ಅರ್ಧ ದಿನ ಸಂಚರಿಸುವ ಬಸ್‌ನಲ್ಲಿ 2 ಕೆ.ಜಿ ಧೂಳು!
Team Udayavani, Dec 14, 2017, 12:56 PM IST
ಬೆಂಗಳೂರು: “ಬಿಎಂಟಿಸಿ ಬಸ್ ಒಂದು ನಗರದಲ್ಲಿ ಕೇವಲ ಅರ್ಧ ದಿನ ಸಂಚರಿಸಿದರೂ ಸಾಕು ಅದರಲ್ಲಿ ಎರಡು ಕೆ.ಜಿಯಷ್ಟು ಧೂಳು ಸಂಗ್ರಹವಾಗುತ್ತಿದೆ. ಇದಕ್ಕೆಲ್ಲಾ ಮೆಟ್ರೋ, ಬಿಡಿಎ, ಬಿಬಿಎಂಪಿ ಹಾಗೂ ಖಾಸಗಿಯವರು ಕೈಗೊಳ್ಳುವ ಕಾಮಗಾರಿಗಳು ಕಾರಣ. ಹೀಗೆಂದು ಆರೋಪಿಸಿದ್ದು ಯಾವುದೋ ಸಂಘಟನೆಯವರೋ ಅಥವಾ ಪ್ರತಿಪಕ್ಷದವರೋ, ಇಲ್ಲಾ ಬಿಎಂಟಿಸಿ ಪ್ರಯಾಣಿಕರೋ ಅಲ್ಲ. ಸ್ವತಃ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು.
“ವಿಕಾಸಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಆಯ್ದ ಬಸ್ಸುಗಳಲ್ಲಿ ತಪಾಸಣೆ ನಡೆಸಿದಾಗ ಅರ್ಧ ದಿನ ಸಂಚರಿಸುವ ಒಂದು ಬಸ್‌ನಲ್ಲಿ ಕನಿಷ್ಠ 2 ಕೆ.ಜಿ ಧೂಳು ಸಂಗ್ರಹವಾಗಿರುತ್ತದೆ. ನಗರದಲ್ಲಿ ಮೆಟ್ರೋ, ಬಿಡಿಎ, ಬಿಬಿಎಂಪಿ ಹಾಗೂ ಖಾಸಗಿವರು ಕೈಗೊಳ್ಳುವ ನಿರ್ಮಾಣ ಕಾಮಗಾರಿಗಳು ಇದಕ್ಕೆ ಕಾರಣ ಎಂಬ ಅಂಶವನ್ನು ಅಧಿಕಾರಿಗಳು ಗುರುತಿಸಿದ್ದಾರೆ,’ ಎಂದರು.
“ಅರ್ಧ ದಿನ ಸಂಚರಿಸುವ ಬಸ್‌ನಲ್ಲೇ 2 ಕೆ.ಜಿಯಷ್ಟು ಧೂಳು ಸಂಗ್ರಹವಾದರೆ, ಇನ್ನು ಇಡೀ ದಿನ ಸಂಚರಿಸುವ ಬಸ್‌ಗಳಲ್ಲಿ ಎಷ್ಟು ಧೂಳು ಸಂಗ್ರಹವಾಗಬಹುದು? ಎಂದು ನೀವೇ ಊಹಿಸಿಕೊಳ್ಳಿ,’ ಎಂದ ಸಚಿವರು, ನಗರದಲ್ಲಿ ವಿವಿಧ ಕಾಮಗಾರಿಗಳಿಂದ ಧೂಳಿನ ಪ್ರಮಾಣ ಹೆಚ್ಚಾಗಿರುವುದನ್ನು ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಹಾಗಾಗಿ, ನಿರ್ಮಾಣ ಕಾಮಗಾರಿಗಳ ವೇಳೆ ಕಾನೂನು ರೀತಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚು ಗಮನ ನೀಡುವಂತೆ ಮೆಟ್ರೋ, ಬಿಡಿಎ, ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಇತರ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,’ ಎಂದು ಮಾಹಿತಿ ನೀಡಿದರು.
ಅರ್ಥ ಮಾಡಿಕೊಳ್ಳದಿದ್ದರೆ ಕ್ರಮ ಖಂಡಿತ: “ಅದೇ ರೀತಿ ಸಾರ್ವಜನಿಕರು ನಿರ್ಮಾಣ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲೂ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಮರಳು, ಇಟ್ಟಿಗೆ ಮತ್ತಿತರ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲೇ ಅನ್‌ಲೋಡ್ ಮಾಡುವುದು,
ಕಾಮಗಾರಿ ಮುಗಿದ ನಂತರ ಅವಶೇಷಗಳನ್ನು ರಸ್ತೆ ಬದಿ ಬಿಸಾಕುವುದನ್ನು ಬಿಡಬೇಕು ಎಂದು ಮನವಿ ಮಾಡಲಾಗುವುದು. ನಂತರವೂ ಅರ್ಥ ಮಾಡಿಕೊಳ್ಳದಿದ್ದರೆ ಕಾನೂನಿನ ಪರಿಮಿತಿಯೊಳಗೆ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು,’ ಎಂದು ಸಚಿವ ರೇವಣ್ಣ ತಿಳಿಸಿದರು.
“ವಿರಳ ಸಂಚಾರ ದಿನ’ ರಿಯಾಯಿತಿ ದರ: “ಸಂಚಾರ ದಟ್ಟಣೆ ಕಡಿಮೆಗೊಳಿಸಿ ಮಾಲಿನ್ಯ ತಡೆಯಲು ಖಾಸಗಿ ವಾಹನಗಳ ಬದಲಿಗೆ ಸಮೂಹ ಸಾರಿಗೆ ಬಳಸುವಂತೆ ಸಾರ್ವಜನಿಕರಿಗೆ ಉತ್ತೇಜನ ನೀಡಲು 2018ರ ಫೆಬ್ರವರಿ ತಿಂಗಳಿಂದ ಪ್ರತಿ 2ನೇ ಭಾನುವಾರ “ವಿರಳ ಸಂಚಾರ ದಿನ’ ನಡೆಸಲು ಉದ್ದೇಶಿಸಲಾಗಿದೆ.
ಈ ದಿನದಂದು ಬಿಎಂಟಿಸಿ ಬಸ್ ಟಿಕೆಟ್ ದರ ಹಾಗೂ ಬಸ್‌ಪಾಸ್ ದರದಲ್ಲಿ ರಿಯಾಯಿತಿ ನೀಡಲು ಇಲಾಖೆ ನಿರ್ಧರಿಸಿದೆ. ಎಷ್ಟು ದರ ಕಡಿಮೆ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಅದೇ ರೀತಿ ಮೆಟ್ರೋ ರೈಲಿನ ಪ್ರಯಾಣ ದರವನ್ನೂ ಕಡಿಮೆ ಮಾಡಲು ಮನವಿ ಮಾಡಲಾಗಿದೆ ಎಂದು,’ ಸಚಿವ ಎಚ್.ಎಂ.ರೇವಣ್ಣ ಇದೇ ವೇಳೆ ತಿಳಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಮಾರ್ಕೊಪೊಲೊ ಬಸ್ ಖರೀದಿ ಹಗರಣದ “ಫೈಲ್ ರೀಓಪನ್’ ಮಾಡಿಸಿ ತನಿಖೆ ನಡೆಸುತ್ತೇನೆ. ಈ ಸಂಬಂಧ ಸಂಪೂರ್ಣ ವರದಿ ತರಿಸಿಕೊಳ್ಳುತ್ತೇನೆ. ಹಗರಣದಲ್ಲಿ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳು ಭಾಗಿಯಾಗಿದ್ದರೆ, ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.
-ಎಚ್.ಎಂ.ರೇವಣ್ಣ, ಸಾರಿಗೆ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್ ಕೃಷಿ
Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!
Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಫರ್ಹಾನ್ ಸೆರೆ
Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.