ಕ್ಷಿಪ್ರ ಕಾಂತಿ!
Team Udayavani, Dec 13, 2017, 1:08 PM IST
ರೋಸ್ ವಾಟರ್ ಹಚ್ಚುವುದರಿಂದ ಮುಖದ ಚರ್ಮ ತಾಜಾತನ ಪಡೆದುಕೊಳ್ಳುತ್ತದೆ. ಹತ್ತಿಯನ್ನು ರೋಸ್‌ವಾಟರ್‌ನಲ್ಲಿ ಅದ್ದಿ, ಮುಖಕ್ಕೆ ಲೇಪಿಸಿ. ಅದರ ಸುವಾಸನೆ ಮನಸ್ಸಿಗೂ ಖುಷಿ ಕೊಡುತ್ತದೆ.
– ವಿಟಮಿನ್ ಬಿ ಮತ್ತು ಸಿ ಅಂಶ ಹೇರಳವಾಗಿರುವ ಜೇನುತುಪ್ಪ ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಮುಖಕ್ಕೆ ಜೇನು ಹಚ್ಚಿ 5 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಜೇನಿನ ಜೊತೆಗೆ ಮೊಸರು ಸೇರಿಸಿಯೂ ಹಚ್ಚಬಹುದು.
– ಸಿಟ್ರಸ್ ಅಂಶವಿರುವ (ಲಿಂಬೆ ಹಣ್ಣಿನ) ಫೇಸ್‌ವಾಶ್‌ನಿಂದ ಮುಖ ತೊಳೆದರೆ, ಚರ್ಮದಲ್ಲಿನ ಕಲ್ಮಶವೆಲ್ಲವೂ ದೂರಾಗುತ್ತದೆ. ಚರ್ಮವನ್ನು ಮೃದುಗೊಳಿಸುವ ಗುಣವೂ ಲಿಂಬೆರಸಕ್ಕಿದೆ.
– ಚರ್ಮ ಕಾಂತಿಹೀನವಾಗಿ, ಸುಕ್ಕುಸುಕ್ಕಾಗಿದ್ದರೆ ಪೆಟ್ರೋಲಿಯಂ ಜೆಲ್ಲಿ ಬಳಸಬಹುದು. ಕಣೆÅಪ್ಪೆಯ ಮೇಲೆ, ಕೆನ್ನೆಯ ಚರ್ಮಕ್ಕೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿದರೆ ತಕ್ಷಣದಲ್ಲಿ ಪ್ರಯೋಜನ ಸಿಗುತ್ತದೆ.
– ಮುಖಕ್ಕೆ ಮಸಾಜ್ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಬೇರೆಲ್ಲ ಪದಾರ್ಥಗಳಿಗಿಂತ, ಆಲಿವ್ ಎಣ್ಣೆ ಮಸಾಜ್ ಚರ್ಮಕ್ಕೆ ಒಳ್ಳೆಯದು. ಆಲಿವ್ ಎಣ್ಣೆ ಒಳ್ಳೆಯ ಮಾಯಿಶ್ಚರೈಸರ್ ಅಷ್ಟೇ ಅಲ್ಲದೆ, ಮುಖದಲ್ಲಿ ರಕ್ತ ಪರಿಚಲನೆಯನ್ನೂ ಸರಾಗವಾಗಿಸುತ್ತದೆ.
– ಇವತ್ಯಾಕೋ ಮುಖ ಡಲ್ ಕಾಣಿಸುತ್ತಿದೆ, ಫೇಶಿಯಲ್ ಮಾಡೋಕೂ ಟೈಮಿಲ್ಲ ಅಂತ ಬೇಜಾರಾ? ಹಾಗಾದ್ರೆ, ಕಣೆÅಪ್ಪೆಗೆ ತುಸು ಗಾಢವಾಗಿ ಮಸ್ಕಾರ ಹಚ್ಚಿ. ಆಗ ನಿಮ್ಮ ಕಣ್ಣುಗಳು ಅಗಲವಾಗಿ, ಆಕರ್ಷಕವಾಗಿ ಕಾಣಿಸುತ್ತವೆ. ಮಸ್ಕಾರ ಚಮತ್ಕಾರದಿಂದ ಮುಖ ಬ್ಯೂಟಿಫುಲ್ ಆಗಿ ಕಾಣುತ್ತದೆ.
– ಕಾಫಿ ಹೊಟ್ಟೆಗೆ ಒಳ್ಳೆಯದಲ್ಲ. ಆದರೆ, ಅದು ಚರ್ಮದ ಕಾಂತಿ ಹೆಚ್ಚಿಸುತ್ತದೆ ಎಂಬುದನ್ನು ಒಪ್ಪಲೇಬೇಕು. ಕಾಫಿಪುಡಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ಚರ್ಮದ ಕಾಂತಿಗೆ ಹಾಗೂ ರಕ್ತ ಪರಿಚಲನೆಗೆ ಸಹಕಾರಿ. ಕಾಫಿ ಸðಬ್‌ನಿಂದ ಮುಖವನ್ನುಜ್ಜಿದರೆ ಸತ್ತ ಚರ್ಮ ಉದುರಿ, ಮುಖ ಫ್ರೆಶ್ ಆಗುತ್ತದೆ.
– ಐಸ್‌ಕ್ಯೂಬ್‌ನಿಂದ ಮುಖ ತೊಳೆದರೆ ಚರ್ಮಕ್ಕೆ ನಿಮಿಷಾರ್ಧದಲ್ಲಿ ಹೊಸ ಲುಕ್ ಸಿಗುತ್ತದೆ. ಚರ್ಮದ ರಂಧ್ರಗಳು ಬಿಗಿಯಾಗಿ, ಮುಖಕ್ಕೆ ಹೊಸ ಕಳೆ ಬರುತ್ತದೆ. ಕಾಟನ್ ಬಟ್ಟೆಯಲ್ಲಿ ಐಸ್ ಕ್ಯೂಬ್ ಇಟ್ಟು ಮಸಾಜ್ ಮಾಡಿ.
– ಚರ್ಮಕ್ಕೆ ಸರಿಯಾದ ವ್ಯಾಯಾಮ ನೀಡಿದರೆ, ರಕ್ತ ಪರಿಚಲನೆ ಸರಿಯಾಗಿ ಮುಖದ ಕಾಂತಿ ಹೆಚ್ಚುತ್ತದೆ. ಹಾಂ, ಸೆಲ್ಫಿà ತೆಗೆಯುವಾಗ ಫನ್ನಿ ಫೇಸ್, ಪೌಟ್ ಮಾಡ್ತೀರಲ್ಲ ಅದರಿಂದ ಕೂಡ ಚರ್ಮಕ್ಕೆ ವ್ಯಾಯಾಮ ಸಿಗುತ್ತದೆ. ನಗುವುದೂ ಒಂದು ವ್ಯಾಯಾಮ ಅಂತ ಗೊತ್ತಲ್ವ?
– ಚರ್ಮ ಡಲ್ ಆಗಿ ಕಾಣಿಸುತ್ತಿದ್ದರೆ, ಆವತ್ತು ಕೂದಲನ್ನು ಕಟ್ಟಬೇಡಿ. ಫ್ರೀ ಹೇರ್ ಅಥವಾ ಸಣ್ಣ ಕ್ಲಿಪ್‌ನಿಂದ ಹೇರ್‌ಸ್ಟೈಲ್ ಮಾಡಿ. ಆಗ ಗಮನ ಕೂದಲಿನ ಮೇಲಿರುತ್ತದೇ ಹೊರತು, ಯಾರೂ ನಿಮ್ಮ ಕಳಹೀನ ಚರ್ಮವನ್ನು ಗುರುತಿಸುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.