ನೈಜ ಘಟನೆಯೊಂದರ ಡಿಂಗ್‌ಡಾಂಗ್ ಸ್ಟೋರಿ
Team Udayavani, Dec 15, 2017, 11:23 AM IST
ಯಾವತ್ತೋ ನಡೆದ ನೈಜ ಘಟನೆಗಳು ಇನ್ಯಾವತ್ತೋ ಸಿನಿಮಾಗಳಾಗುತ್ತವೆ. ಈಗ ಅದೇ ರೀತಿ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ. ಅದು “ಮಾಂಜ್ರಾ’. ಬೆಳಗಾವಿಯ ಬೊಂಬಗ್ರ ಎನ್ನುವಲ್ಲಿ ನಡೆದ ಘಟನೆಯೊಂದನ್ನಿಟ್ಟು ಕೊಂಡು ಮುತ್ತುರಾಜ್ ಎನ್ನುವವರು “ಮಾಂಜ್ರಾ’ ಎನ್ನುವ ಸಿನಿಮಾ ಮಾಡಿದ್ದಾರೆ. ಮಾಂಜ್ರಾ ಎನ್ನುವುದು ಬೀದರ್‌ನಲ್ಲಿ ಹರಿಯುವ ನದಿ. ಆ ನದಿಯ ಹೆಸರನ್ನಿಟ್ಟುಕೊಂಡು ಕನ್ನಡ ಹಾಗೂ ಮರಾಠಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ದುರಂತ ಲವ್‌ಸ್ಟೋರಿ. ಚಿತ್ರದ ಕಥಾನಾಯಕಿ ಈಗಿಲ್ಲ. ಆದರೆ, ನಾಯಕ ಮಾನಸಿಕ ಅಸ್ವಸ್ಥ ಆಗಿ ಮುಂಬೈನಲ್ಲಿದ್ದಾರಂತೆ. ಆ ಕಥೆಯನ್ನಿಟ್ಟುಕೊಂಡು ಅದಕ್ಕೆ ಸಿನಿಮಾ ಟಚ್ ಕೊಟ್ಟು “ಮಾಂಜ್ರಾ’ ಮಾಡಿದ್ದಾರೆ.
ಮುತ್ತುರಾಜ್ 8ನೇ ಕ್ಲಾಸಿನಲ್ಲಿದ್ದಾಗ ಪತ್ರಿಕೆಯೊಂದರಲ್ಲಿ ಬೆಳಗಾವಿಯಲ್ಲಿ ನಡೆದ ಘಟನೆಯ ಸುದ್ದಿ ಬಂದಿತ್ತಂತೆ. ಆಗಲೇ ಇದನ್ನು ಸಿನಿಮಾ ಮಾಡಬೇಕೆಂದುಕೊಂಡಿದ್ದರಂತೆ ಮುತ್ತುರಾಜ್. ಅದರಂತೆ ಈಗ ಸಿನಿಮಾ ಮಾಡಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಮೂಲಕಥೆಯ ನಾಯಕಿಯ ಮನೆಯಲ್ಲೇ ಮಾಡಿದ್ದಾರಂತೆ. ಆದರೆ ತಮ್ಮ ಮಗಳ ಕಥೆಯನ್ನೇ ಸಿನಿಮಾ ಮಾಡುತ್ತಿದ್ದಾರೆಂದು ತಿಳಿದು ನಂತರ ಚಿತ್ರೀಕರಣಕ್ಕೆ ಸಮಸ್ಯೆಯಾಯಿತಂತೆ.
ಚಿತ್ರವು ಕನ್ನಡ ಹಾಗೂ ಮರಾಠಿಯಲ್ಲಿ ತಯಾರಾಗುತ್ತಿದ್ದು, ಮರಾಠಿ ಸಂಭಾಷಣೆ ಚಿತ್ರದಲ್ಲಿದ್ದು, ಕನ್ನಡ ಸಬ್‌ಟೈಟಲ್‌ನಲ್ಲಿ ಅದು ಬರಲಿದೆಯಂತೆ. ಚಿತ್ರಕ್ಕೆ ನಿರ್ದೇಶಕರು “ಡಿಂಗ್‌ಡಾಂಗ್ ಸ್ಟೋರಿ’ ಎಂಬ ಟ್ಯಾಗ್‌ಲೈನ್ ಇದೆ. ಚಿತ್ರವನ್ನು ರವಿ ಅರ್ಜುನ್ ನಿರ್ಮಿಸಿದ್ದಾರೆ. ಆರಂಭದಲ್ಲಿ ಸುಮ್ಮನೆ ಕಥೆ ಕೇಳಿದರಾಯ್ತು ಎಂದುಕೊಂಡು ನಿರ್ದೇಶಕರಲ್ಲಿ ಮಾತನಾಡಿದಾಗ, ಕಥೆ ಇಷ್ಟವಾಗಿ ಸಿನಿಮಾ ಮಾಡಲು ನಿರ್ಧರಿಸಿದರಂತೆ. ಚಿತ್ರದಲ್ಲಿ ರಂಜಿತ್ ಸಿಂಗ್ ನಾಯಕರಾಗಿ ನಟಿಸಿದ್ದಾರೆ. ಈ ಹಿಂದೆ ತಮಿಳು ಸಿನಿಮಾವೊಂದರ ಆಡಿಷನ್‌ನಲ್ಲಿ ರಂಜಿತ್ ಅವರ ನಟನೆ ನೋಡಿದ ನಿರ್ದೇಶಕರು ಅವರನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿದರಂತೆ. ಚಿತ್ರದಲ್ಲಿ ಅಪೂರ್ವ ನಾಯಕಿ. ಚಿತ್ರದಲ್ಲಿ ಅವರ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆಯಂತೆ. ಮರಾಠಿ ಕುಟುಂಬದಿಂದ ಬಂದ ಅವರಿಗೆ ಚಿತ್ರದಲ್ಲೂ ಮರಾಠಿ ಮಾತನಾಡುವ ಅವಕಾಶ ಸಿಕ್ಕಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.