ನೀವು ಫಡ್ನವೀಸಾ ಅಥವಾ ಫೆರ್ನಾಂಡಿಸಾ?ಟ್ರೋಲ್ ಆದ ಅಮೃತಾ
Team Udayavani, Dec 13, 2017, 9:46 AM IST
ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಅವರು ಕ್ರಿಸ್ಮಸ್ ಕುರಿತಾಗಿನ ಸಾಂತಾ ಸಮಾಜ ಸೇವಾ ಅಭಿಯಾನವೊಂದರಲ್ಲಿ ಭಾಗಿಯಾಗಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಆಗಿದ್ದಾರೆ.
ಸೋಮವಾರ ಮುಂಬಯಿಯಲ್ಲಿ ಕ್ರಿಸ್ಮಸ್ ಚಾರಿಟಿ ಸಮಾರಂಭವೊಂದರಲ್ಲಿ ಅಮೃತಾ ಭಾಗಿಯಾಗಿ ‘ಬಿ ಸಾಂತಾ’ ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಹಲವರು ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆಗಳನ್ನು ವ್ಯಕ್ತಪಡಿಸಿದ್ದು, ‘ನೀವು ಫಡ್ನವೀಸ್ ಅಥವಾ ಫೆರ್ನಾಂಡಿಸ್ ಎನ್ನುವುದನ್ನು ತಿಳಿಸಿ’, ‘ಮತಾಂತರಕ್ಕೆ ನಿಮ್ಮ ಬೆಂಬಲವೇ?’ ಹೀಗೆ ಸರಣಿ ಪ್ರಶ್ನೆಗಳನ್ನು ಮುಂದಿರಿಸಿ ಟ್ರೋಲ್ ಮಾಡಿದ್ದಾರೆ.
ಟ್ರೋಲ್ ಆಗುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಅಮೃತಾ ಅವರು ಮಾರ್ಮಿಕ ಪ್ರತಿಕ್ರಿಯೆ ನೀಡಿದ್ದು,’ ನಾನು ಹಿಂದು ಎಂದು ಹಲವರಂತೆ ಹೆಮ್ಮೆಯಿಂದ ಹೇಳುತ್ತೇನೆ. ನಾನು ದೇಶದ ಎಲ್ಲಾ ಹಬ್ಬಗಳನ್ನು ಆಚರಿಸಿಕೊಳ್ಳುತ್ತೇನೆ. ಅದು ನನ್ನ ವೈಯಕ್ತಿಕ ಆಯ್ಕೆ. ನಾವು ನಮ್ಮ ದೇಶದ ನಿಜವಾದ ಆತ್ಮವನ್ನು ಪ್ರತಿನಿಧಿಸುತ್ತೇವೆ. ಇದು ನಮ್ಮ ದೇಶ, ಧರ್ಮ ಮತ್ತು ಮಾನವತೆಯ ಕುರಿತಾಗಿನ ನಮ್ಮ ಪ್ರೀತಿಯನ್ನು ದುರ್ಬಲಗೊಳಿಸುವುದಿಲ್ಲ. ಪ್ರಜ್ಞಾವಂತ ಹಿಂದೂ ನಾಗರಿಕಳಾಗಿ ನಾನು ಎಲ್ಲರು ಒಂದಾಗಿ ಬಾಳಲು ಮತ್ತು ಸಾಮರಸ್ಯವನ್ನು ತರಲು ಸದಾ ಪ್ರಯತ್ನಿಸುತ್ತೇನೆ. ಆದರೆ ಪರಾನುಭೂತಿ ಪತ್ರಕರ್ತರು ಮತ್ತು ಪತ್ರಿಕೋದ್ಯಮ ಧಾರ್ಮಿಕ ಭಿನ್ನಾಭಿಪ್ರಾಯಗಳ ಬೆಂಕಿಯನ್ನು ಹಚ್ಚಬಾರದು ಎಂದು ನಿಮಗೆ ನೆನಪಿಸಲು ಬಯಸುತ್ತೇನೆ. ತಪ್ಪು ಪ್ರಚಾರದ ಹೊರತಾಗಿ ನಾನು ನನ್ನ ಕಾರ್ಯಚಟುವಟಿಕೆಗಳನ್ನು ನಿಲ್ಲಿಸುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ
TTD: ತಿರುಪತಿ ದರ್ಶನ ಕಾಯುವಿಕೆ ಅವಧಿ ಇಳಿಕೆಗೆ ಕೃತಕ ಬುದ್ಧಿಮತ್ತೆ ಬಳಕೆ?
Pilot: ಕೆಲಸದ ಟೈಂ ಮುಗೀತು ಎಂದು ವಿಮಾನ ಹಾರಿಸದ ಏರ್ ಇಂಡಿಯಾ ಪೈಲಟ್!
Nanded: ಸಂಗಾತಿಯ ಅರಸುತ್ತಾ 300 ಕಿ.ಮೀ. ಸಂಚರಿಸಿದ “ಜಾನಿ’ ಎಂಬ ಹುಲಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.