ದುಬೈ ಬ್ಯಾಡ್ಮಿಂಟನ್: ಸೆಮೀಸ್‌ಗೇರಿದ ಸಿಂಧು
Team Udayavani, Dec 15, 2017, 6:55 AM IST
ದುಬೈ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ದುಬೈ ವಿಶ್ವ ಸೂಪರ್ ಸೀರಿಸ್ ಫೈನಲ್ಸ್‌ನ ಸೆಮಿಫೈನಲ್ ತಲುಪಿದ್ದಾರೆ. ಇವರು “ಎ’ ಗುಂಪಿನ 2ನೇ ಪಂದ್ಯದಲ್ಲಿ ಜಪಾನ್‌ನ ಸಯಾಕ ಸ್ಯಾಟೊ ಅವರನ್ನು 21-13, 21-12 ಗೇಮ್‌ಗಳ ಅಂತರದಿಂದ ಸೋಲಿಸಿದರು. ಎರಡು ಗೇಮ್‌ನಲ್ಲೂ ಸಿಂಧು ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಎದುರಾಳಿಗೆ ಎಲ್ಲೂ ಚೇತರಿಕೆ ಕಾಣಲು ಅವರು ಅವಕಾಶವನ್ನೇ ನೀಡಲೇ ಇಲ್ಲ. ಪರಿಣಾಮ ಪಂದ್ಯವನ್ನು ಸುಲಭವಾಗಿ ನೇರ ಗೇಮ್‌ನಿಂದ ಗೆದ್ದುಕೊಂಡರು.
ಶ್ರೀಕಾಂತ್ ಔಟ್: ಕಿದಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ಗುಂಪು “ಬಿ’ ವಿಭಾಗದ ಎರಡನೇ ಪಂದ್ಯದಲ್ಲೂ ಸೋಲುಂಡರು. ಈ ಮೂಲಕ ಕೂಟದಿಂದ ಅಧಿಕೃತವಾಗಿ ಹೊರಬಿದ್ದರು. ಇವರನ್ನು ತೈವಾನ್ ಆಟಗಾರ ಚೊವ್ ಟಿನ್ ಚೆನ್ 21-18, 21-18 ಗೇಮ್‌ಗಳ ಅಂತರದಿಂದ ಸೋಲಿಸಿದರು. ಮೊದಲ ಗೇಮ್‌ನಲ್ಲಿ ಶ್ರೀಕಾಂತ್ ಬಿರುಸಿನ ಹೋರಾಟ ಪ್ರದರ್ಶಿಸಿದರು. ಆದರೂ 18-21ರಿಂದ ಎದುರಾಳಿಗೆ ಶರಣಾದರು. 1-0 ಅಂತರದ ಹಿನ್ನಡೆ ಅನುಭವಿಸಿದರು. ಎರಡನೇ ಗೇಮ್‌ನಲ್ಲೂ ಶ್ರೀಕಾಂತ್ ಗೆಲುವಿಗಾಗಿ ಇನ್ನಿಲ್ಲದ ಹೋರಾಟ ನಡೆಸಿದರು. ಅಂತಿಮವಾಗಿ 18-21ರಿಂದ ತಲೆ ಭಾಗಿದರು. 2-0 ನೇರ ಸೆಟ್‌ಗಳ ಅಂತರದಿಂದ ಶರಣಾದರು. ಶ್ರೀಕಾಂತ್ ತಮ್ಮ ಗುಂಪಿನ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ವಿರುದ್ಧ ಸೋಲುಕಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.