ನೆಲಕ್ಕೆ ನೀರುಣಿಸಿದ ಕೂಟೇಲು ಕಿಂಡಿ ಅಣೆಕಟ್ಟು
Team Udayavani, Dec 13, 2017, 4:09 PM IST
ನಿಡ್ಪಳ್ಳಿ: ಇಲ್ಲಿಯ ಕೂಟೇಲು ಎಂಬಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಸ್ಥಳೀಯರಿಗೆ ಪ್ರಯೋಜನಕಾರಿಯಾಗಿದೆ. ಮಲೆಗಾಲ ಕಳೆದು ಬೇಸಗೆ ಕಾಲಿಟ್ಟ ಕೂಡಲೇ ಜಮೀನು, ತೋಟ, ಗದ್ದೆಗಳಿಗೆ ನೀರು ಹಾಯಿಸಬೇಕಾಗುತ್ತದೆ. ಹರಿದು ಪೋಲಾಗುವ ನೀರನ್ನು ಕಟ್ಟೆ ಕಟ್ಟಿ ನಿಲ್ಲಿಸಿ, ಅಂತರ್ಜಲವನ್ನೂ ಹೆಚ್ಚಿಸಲು ಸಹಕಾರಿಯಾಗುವುದರಿಂದ ಎರಡು ತಿಂಗಳು ನೀರು ಹಾಯಿಸುವ ಶ್ರಮವೂ ಉಳಿತಾಯವಾಗುತ್ತದೆ.
ನಾಲ್ಕು ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿಡ್ಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಟೇಲು ಎಂಬಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟಿಗೆ ಸ್ಥಳೀಯರು ಹಲಗೆ ಹಾಕುತ್ತಿದ್ದು, ಸುಮಾರು ಅರ್ಧ ಕಿ.ಮೀ. ವರೆಗೆ ನೀರು ತುಂಬುತ್ತದೆ. ಕೆರೆ, ಬಾವಿಗಳು ತುಂಬಿ ನೀರಿನ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನೀಗಿಸುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಎರಡು ತಿಂಗಳು ನೀರಿನ ಸಮಸ್ಯೆ ಇಲ್ಲ
ಹರಿದು ಹೋಗುವ ನೀರನ್ನು ಅಣೆಕಟ್ಟು ಕಟ್ಟಿ ಸಂಗ್ರಹಿಸಿದರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಇನ್ನು ಎರಡು ತಿಂಗಳು ನೀರಿನ ಸಮಸ್ಯೆ ಇಲ್ಲದೆ ನಿಭಾಯಿಸಬಹುದು. ತಂಪಾದ ವಾತಾವರಣವೂ ಹಿತವೆನಿಸುತ್ತದೆ. ಎಲ್ಲ ಕಡೆಗಳಲ್ಲೂ ಇದನ್ನು ಅನುಸರಿಸಿದರೆ ಪ್ರಯೋಜನಕಾರಿಯಾದೀತು.
ಚಂದ್ರಶೇಖರ ಪ್ರಭು ಗೊಳಿತ್ತಡಿ
ಸ್ಥಳೀಯ ಕೃಷಿಕ
ಕೃಷಿಕರಿಗೆ ಲಾಭವಿದೆ
ಅನಾವಶ್ಯಕವಾಗಿ ಹರಿದು ಹೋಗುವ ನೀರನ್ನು ಕಿಂಡಿ ಅಣೆಕಟ್ಟು ಮೂಲಕ ನಿಲ್ಲಿಸಿದರೆ ಕೃಷಿಕರಿಗೆ ಲಾಭವಿದೆ. ಇವುಗಳ ಬಗ್ಗೆ ಸರಕಾರ ಮತ್ತು ಇಲಾಖೆಗಳು ಆದ್ಯತೆ ನೀಡಿದರೆ ಅಂತರ್ಜಲ ಮಟ್ಟ ಇನ್ನಷ್ಟು ಹೆಚ್ಚುತ್ತದೆ, ಬರಗಾಲದ ಛಾಯೆ ಆವರಿಸುವುದನ್ನು ತಡೆಯುತ್ತದೆ. ಅವಕಾಶ ಇದ್ದಲ್ಲೆಲ್ಲ ಗ್ರಾ.ಪಂ.ಗಳು ಕಿಂಡಿ ಅಣೆಕಟ್ಟು ನಿರ್ಮಿಸಲು ಮುಂದಾಗಬೇಕು.
– ಸುಮತಿ ಗಣೇಶ್, ಆನಾಜೆ
ಅಧ್ಯಕ್ಷರು, ನಿಡ್ಪಳ್ಳಿ ಗ್ರಾಮ ಪಂಚಾಯತ್
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.