ರೋಮ್‌ನಲ್ಲಿ ಕೊಹ್ಲಿ-ಅನುಷ್ಕಾ ಮಧುಚಂದ್ರ
Team Udayavani, Dec 14, 2017, 1:05 PM IST
ನವದೆಹಲಿ: ಹಸಮಣೆಗೆ ಏರಿ ಸತಿಪತಿಗಳಾದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಈಗ ಮಧುಚಂದ್ರಕ್ಕಾಗಿ ಇಟಲಿಯ ರೋಮ್ ನಗರಕ್ಕೆ ತೆರಳಿದ್ದಾರೆ. ಡಿಸೆಂಬರ್ 11ರಂದು ಇಟಲಿಯಲ್ಲಿ ಇವರಿಬ್ಬರು ಮದುವೆಯಾಗಿದ್ದರು. ಒಂದು ವಾರದ ಹನಿಮೂನ್ ಬಳಿಕ ಇವರಿಬ್ಬರು ಭಾರತಕ್ಕೆ ಆಗಮಿಸಲಿದ್ದಾರೆ. ಇವರ ಕುಟುಂಬ ವರ್ಗದವರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಡಿ.21ರಂದು ದಿಲ್ಲಿಯಲ್ಲಿ ಹಾಗೂ ಡಿ.26ರಂದು ಮುಂಬೈನಲ್ಲಿ ಪಾರ್ಟಿ ನಡೆಯಲಿದೆ. ಇದರಲ್ಲಿ ಹಾಲಿ, ಮಾಜಿ ಕ್ರಿಕೆಟಿಗರು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಹಲವಾರು ಮಂದಿ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಕೊಹ್ಲಿ ಅನುಷ್ಕಾಗೆ ಕಾಂಡೋಮ್ ಕಂಪನಿ ಶುಭಾಶಯ
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ವಿವಾಹಕ್ಕೆ ಹಲವಾರು ಮಂದಿ ಗಣ್ಯರು ಶುಭಾಶಯ ಕೋರಿದ್ದಾರೆ. ಇದರಲ್ಲಿ ವಿಶ್ವದ ವಿವಿಧ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರೂ ಕೂಡ ಸೇರಿಕೊಂಡಿದ್ದಾರೆ. ಆದರೆ ಈಗ ಶುಭಾಶಯ ಕೋರಿರುವುದು ಅವರಿವರಲ್ಲ. ಡ್ಯುರೆಕ್ಸ್ ಕಾಂಡೋಮ್ ಕಂಪನಿ..!, “ಕೊಹ್ಲಿ ಅನುಷ್ಕಾ ನಿಮ್ಮಿಬ್ಬರ ನಡುವೆ ಡ್ಯುರೆಕ್ಸ್ ಹೊರತುಪಡಿಸಿ ಮತ್ಯಾರು ಇರದಿರಲಿ’ ಎಂದು ಟ್ವೀಟ್ ಮಾಡಿದೆ. ಅಷ್ಟೇ ಅಲ್ಲ ಇದನ್ನು ಫೇಸ್‌ಬುಕ್ ತನ್ನ ಅಧಿಕೃತ ಪುಟದಲ್ಲೂ ಪ್ರಕಟಿಸಿದೆ. ಡ್ಯುರೆಕ್ಸ್ ಆಲೋಚನೆಯನ್ನು ಕೆಲವರು ಸ್ವಾಗತಿಸಿದ್ದಾರೆ. ಇನ್ನೂ ಕೆಲವರು ಡ್ಯುರೆಕ್ಸ್ ಕಂಪನಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಟ್ವೀಟ್ ನ್ಯಾಯಸಮ್ಮತವಾಗಿಲ್ಲ. ಅವರೇನು ಮಕ್ಕಳನ್ನು ಪಡೆಯಬಾರಾದಾ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಈ ರೀತಿ ಕಾಮೆಂಟ್ ಪ್ರಕಟಿಸಬಹುದಾ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.