ನಾಳೆ ಪುತ್ತೂರು ತಾ| 17ನೇ ಕನ್ನಡ ಸಾಹಿತ್ಯ ಸಮ್ಮೇಳನ
Team Udayavani, Dec 15, 2017, 10:19 AM IST
ಕಡಬ: ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕಡಬದ ಸರಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಡಿ. 16ರಂದು ಜರಗಲಿರುವ ಪುತ್ತೂರು ತಾಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ಸಿದ್ಧತೆಗಳು ನಡೆಯುತ್ತಿವೆ.
ಈಗಾಗಲೇ ತಾಲೂಕಿನೆಲ್ಲೆಡೆ ಸಮ್ಮೇಳನದ ಆಮಂತ್ರಣ ಪತ್ರಿಕೆ ವಿತರಣೆ ನಡೆಯುತ್ತಿದೆ. ವಿಶೇಷವಾಗಿ ಕಡಬ ಪರಿಸರದಲ್ಲಿ ವಿವಿಧ ತಂಡಗಳಲ್ಲಿ ಬಹುತೇಕ ಮನೆ ಮನೆಗಳಿಗೆ, ಶಾಲಾ ಕಾಲೇಜುಗಳಿಗೆ, ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಆಮಂತ್ರಣ ಪತ್ರಿಕೆ ವಿತರಿಸಲಾಗಿದೆ.
ಕಡಬ ಪೇಟೆಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಅಧ್ಯಕ್ಷ ಮಹಮ್ಮದ್ ಕುಂಞೆ, ಕಾರ್ಯದರ್ಶಿ ವಿಶ್ವನಾಥ ರೈ ಪೆರ್ಲ, ಉಪಾಧ್ಯಕ್ಷರಾದ ಸಾಂತಪ್ಪ ಗೌಡ ಪಿಜಕ್ಕಳ, ಎಸ್. ಅಬ್ದುಲ್ ಖಾದರ್, ಕೋಶಾಧಿಕಾರಿ ಗಣೇಶ್ ಕೈಕುರೆ, ಸತೀಶ್ ನಾಯಕ್ ಶಾರದಾಸದನ, ಫಝಲ್ ಕೋಡಿಂಬಾಳ, ಸತೀಶ್ ನಾೖಕ್ ಮೇಲಿನಮನೆ ಮೊದಲಾದವರ ನೇತೃತ್ವದಲ್ಲಿ ಕಡಬ ಪೇಟೆಯ ಪ್ರತಿ ಅಂಗಡಿಗಳಿಗೆ ಭೇಟಿ ನೀಡಿ ಆಮಂತ್ರಣ ಪತ್ರಿಕೆ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು.
ಸಮ್ಮೇಳನ ಜರಗಲಿರುವ ಪ.ಪೂ. ಕಾಲೇಜಿನ ಕಟ್ಟಡಗಳು ಹೊಸದಾಗಿ ಸುಣ್ಣಬಣ್ಣ ಬಳಿದುಕೊಂಡು ಸಿಂಗಾರಗೊಂಡಿವೆ. ವಿದ್ಯಾರ್ಥಿಗಳು ಕಾಲೇಜು ಆವರಣವನ್ನು ತೋರಣಗಳಿಂದ ಸಿಂಗರಿಸಿದ್ದಾರೆ. ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯ ಪ್ರೇಮಿಗಳ ಹೊಟ್ಟೆಯ ಹಸಿವನ್ನು ತಣಿಸಲು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ (ಭೋಜನ) ಹಾಗೂ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ (ಉಪಾಹಾರ)ದ ವತಿಯಿಂದ ನೆರವು ಸಿಗಲಿದೆ.
ಅದ್ದೂರಿಯ ಮೆರವಣಿಗೆಗೆ ತಯಾರಿ
ಸಮ್ಮೇಳನದ ಪ್ರಯುಕ್ತ ಬೆಳಗ್ಗೆ ನಡೆಯುವ ಕನ್ನಡ ಭುವನೇಶ್ವರಿಯ ದಿಬ್ಬಣವನ್ನು ಅದ್ದೂರಿಯಿಂದ ನಡೆಸಲು ಮೆರವಣಿಗೆ ಸಮಿತಿಯ ಸಂಚಾಲಕ ಸೀತಾರಾಮ ಗೌಡ ಪೊಸವಳಿಕೆ ಅವರ ನೇತೃತ್ವದಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ. ಮೆರವಣಿಗೆಗೆ 2 ತೆರೆದ ವಾಹನಗಳನ್ನು ಬಳಸಲು ತಯಾರಿ ನಡೆದಿದ್ದು, ಒಂದು ವಾಹನದಲ್ಲಿ ಸಮ್ಮೇಳನಾಧ್ಯಕ್ಷರು ಇದ್ದರೆ ಹಾಗೂ ಇನ್ನೊಂದು ವಾಹನದಲ್ಲಿ ಕನ್ನಡ ಭುವನೇಶ್ವರಿಯ ಬೃಹತ್ ಚಿತ್ರವನ್ನು ಇರಿಸಿ ಕಡಬದ ಸೈಂಟ್ ಜೋಕಿಮ್ಸ್ ಶಿಕ್ಷಣ ಸಂಸ್ಥೆಯ ಬಳಿಯಿಂದ ಮುಖ್ಯರಸ್ತೆಯಲ್ಲಿ ಸಾಗಿ ಸಮ್ಮೇಳನ ನಡೆಯುವ ಸರಕಾರಿ ಪ.ಪೂ. ಕಾಲೇಜಿಗೆ ಸಾಗಲಾಗುವುದು. ಮೆರವಣಿಗೆಯಲ್ಲಿ ಬೃಹತ್ ಬೊಂಬೆಗಳು ಹಾಗೂ ಕೀಲುಕುದುರೆಗಳ ಆಕರ್ಷಕ ನೃತ್ಯ, ಸ್ತಬ್ಧಚಿತ್ರಗಳು, ಪರಿಸರದ 6 ಶಾಲೆಗಳ ವಿದ್ಯಾರ್ಥಿಗಳ ಬ್ಯಾಂಡ್ ವಾದ್ಯ ತಂಡ, ಚೆಂಡೆ ವಾದನ ಗಮನ ಸೆಳೆಯಲಿದೆ.
ವಿಶಿಷ್ಟ ಕವಿಗೋಷ್ಠಿ
ಸಮ್ಮೇಳನದ ಅಂಗವಾಗಿ ಹಿರಿಯ ಕವಿ ಟಿ.ಜಿ. ಮುಡೂರು ಅವರ ಅಧ್ಯಕ್ಷತೆಯಲ್ಲಿ ಜರಗಲಿರುವ ಕವಿಗೋಷ್ಠಿ ಎಲ್ಲ ವಯೋಮಾನದ ಕವಿಗಳ ಭಾಗವಹಿ ಸುವಿಕೆಯಿಂದ ವಿಶಿಷ್ಟವೆನಿಸಲಿದೆ. ಪ್ರಾಥಮಿಕ, ಪ್ರೌಢ, ಪ.ಪೂ., ಪದವಿ ವಿದ್ಯಾರ್ಥಿಗಳು, ಶಿಕ್ಷಕ ತರಬೇತಿಯ ಪ್ರಶಿಕ್ಷಣಾರ್ಥಿಗಳು ಕವಿಗೋಷ್ಠಿಯಲ್ಲಿ ತಮ್ಮ ಕವಿತೆಗಳನ್ನು ವಾಚಿಸಲಿದ್ದಾರೆ. ಗೋಷ್ಠಿಯಲ್ಲಿ ಭಾಗವಹಿಸುವ 12 ಮಂದಿ ಕವಿಗಳ ಪೈಕಿ 10 ಮಂದಿ ಮಹಿಳಾ ಕವಿಗಳು ಭಾಗವಹಿಸುತ್ತಿರುವುದು ಇನ್ನೊಂದು ವಿಶೇಷ.
ಪುಸ್ತಕ ಮತ್ತು ವಸ್ತು ಪ್ರದರ್ಶನ
ಸಮ್ಮೇಳನದ ಸಭಾಂಗಣದ ಆಸುಪಾಸಿನಲ್ಲಿ ಪುಸ್ತಕ ಹಾಗೂ ವಸ್ತುಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮರ್ದಾಳದ ಸೈಂಟ್ ಮೇರಿಸ್ ಪ್ರೌಢಶಾಲೆಯ ಶಿಕ್ಷಕ ಸುಬ್ರಹ್ಮಣ್ಯ ಗೌಡ ಅವರು ಸಂಗ್ರಹಿಸಿರುವ ತುಳುನಾಡ ಹಳೆಯ ವಸ್ತುಗಳ
ಅಪೂರ್ವ ಸಂಗ್ರಹ, ಕುಟ್ರಾಪ್ಪಾಡಿಯ ಕೇಪು ಶಾಲೆಯ ಮುಖ್ಯಶಿಕ್ಷಕ ಹರಿಪ್ರಸಾದ ಉಪಾಧ್ಯಾಯ ಅವರ ಕಲಾ ಪ್ರದರ್ಶನ, ವಿವಿಧ ಪುಸ್ತಕ ಮಳಿಗೆಗಳು ಹಾಗೂ ವ್ಯಾಪಾರಿ ಮಳಿಗೆಗಳು ಸಾಹಿತ್ಯಾಸಕ್ತರನ್ನು ಆಕರ್ಷಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.