಗರ ಚೌಡಯ್ಯ, ನೂಲಿ ಚಂದಯ್ಯ, ಅಕ್ಕ ನಾಗಮ್ಮ, ಹರಳಯ್ಯ, ಅಲ್ಲಮ ಪ್ರಭು ದೇವರ ಗದ್ದುಗೆ ಮಠ, ಮಡಿವಾಳ ಮಾಚಿದೇವರ ಸ್ಮಾರಕ ಮತ್ತು ಹೊಂಡ, ಕಂಬಳಿ ನಾಗಿದೇವರ ಮಠ, ಜೇಡರ ದಾಸಿಮಯ್ಯ, ಉರಿಲಿಂಗ ಪೆದ್ದಿ ಮಠ ಸೇರಿ 17 ಸ್ಮಾರಕಗಳ ಜತೆಗೆ ಸಸ್ತಾಪುರ ಬಂಗ್ಲಾ ಬಳಿ 108 ಅಡಿ ಎತ್ತರದ ಮಹಾದ್ವಾರ, ಬಂಗ್ಲಾದಿಂದ ಬಸವಕಲ್ಯಾಣಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಚತುಷ್ಪಥ ಮಾಡುವುದು, ಬಸವೇಶ್ವರ ದೇವಸ್ಥಾನದ ಬಳಿ ದಾಸೋಹ ಭವನ, ಕೋಟಿ ಬಳಿ ಪ್ರಾಚ್ಯ ವಸ್ತು ಸಂಗ್ರಹಾಲಯ, ಶರಣ ಸಾಹಿತ್ಯ ಗ್ರಂಥಾಲಯ, ಶಾಲಾ ಕಟ್ಟಡ ಮತ್ತು ರಥ ಮೈದಾನದಲ್ಲಿ ಸುಮಾರು 6000 ಆಸನಗಳ ಕ್ಷಮತೆಯುಳ್ಳ ಸಭಾ ಭವನ ನಿರ್ಮಾಣ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ.

ಇನ್ನೂ 12 ಶರಣ ತಾಣಗಳಾದ ಪರುಷ ಕಟ್ಟೆ, ಬಸವಕಲ್ಯಾಣ ಕೋಟೆ, ವಿಜ್ಞಾನೇಶ್ವರಗವಿ, ಪಂಚ ಸೂತ್ರ ಗವಿ, ಅನುಭವ
ಮಂಟಪ, ಶಿವಪುರ ಶಿವಾಲಯ, ನಾರಾಯಣಪುರ ಶಿವಾಲಯ, ಕಿನ್ನರಿ ಬೊಮ್ಮಯ್ಯ ಗುಡಿ, ಮೊಳಿಗೆ ಮಾರಯ್ಯ ಗುಡಿ, ಸದಾನಂದ ಮಠ, ಬಸವೇಶ್ವರ ಮಹಾಮನೆ ಇದ್ದ ಸ್ಥಳ ಅರಿವಿನ ಮನೆ, ಯಳೆಹೊಟ್ಟೆ ಶಿಕ್ಷೆ ಅನುಭವಿಸಿದ ಶರಣರ ಸ್ಥಳಗಳ ಅಭಿವೃದ್ಧಿ ಕಾರ್ಯ ನಿಂತು ಹೋಗಿದೆ.

2005ರಲ್ಲಿ ಆರಂಭವಾದ ಕಾಮಗಾರಿ ದಶಕಕ್ಕಿಂತ ಹೆಚ್ಚು ವರ್ಷಗಳಾದರೂ ಹೇಳಿಕೊಳ್ಳುವ ಪ್ರಗತಿ ಕಂಡಿಲ್ಲ. ಸ್ಮಾರಕಗಳ ಕಾಮಗಾರಿಗಳ ಪೈಕಿಯೇ ಅರ್ಧ ಕಾಮಗಾರಿ ಬಾಕಿ ಉಳಿದಿದೆ. ಈ ಮಧ್ಯೆ ಮತ್ತೆ ಅನುಭವ ಮಂಟಪ ಪುನರ್‌ ನಿರ್ಮಾಣಕ್ಕಾಗಿ ಗೋ. ರು. ಚನ್ನಬಸಪ್ಪ ಅವರ ನೇತೃತ್ವದಲ್ಲಿ ರಚಿಸಿದ ತಜ್ಞರ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸುಮಾರು ರೂ. 600 ಕೋಟಿಗಳ ಯೋಜನೆ ತಯಾರಿಸಲಾಗಿದೆ. 

ಬಿಕೆಡಿಬಿ ಅಧ್ಯಕ್ಷರು ಆಗಿರುವ ಮುಖ್ಯಮಂತ್ರಿಗಳು ಬಸವಕಲ್ಯಾಣಕ್ಕೆ ಬಂದು ಇಲ್ಲಿಯೇ ಸಭೆ ನಡೆಸಿ ನೂತನ ಅನುಭವ ಮಂಟಪಕ್ಕೆ ಅನುಮೋದನೆ ನೀಡುವ ಜತೆಗೆ ಭೂಮಿ ಪೂಜೆ ನೆರವೇರಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಡಿ.13ರಂದು ಸಾಧನಾ ಸಮಾವೇಶದ ನಿಮಿತ್ತ ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಕಾರ್ಯಕ್ರಮಗಳಲ್ಲಿ ಬಿಕೆಡಿಬಿ ಸಭೆ
ನಡೆಸುವುದು ಹಾಗೂ ಅನುಭವ ಮಂಟಪ ನಿರ್ಮಾಣ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ಬಸವ ಭಕ್ತರಲ್ಲಿ ನಿರಾಸೆ ಮೂಡಿಸುವಂತಾಗಿದೆ.

ಅನುಭವ ಮಂಟಪ ನಿರ್ಮಾಣಕ್ಕೆ ಕೂಡಲೆ ಆಡಳಿತಾತ್ಮಕ ಅನುಮೋದನೆ ನೀಡುವ ಜತೆಗೆ ಇನ್ನು ಅಭಿವೃದ್ದಿಗೊಳ್ಳದಿರುವ 12 ಶರಣ ಸ್ಮಾರಕಗಳ ಅಭಿವೃದ್ಧಿಗೆ ಅಗತ್ಯವಿರುವ 119 ಕೋಟಿ ರೂ. ಅನುದಾನ ಕಲ್ಪಿಸಿ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಿಂದ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

ಬಿಕೆಡಿಬಿ ಯಿಂದ ನಗರದ ರಥ ಮೈದಾನದಲ್ಲಿ ನಿರ್ಮಿಸಲಾದ ನೂತನ ಸಭಾಭವನವು ಸುಮಾರು 6000 ಆಸನ ಸಾಮರ್ಥ್ಯಹೊಂದಿದ್ದು, 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳಿಸಲಾಗಿದೆ. ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆಂದು ಬುಧವಾರ ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭಾಭವನ ಲೋಕಾರ್ಪಣೆಗೊಳಿಸುವರು. 

„ಉದಯಕುಮಾರ ಮುಳೆ

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.